August 2021

ಕ್ರಿಕೆಟ್ ಗೆ ವಿದಾಯ ಹೇಳಿದ ಸ್ಟುವರ್ಟ್ ಬಿನ್ನಿ

ನವದೆಹಲಿ: ಟೀಂ ಇಂಡಿಯಾದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಇಂದು ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಹ್ಯಾಮಿಲ್ಟನ್​ನಲ್ಲಿ ನಡೆದಿದ್ದ ನ್ಯೂಜಿಲೆಂಡ್​ ವಿರುದ್ಧ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ ಜೀವನಕ್ಕೆ ಪಾದಾರ್ಪಣೆ ಮಾಡಿದ್ದ ಕನ್ನಡಿಗ ಸ್ಟುವರ್ಟ್​ ಬಿನ್ನಿ, ಏಕದಿನ ಪಂದ್ಯದಲ್ಲಿ 230 ರನ್ ಹಾಗೂ 20 ವಿಕೆಟ್​ಗಳನ್ನು ಕಬಳಿಸಿದ್ದಾರೆ. 6 ಟೆಸ್ಟ್, 14 ಏಕದಿನ ಮತ್ತು 3 ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 37 ವರ್ಷದ ಅವರು ಕೊನೆಯಬಾರಿಗೆ 2016 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ […]

ಕ್ರಿಕೆಟ್ ಗೆ ವಿದಾಯ ಹೇಳಿದ ಸ್ಟುವರ್ಟ್ ಬಿನ್ನಿ Read More »

ತುಮಕೂರು : ಮನೆಯಲ್ಲೇ ವೇಶ್ಯಾವಾಟಿಕೆ: ಐವರ ಪೊಲೀಸ್ ವಶಕ್ಕೆ

ತುಮಕೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿರುವ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ. ಕೆಲವು ದಿನಗಳಿಂದ ಮನೆಯಲ್ಲಿ ವೇಶ್ಯವಾಟಿಕೆ ನಡೆಸಲಾಗುತ್ತಿತ್ತು ಎನ್ನುವ ಖಚಿತ ಮಾಹಿತಿ ಮೇರೆಗೆ ಚಿಕ್ಕನಾಯಕನಹಳ್ಳಿ ಪೋಲಿಸರು ದಾಳಿ ನಡೆಸಿದ್ದಾರೆ. ವೇಶ್ಯವಾಟಿಕೆಯಲ್ಲಿ ತೊಡಗಿದ್ದರು ಎನ್ನಲಾದ ಮೂವರು ಮಹಿಳೆಯರು ಸೇರಿ ಒಟ್ಟು ಐವರನ್ನು ಸದ್ಯ ಬಂಧಿಸಲಾಗಿದೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ತುಮಕೂರು : ಮನೆಯಲ್ಲೇ ವೇಶ್ಯಾವಾಟಿಕೆ: ಐವರ ಪೊಲೀಸ್ ವಶಕ್ಕೆ Read More »

ಬೆಂಗಳೂರು : ನಟಿ ಸೋನಿಯಾ ಮನೆ ಮೇಲೆ ದಾಳಿ 40 ಗ್ರಾಂ ಗಾಂಜಾ ವಶಕ್ಕೆ

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ, ಸೆಲೆಬ್ರಿಟಿ ಮಾಡೆಲ್ ಸೋನಿಯಾ ಅಗರ್ವಾಲ್ ಮನೆಯ ಮೇಲೆ ಡಿಜೆ ಹಳ್ಳಿ ಇನ್ಸ್‍ಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು 40 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ದಾಳಿಯ ಸಮಯದಲ್ಲಿ ಸೋನಿಯಾ ಅಗರ್ವಾಲ್ ಮನೆಯಲ್ಲಿ ಇರಲಿಲ್ಲ. ಭಾನವಾರ ರಾತ್ರಿ ಪಾರ್ಟಿಗೆ ಹೋಗಿದ್ದ ಆಕೆ ಮನೆಗೆ ಬಂದಿರಲಿಲ್ಲ. ದಾಳಿ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಆಕೆಗೆ ಕರೆ ಮಾಡಿದ್ದಾರೆ. ಈ ವೇಳೆ ಆಕೆ ಕರೆಯನ್ನು ಸ್ವೀಕರಿಸಲಿಲ್ಲ. ಆ ಬಳಿಕ ಆಕೆಯ ತಂದೆಯಿಂದ ಫೋನ್ ಕರೆ ಮಾಡಿಸಿದ್ದಾರೆ.

ಬೆಂಗಳೂರು : ನಟಿ ಸೋನಿಯಾ ಮನೆ ಮೇಲೆ ದಾಳಿ 40 ಗ್ರಾಂ ಗಾಂಜಾ ವಶಕ್ಕೆ Read More »

ಜಾವೆಲಿನ್ ಎಸೆತ: ಭಾರತಕ್ಕೆ ಅವಳಿ ಪದಕ

ಟೋಕಿಯೋ: ಪ್ಯಾರಾಲಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್ ಎಸೆತದಲ್ಲಿ ಭಾರತದ ಕ್ರೀಡಾಪಟುಗಳಾದ ದೇವೇಂದ್ರ ಝಝಾರಿಯಾ ಬೆಳ್ಳಿ ಪದಕ ಮತ್ತು ಸುಂದರ್ ಸಿಂಗ್ ಕಂಚಿನ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಅವಳಿ ಪದಕ ಗೆದ್ದಿದ್ದಾರೆ. ಈ ಹಿಂದೆ ಎರಡು ಬಾರಿ ಪ್ಯಾರಾಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದ ದೇವೇಂದ್ರ ಝಝಾರಿಯಾ ಈ ಬಾರಿ 64.35 ಮೀಟರ್ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದರು. ಇದಲ್ಲದೆ ತಮ್ಮ ವೈಯಕ್ತಿಕ ಅತ್ಯುನ್ನತ ಸಾಧನೆಗೆ ಪಾತ್ರರಾದರು. ಝಝಾರಿಯಾ ಬೆಳ್ಳಿ ಗೆದ್ದರೆ ಇದೇ ಸ್ಪರ್ಧೆಯಲ್ಲಿ ಭಾರತದ ಇನ್ನೋರ್ವ

ಜಾವೆಲಿನ್ ಎಸೆತ: ಭಾರತಕ್ಕೆ ಅವಳಿ ಪದಕ Read More »

ಟೋಕಿಯೋ ಪ್ಯಾರಾಲಂಪಿಕ್| ಶೂಟಿಂಗ್ ನಲ್ಲಿ ಚಿನ್ನ ಗೆದ್ದ ಅವನಿ ಲೆಕೇರಾ|

ಟೋಕಿಯೊ ಪ್ಯಾರಾಲಿಂಪಿಕ್​ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ದಕ್ಕಿದೆ. ಮಹಿಳೆಯರ ಶೂಟಿಂಗ್ ಸ್ಪರ್ಧೆಯಲ್ಲಿ ಗೆದ್ದು ಅವನಿ ಲೆಕೇರಾ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಅವನಿ ಶೂಟಿಂಗ್​ ಫೈನಲ್​ ಪಂದ್ಯದಲ್ಲಿ 249.6 ಸ್ಕೋರ್ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 10 ಮೀಟರ್​ನ ಏರ್​ ರೈಫಲ್ ಶೂಟಿಂಗ್​ನಲ್ಲಿ ಚಿನ್ನ ಗೆದ್ದಿರುವ ಅವನಿ ಇಂದು ಬೆಳಗ್ಗೆ ರೌಂಡ್ 2 ನಲ್ಲಿ ಫೈನಲ್​ಗೆ ಆಯ್ಕೆಯಾಗಿದ್ದರು.

ಟೋಕಿಯೋ ಪ್ಯಾರಾಲಂಪಿಕ್| ಶೂಟಿಂಗ್ ನಲ್ಲಿ ಚಿನ್ನ ಗೆದ್ದ ಅವನಿ ಲೆಕೇರಾ| Read More »

ಕೃಷ್ಣಾ ಎಂದರೆ ಕಷ್ಟವೊಂದಿಷ್ಟಿಲ್ಲ|ಕೃಷ್ಣಂ ವಂದೇ ಜಗದ್ಗುರುಂ…|

ವೇದಾನುದ್ಧರತೇ ಜಗನ್ನಿವಪಹತೇ ಭೂಗೋಲಮದ್ಭಿಭ್ರತೇದೈತ್ಯ ದಾರಯತೇ ಬಲಿಂಧಲಯತೇ ಕ್ಷತ್ರಕ್ಷಯೇ ಕುರ್ವತೇಪೌಲಸ್ತಂ ಜಿಯತೇ ಹಲಂಕಲಯತೇ ಕಾರುಣ್ಯ ಮಾತನ್ವತೇಮ್ಲೇಚ್ಛಾನ್ ಮಾರ್ದಯತೇ ದಶಾಕೃತಿಕೃತೇ ಕೃಷ್ಣಾಯ ತುಭ್ಯಂ ನಮಃ || ವೇದಗಳನ್ನು ಉದ್ಧರಿಸಿದ (ಮತ್ಸ್ಯಾವತಾರಿ), ಜಗತ್ತನ್ನು ಹೊತ್ತ (ಕೂರ್ಮಾವತಾರಿ), ಭೂಮಿಯನ್ನು ರಕ್ಷಿಸಿದ (ವರಾಹಾವತಾರಿ), ಹಿರಣ್ಯಕಶಿಪುವೆಂಬ ದೈತ್ಯನನ್ನು ಸಿಗಿದ (ನರಸಿಂಹಾವತಾರಿ), ಬಲಿಯನ್ನು ಪಾತಾಳಕ್ಕೆ ತಳ್ಳಿದ (ವಾಮನಾವತಾರಿ), ಕ್ಷತ್ರಿಯರನ್ನು ಸಂಹರಿಸಿದ (ಪರಶುರಾಮಾವತಾರಿ), ರಾವಣನನ್ನು ಜಯಿಸಿದ (ರಾಮಾವತಾರಿ), ಹಲಧರ ಬಲರಾಮನ ಸಹೋದರ (ಕೃಷ್ಣಾವತಾರಿ), ಕಾರುಣ್ಯಮೂರ್ತಿ (ಬೌದ್ಧಾವತಾರಿ) ಮತ್ತು ಮ್ಲೇಚ್ಛರನ್ನು ಬಡಿದೋಡಿಸುವ (ಕಲ್ಕಿ ಅವತಾರಿ) ಕೃಷ್ಣಾ… ನಿನಗೆ ನಮಸ್ಕಾರಗಳು. ದಶಾವತಾರಗಳನ್ನು

ಕೃಷ್ಣಾ ಎಂದರೆ ಕಷ್ಟವೊಂದಿಷ್ಟಿಲ್ಲ|ಕೃಷ್ಣಂ ವಂದೇ ಜಗದ್ಗುರುಂ…| Read More »

ಪ್ಯಾರಾಲಂಪಿಕ್: ಭಾರತಕ್ಕೆ ಕಂಚು ತಂದು ಕೊಟ್ಟ‌ ವಿನೋದ್ ಕುಮಾರ್

ಟೋಕಿಯೊ: ಜಪಾನ್‌ನ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಭಾರತದ ವಿನೋದ್‌ ಕುಮಾರ್ ಅವರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.‌ ಇದರೊಂದಿಗೆ ಭಾರತಕ್ಕೆ ಭಾನುವಾರ ಒಟ್ಟು ಮೂರು ಪದಕಗಳು ಬಂದಂತಾಗಿದೆ. 19.91 ಮೀಟರ್‌ ದೂರ ಎಸೆದು ಪದಕ್ಕೆ ಕೊರಳೊಡ್ಡಿದ್ದೂ ಮಾತ್ರವಲ್ಲದೆ ಏಷಿಯನ್‌ ದಾಖಲೆಯನ್ನೂ ನಿರ್ಮಿಸಿದರು. ಪೋಲೆಂಡ್‌ನ ಪಿಯೋಟರ್‌ ಕೊಸೆವಿಕ್ಜ್‌ (20.02ಮೀ), ಕ್ರೊವೇಷಿಯಾದ ವೆಲಿಮಿರ್‌ ಸ್ಯಾಂಡೊರ್‌ (19.98ಮೀ) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಬಾಚಿಕೊಂಡರು.

ಪ್ಯಾರಾಲಂಪಿಕ್: ಭಾರತಕ್ಕೆ ಕಂಚು ತಂದು ಕೊಟ್ಟ‌ ವಿನೋದ್ ಕುಮಾರ್ Read More »

ಉಡುಪಿ ಡಿ ಸಿ ಜಗದೀಶ್ ವರ್ಗಾವಣೆ, ನೂತನ ಜಿಲ್ಲಾಧಿಕಾರಿಯಾಗಿ ಕೂರ್ಮರಾಜ್

ಉಡುಪಿ : ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಜಿ.ಜಗದೀಶ್ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ರವಿವಾರ ಆದೇಶ ಹೊರಡಿಸಿದೆ. ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರ್ಗಿ ಇದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೂರ್ಮ ರಾವ್‌ ಅವರನ್ನು ನೇಮಕ ಮಾಡಲಾಗಿದೆ. ಜಿ ಜಗದೀಶ್‌ ಅವರನ್ನು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ವರ್ಗಾವಣೆಗೊಳಿಸಲಾಗಿದೆ. 2019 ರಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಅಧಿಕಾರ ವಹಿಸಿಕೊಂಡಿದ್ದ, ಜಿ ಜಗದೀಶ್ ಅವರು, ಕೋವಿಡ್ ಸಂಕಷ್ಟ ಹಾಗೂ ಮಳೆಯಿಂದಾದ ಪ್ರವಾಹ ಸಂದರ್ಭದಲ್ಲಿ ಯಶಸ್ವಿಯಾಗಿ ಆಡಳಿತವನ್ನು ನಿಭಾಯಿಸಿದ್ದರು. ಜಿ. ಜಗದೀಶ್

ಉಡುಪಿ ಡಿ ಸಿ ಜಗದೀಶ್ ವರ್ಗಾವಣೆ, ನೂತನ ಜಿಲ್ಲಾಧಿಕಾರಿಯಾಗಿ ಕೂರ್ಮರಾಜ್ Read More »

ಅಪ್ರಾಪ್ತೆಯ ಅತ್ಯಾಚಾರಗೈದ ಆರೋಪಿ ಠಾಣೆಯಲ್ಲಿ ನೇಣಿಗೆ ಶರಣು| ಲಾಕಪ್ ಡೆತ್ ಎಂದು ಆರೋಪಿಸಿದ ಕುಟುಂಬಿಕರು| ಪ್ರಕರಣ ಸಿಐಡಿ‌ ತನಿಖೆಗೆ ಆಗ್ರಹ|

ವಿಜಯಪುರ; ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿದ್ದ ಆರೋಪಿ ಪೊಲೀಸ್ ಠಾಣೆಯಲ್ಲಿಯೇ ಸಾವನ್ನಪ್ಪಿದ್ದಾನೆ.ಈತನ ಸಾವನ್ನು‌ ಲಾಕ್‌ಅಪ್ ಡೆತ್ ಎಂದು ಪೋಷಕರು ಆರೋಪ ಮಾಡುತ್ತಿದ್ದು, ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸರು ಶನಿವಾರ ರಾತ್ರಿ ದೇವಿಂದ ಸಂಗೋಗಿ ಎಂಬ ಆರೋಪಿಯನ್ನು ಬಂಧಿಸಿದ್ದರು. ಭಾನುವಾರ ಬೆಳಗ್ಗೆ ಆರೋಪಿ ಠಾಣೆಯ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆರೋಪಿಯ ಪೋಷಕರು, ಸಂಬಂಧಿಕರು ಠಾಣೆಗೆ ಮುತ್ತಿಗೆ ಹಾಕಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಪ್ರಾಪ್ತೆಯ ಅತ್ಯಾಚಾರಗೈದ ಆರೋಪಿ ಠಾಣೆಯಲ್ಲಿ ನೇಣಿಗೆ ಶರಣು| ಲಾಕಪ್ ಡೆತ್ ಎಂದು ಆರೋಪಿಸಿದ ಕುಟುಂಬಿಕರು| ಪ್ರಕರಣ ಸಿಐಡಿ‌ ತನಿಖೆಗೆ ಆಗ್ರಹ| Read More »

ರಾಜ್ಯದಲ್ಲಿ ಮುಂದುವರಿಯಲಿದೆ ವರುಣಾರ್ಭಟ| ಹತ್ತು‌ ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ ‌ನೀಡಿದ ಹವಾಮಾನ ಇಲಾಖೆ|

ಬೆಂಗಳೂರು: ರಾಜ್ಯದಲ್ಲಿ ಮತ್ತೆ 2 ದಿನಗಳ ಕಾಲ ಮಳೆ ಆರ್ಭಟ ಮುಂದುವರೆಯಲ್ಲಿದ್ದು, ರಾಜ್ಯದ 10 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಒಟ್ಟು 10 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಜೋರಾಗಿ ಮಳೆ ಸುರಿಯುತ್ತಿದೆ. ಬೆಂಗಳೂರಿನಲ್ಲಿ ಕೂಡ ಸಂಜೆಯ ವೇಳೆಗೆ ಮಳೆಯಾಗುತ್ತಿದೆ. ಇನ್ನೆರಡು ದಿನ ಕರಾವಳಿಯ

ರಾಜ್ಯದಲ್ಲಿ ಮುಂದುವರಿಯಲಿದೆ ವರುಣಾರ್ಭಟ| ಹತ್ತು‌ ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ ‌ನೀಡಿದ ಹವಾಮಾನ ಇಲಾಖೆ| Read More »