August 2021

ಸಾರಿಗೆ ಬಸ್ ಹರಿದು ಅಂಗನವಾಡಿ ಶಿಕ್ಷಕಿ ಸಾವು

ಹಾವೇರಿ : ಸಾರಿಗೆ ಬಸ್ ಹರಿದು ಅಂಗನವಾಡಿ ಶಿಕ್ಷಕಿ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ನಿಟ್ಟೂರು ಗ್ರಾಮದಲ್ಲಿ ನಡೆದಿದೆ. 55 ವರ್ಷದ ಕಮಲಮ್ಮ ಕಾಸಂಬಿ ಮೃತರಾಗಿದ್ದಾರೆ. ಇವರು ಮಗನೊಂದಿಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಎದುರಿಗೆ ಸಾರಿಗೆ ಬಸ್ ಬಂದಿದೆ. ಆ ವೇಳೆ ನಿಯಂತ್ರಣ ತಪ್ಪಿ ಬೈಕ್ ನಿಂದ ಕೆಳಗೆ ಬಿದ್ದಿದ್ದಾರೆ. ಆಗ ಕಮಲಮ್ಮಳ ತಲೆಯ ಮೇಲೆ ಬಸ್ ಹರಿದು ಹೋಗಿದಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅದೃಷ್ಟವಶಾತ್ ಕಮಲಮ್ಮಳ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ಈ ಸಂಬಂಧ […]

ಸಾರಿಗೆ ಬಸ್ ಹರಿದು ಅಂಗನವಾಡಿ ಶಿಕ್ಷಕಿ ಸಾವು Read More »

ದೇಶ ವಿಭಜನೆ ದುರಂತ ಮರೆಯಲು ಅಸಾಧ್ಯ- ಪ್ರಧಾನಿ ಮೋದಿ

ಹೊಸದಿಲ್ಲಿ: ಆಗಸ್ಟ್ 14ನ್ನು ‘ವಿಭಜನೆ ಭೀಕರ ನೆನಪಿನ ದಿನ’ವಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದ್ದಾರೆ. ‘ವಿಭಜನೆಯ ನೋವುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ಪ್ರಧಾನಿ ಮೋದಿ ಟ್ವಿಟರ್ ನಲ್ಲಿ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಟ್ವೀಟ್ ಮಾಡಿದ್ದು,ನಮ್ಮ ಲಕ್ಷಾಂತರ ಸಹೋದರಿಯರು ಮತ್ತು ಸಹೋದರರು ಸ್ಥಳಾಂತರಗೊಂಡರು ಮತ್ತು ಅನೇಕರು ಬುದ್ಧಿಹೀನ ದ್ವೇಷ ಮತ್ತು ಹಿಂಸೆಯಿಂದ ಪ್ರಾಣ ಕಳೆದುಕೊಂಡರು. ನಮ್ಮ ಜನರ ಹೋರಾಟಗಳು ಮತ್ತು ತ್ಯಾಗಗಳ ನೆನಪಿಗಾಗಿ ಆಗಸ್ಟ್ 14 ನ್ನು ವಿಭಜನೆಯ

ದೇಶ ವಿಭಜನೆ ದುರಂತ ಮರೆಯಲು ಅಸಾಧ್ಯ- ಪ್ರಧಾನಿ ಮೋದಿ Read More »

ಭಾರತದಲ್ಲಿ ಇನ್ಮುಂದೆ ಹಳೆ ವಾಹನಗಳು ಗುಜರಿಗೆ…! ಏನಿದು ಈ ನೀತಿಯ ಉದ್ದೇಶ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್…

ಭಾರತದಲ್ಲಿ ಇನ್ಮುಂದೆ 15 ವರ್ಷಕ್ಕೂ ಹಳೆಯ ವಾಹನಗಳು ಓಡಾಡೋ ಹಾಗಿಲ್ಲ, ಎಲ್ಲವೂ ಗುಜರಿಗೆ ಎನ್ನುವ ವಿಚಾರ ತಿಳಿದಿರಬಹುದು. ಆದರೆ ಇದು ಯಾವ ರೀತಿ ನಡೆಯುತ್ತದೆ ನಿಮ್ಮ ವಾಹನಗಳನ್ನು ಯಾವಾಗ ಗುಜರಿಗೆ ಹಾಕಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಇದರ ಪ್ರಕಾರ 15 ವರ್ಷ ಹಳೆಯ ಕಮರ್ಷಿಯಲ್ ವಾಹನ ಹಾಗೂ 20 ವರ್ಷ ಹಳೆಯ ಖಾಸಗಿ ವಾಹನ ಈ ನೀತಿಯ ಒಳಗೆ ಬರಲಿದ್ದು. ಗಾಡಿಗಳನ್ನು ಕೇವಲ ವರ್ಷದ ಆಧಾರದಲ್ಲಿ ಗುಜರಿಗೆ ಹಾಕಲಾಗುವುದಿಲ್ಲ, ಇದನ್ನು ಅದರ ಫಿಟ್ನೆಸ್ ಆಧರಿಸಿ

ಭಾರತದಲ್ಲಿ ಇನ್ಮುಂದೆ ಹಳೆ ವಾಹನಗಳು ಗುಜರಿಗೆ…! ಏನಿದು ಈ ನೀತಿಯ ಉದ್ದೇಶ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್… Read More »

ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿ ತಿಂಗಳಾಂತ್ಯದವರೆಗೂ ಮುಂದುವರಿಕೆ

ಬೆಂಗಳೂರು : ಕೋವಿಡ್ 19 ಕಣ್ಗಾವಲು ನಿಯಂತ್ರಣ ಮತ್ತು ಜಾಗ್ರತೆ ಮಾರ್ಗಸೂಚಿಗಳನ್ನು ಆಗಸ್ಟ್ 30 ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುವದನ್ನು ತಡೆಯಲು ಕೇಂದ್ರೀಕೃತ ಕಣ್ಗಾವಲು ಕೋವಿಡ್ 19 ಸಮುಚಿತ ವರ್ತನೆಗಳನ್ನು ಕಟ್ಟು ನಿಟ್ಟಾಗಿ ಅನುರಿಸುವುದು ಹಾಗೂ ಸ್ಥಳೀಯವಾಗಿ ನಿಯಂತ್ರಿಸಲು ಆರೋಗ್ಯ ತಜ್ಞರು ಸೂಚಿಸಿದ್ದು, ಈ

ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿ ತಿಂಗಳಾಂತ್ಯದವರೆಗೂ ಮುಂದುವರಿಕೆ Read More »

ದ.ಕ ದಲ್ಲಿ ಈ ಬಾರಿ ಸ್ವಾತಂತ್ರ್ಯ ಆಚರಣೆಗಿಲ್ಲ ಸ್ವಾತಂತ್ರ್ಯ| ವೀಕೆಂಡ್ ಕರ್ಪ್ಯೂ ‌ನಡುವೆ ಸರಳ ಆಚರಣೆಗೆ ಸೂಚನೆ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಆತಂಕ ಮನೆ ಮಾಡಿದ್ದು, 75 ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಕತ್ತರಿ ಬಿದ್ದಿದೆ. ಜಿಲ್ಲಾದ್ಯಂತ ಆ.14 ಮತ್ತು 15 ರಂದು ವೀಕೆಂಡ್ ಕರ್ಪ್ಯೂ ಹೇರಿರುವ ಕಾರಣ ಸಾರ್ವಜನಿಕ ಸಮಾರಂಭಗಳಿಗೆ ಬ್ರೇಕ್ ಬಿದ್ದಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳ ರೀತಿಯಲ್ಲಿ ಆಚರಿಸಲು ಜಿಲ್ಲಾಡಳಿತ ಸೂಚಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಕೇವಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಧ್ವಜಾರೋಹಣ ನೆರವೇರಿಸಲು ಸೂಚಿಸಿದ್ದು, ಸಾರ್ವಜನಿಕರ ಭಾಗವಹಿಸುವಿಕೆ ನಿಷೇಧಿಸಲಾಗಿದೆ. ಶನಿವಾರ ನಡೆಯಲಿದ್ದ ಮಂಗಳೂರು ವಿ.ವಿ ಪರೀಕ್ಷೆಗಳನ್ನೂ ಮುಂದೂಡಲಾಗಿದ್ದು,

ದ.ಕ ದಲ್ಲಿ ಈ ಬಾರಿ ಸ್ವಾತಂತ್ರ್ಯ ಆಚರಣೆಗಿಲ್ಲ ಸ್ವಾತಂತ್ರ್ಯ| ವೀಕೆಂಡ್ ಕರ್ಪ್ಯೂ ‌ನಡುವೆ ಸರಳ ಆಚರಣೆಗೆ ಸೂಚನೆ Read More »

ಅಲ್ಲಿ‌ ಕಾಮನ್ ಸೆನ್ಸ್ ತಪ್ಪಿದ್ದು ಯಾರು? ಡಿಸಿ, ಡಿಎಚ್ಒ ರನ್ನು ತರಾಟೆಗೆ ತೆಗೆದುಕೊಂಡ ಸಿಎಂ ಗೆ ಉಸ್ತುವಾರಿ ಸಚಿವರು ಕಂಡಿಲ್ಲವೇ?

ಮಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬಸವರಾಜ ಬೊಮ್ಮಾಯಿಯವರು ಪ್ರಥಮ ‌ಬಾರಿಗೆ ಕರಾವಳಿ ಪ್ರವಾಸವನ್ನು ಗುರುವಾರ ಮಾಡಿದ್ದರು. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಮತ್ತು ಉಡುಪಿಯಲ್ಲಿ ದಿನೇದಿನೇ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಭೇಟಿ ತುಂಬಾ ಪ್ರಾಮುಖ್ಯತೆ ಪಡೆದಿತ್ತು. ಅದರಂತೆ ಮುಖ್ಯಮಂತ್ರಿಗಳು ಕೂಡಾ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದ್ದು ನಿಜಕ್ಕೂ ಸಾರ್ವಜನಿಕರಲ್ಲಿ ಒಂದು ರೀತಿಯ ಆಶಾಭಾವ ಮೂಡಿಸಿತ್ತು. ಆದರೆ ಸಿಎಂ ರ ಸಭೆಯಲ್ಲಿ ‌ನಡೆಸಿಕೊಟ್ಟ ಜಿಲ್ಲಾಡಳಿತದ ಅಧಿಕಾರಿಗಳಿಗೆ ‌ಮಾತ್ರ ‘ಕೋಲು ಕೊಟ್ಟು

ಅಲ್ಲಿ‌ ಕಾಮನ್ ಸೆನ್ಸ್ ತಪ್ಪಿದ್ದು ಯಾರು? ಡಿಸಿ, ಡಿಎಚ್ಒ ರನ್ನು ತರಾಟೆಗೆ ತೆಗೆದುಕೊಂಡ ಸಿಎಂ ಗೆ ಉಸ್ತುವಾರಿ ಸಚಿವರು ಕಂಡಿಲ್ಲವೇ? Read More »

ಅಂಜುದೀವ್ ದ್ವೀಪದಲ್ಲಿ ಹಾರಿದ ತ್ರಿವರ್ಣ ಧ್ವಜ

ಅಂಜುದೀವ್ ದ್ವೀಪದಲ್ಲಿ ಹಾರಿದ ತ್ರಿವರ್ಣ ಧ್ವಜ ಕಾರವಾರ: 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಜಾದಿ ಕಾ ಅಮೃತ್ ಮಹೋತ್ಸವ’ದಲ್ಲಿ ದೇಶದಾದ್ಯಂತ ಭಾರತೀಯ ನೌಕಾಪಡೆಯಿಂದ 75 ದ್ವೀಪಗಳಲ್ಲಿ ಧ್ವಜಾರೋಹಣ ನಡೆಸಲಾಗಿದೆ. ಇದರಂತೆ ಕಾರವಾರದ ನೌಕಾನೆಲೆ ನಿರ್ಬಂಧಿತ ಅಂಜುದೀವ್ ದ್ವೀಪದಲ್ಲಿಯೂ ಕೂಡ ತ್ರಿವರ್ಣ ಧ್ವಜವನ್ನು ಹಾರಿಸಿ ಗೌರವ ಸಲ್ಲಿಸಲಾಯಿತು. ಕಾರವಾರದ ಕದಂಬ ನೌಕಾನೆಲೆ ವ್ಯಾಪ್ತಿಯ ಕರ್ನಾಟಕ ನೌಕಾ ವಲಯದ ಫ್ಲ್ಯಾಗ್ ಆಫೀಸರ್ ಮಹೇಶ್ ಸಿಂಗ್ ಅಂಜುದೀವ್ ದ್ವೀಪದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಅಂಜುದೀವ್ ದ್ವೀಪವು ಭಾರತೀಯ ನೌಕಾಪಡೆಗೆ ರಕ್ಷಣೆಯ ದೃಷ್ಟಿಯಲ್ಲಿ ಪ್ರಮುಖವಾಗಿದೆ

ಅಂಜುದೀವ್ ದ್ವೀಪದಲ್ಲಿ ಹಾರಿದ ತ್ರಿವರ್ಣ ಧ್ವಜ Read More »

ಪೊಲೀಸ್ ಸಬ್‌ಇನ್ಸ್​​ಪೆಕ್ಟರ್​​ ಆಗಬೇಕು ಎಂದು ಹೊಟ್ಟೆಯಲ್ಲಿ ಇದ್ದ ಕಂದನನ್ನು ಪಣಕ್ಕಿಟ್ಟ ಮಹಿಳೆ

ಕಲಬುರಗಿ: ಪೊಲೀಸ್ ಸಬ್‌ಇನ್ಸ್​​ಪೆಕ್ಟರ್​​ ಆಗಬೇಕು ಎನ್ನುವ ಚಲ ಹೊಂದಿರುವ ಮಹಿಳೆ, ತಾನು ಗರ್ಭಿಣಿ ಎನ್ನುವುದನ್ನು ಮರೆತು ಫಿಜಿಕಲ್ ಟೆಸ್ಟ್​​ನಲ್ಲಿ ಭಾಗವಹಿಸಿದ ಅಚ್ಚರಿ ಮೂಡಿಸಿದ್ದಾರೆ. ಬೀದರ್​ ಜಿಲ್ಲೆಯ ಅಶ್ವಿನಿ ಸಂತೋಶ (24) ಕೊರೆ ಎಂಬ ಮಹಿಳೆ ಇಂಜಿನಿಯರಿಂಗ್ ಪದವಿ ಪೂರೈಸಿದ ಬಳಿಕ ಪೊಲೀಸ್ ಸಬ್ ಇನ್ಸ್​​ಪೆಕ್ಟರ್​​ ಆಗಬೇಕು ಅನ್ನೋ ಕನಸಿತ್ತು. ಇದೇ ಕಾರಣಕ್ಕೆ ಕಠಿಣ ಪರಿಶ್ರಮ ಹಾಕಿದ್ದು, ಈಗಾಗಲೇ ಎರಡು ಬಾರಿ ಫಿಜಿಕಲ್ ಟೆಸ್ಟ್‌ನಲ್ಲಿ ಪಾಸ್ ಆಗಿದ್ದಾರೆ. ಇವರು ಲಿಖಿತ ಪರೀಕ್ಷೆ (ರಿಟನ್ ಟೆಸ್ಟ್)​​ ಮುಗಿಸಿಲ್ಲ. ಎರಡು ಬಾರಿ

ಪೊಲೀಸ್ ಸಬ್‌ಇನ್ಸ್​​ಪೆಕ್ಟರ್​​ ಆಗಬೇಕು ಎಂದು ಹೊಟ್ಟೆಯಲ್ಲಿ ಇದ್ದ ಕಂದನನ್ನು ಪಣಕ್ಕಿಟ್ಟ ಮಹಿಳೆ Read More »

ತಾತನ ಹೆಣವನ್ನು ಫ್ರಿಡ್ಜ್‌ನಲ್ಲಿಟ್ಟ ಮೊಮ್ಮಗ – ಯಾಕೆ ಗೊತ್ತ?

ಹೈದರಾಬಾದ್: ತೆಲಂಗಾಣದಲ್ಲಿ ವ್ಯಕ್ತಿಯೊಬ್ಬರು ತಮ್ಮ 93 ವರ್ಷದ ತಾತನ ದೇಹವನ್ನು ಫ್ರಿಡ್ಜ್ ಒಳಗೆ ಅಡವಿಟ್ಟಿರುವ ಘಟನೆ ನಡೆದಿದೆ. ನಿಖಿಲ್(23) ಎಂಬಾತ ತಾತ ಅಂತ್ಯಕ್ರಿಯೆ ನಡೆಸಲು ಹಣವಿಲ್ಲದೆ ಈ ಕೃತ್ಯ ಎಸಗಿದವನು. ದುರ್ವಾಸನೆ ಕುರಿತಂತೆ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ ಬಳಿಕ ಪೊಲೀಸರು ವಾರಂಗಲ್‍ನ ಪರ್ಕಳದಲ್ಲಿರುವ ಮನೆಯನ್ನು ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ರೆಫ್ರಿಜರೇಟರ್ ಒಳಗೆ ಕೊಳೆತ ದೇಹವೊಂದು ಪತ್ತೆಯಾಗಿದೆ. ನಿವೃತ್ತ ವ್ಯಕ್ತಿ ಹಾಗೂ ಆತನ ಮೊಮ್ಮಗ ನಿಖಿಲ್ ಬಾಡಿಗೆಗೆ ಈ ಮನೆಯಲ್ಲಿ ವಾಸವಾಗಿದ್ದು, ವೃದ್ಧನಿಗೆ ಬರುವ

ತಾತನ ಹೆಣವನ್ನು ಫ್ರಿಡ್ಜ್‌ನಲ್ಲಿಟ್ಟ ಮೊಮ್ಮಗ – ಯಾಕೆ ಗೊತ್ತ? Read More »

ಪತಿಯ ಮೂರ್ತಿ ಮಾಡಿ ದೇವಸ್ಥಾನ ನಿರ್ಮಿಸಿದ ಪತ್ನಿ

ಹೈದರಾಬಾದ್: ಆಂಧ್ರಪ್ರದೇಶದ ಪ್ರಕಾಸಂ ಜಿಲ್ಲೆಯಲ್ಲಿ ಮಹಿಳೆಯೋರ್ವರು ಮೃತ ಪತಿಗೆ ದೇವಸ್ಥಾನ ನಿರ್ಮಿಸಿ ಪೂಜೆ ಮಾಡುತ್ತೀರುವುದು ಕಂಡು ಬಂದಿದೆ. ಪತಿಯೇ ಪರದೈವ ಎಂದು ತನ್ನ ಗಂಡನಲ್ಲಿ ದೇವರನ್ನು ಕಾಣುವ ಅನೇಕ ಮಹಿಳೆಯರಲ್ಲಿ ಇಲ್ಲೊಬ್ಬ ಮಹಿಳೆ ಎಲ್ಲರಿಗಿಂತ ಕೊಂಚ ವಿಭಿನ್ನವಾಗಿದ್ದಾಳೆ. 4 ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟ ತನ್ನ ಪತಿಗಾಗಿ ದೇವಸ್ಥಾನವನ್ನೇ ನಿರ್ಮಿಸಿ ಅದರಲ್ಲಿ ಪತಿಯ ಮೂರ್ತಿ ಇಟ್ಟು ಪ್ರತಿದಿನ ಪೂಜಿಸುತ್ತಿದ್ದಾಳೆ. ಪದ್ಮಾವತಿ ಪತಿ ಅಂಕಿರೆಡ್ಡಿಗೆ ದೇಗುಲ ನಿರ್ಮಿಸಿದ್ದಾರೆ. ತನ್ನ ತಾಯಿ ಅವರ ಪತಿಗೆ ನಮಸ್ಕರಿಸಿ, ಪೂಜೆ ಮಾಡುತ್ತಿರುವುದನ್ನು ಗಮನಿಸಿದ್ದ

ಪತಿಯ ಮೂರ್ತಿ ಮಾಡಿ ದೇವಸ್ಥಾನ ನಿರ್ಮಿಸಿದ ಪತ್ನಿ Read More »