August 2021

ಮಂಗಳೂರು: ಶವದಿಂದಲೇ ಡೈಮಂಡ್ ರಿಂಗ್ ಕಳ್ಳತನ|ಆಸ್ಪತ್ರೆಯಲ್ಲಿದ್ದ ಸೆಕ್ಯುರಿಟಿಯ ಸುತ್ತ ಬೆಳೆದ ಅನುಮಾನದ ಹುತ್ತ…!

ಮಂಗಳೂರು: ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದ ವ್ಯಕ್ತಿಯೋರ್ವರ ಮೃತದೇಹವನ್ನು ರಾತ್ರಿ ಬೆಂದೂರು ವೆಲ್ ಕೊಲೊಸೊ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಆದರೆ, ಇಂದು ಬೆಳಗ್ಗೆ ನೋಡಿದಾಗ ಹರೀಶ್ ಶೆಟ್ಟಿ ಅವರ ಕಿವಿಯಲ್ಲಿದ್ದ ಡೈಮಂಡ್ ರಿಂಗ್ ಕಾಣೆಯಾದ ಬಗ್ಗೆ ಬೆಳಕಿಗೆ ಬಂದಿದೆ.ಸಿಟಿ ಸೆಂಟರ್ ಮಾಲ್‍ನಲ್ಲಿ ಸೆಕ್ಯುರಿಟಿ ವಿಭಾಗದಲ್ಲಿ ಮ್ಯಾನೇಜರ್ ಆಗಿದ್ದ ಹರೀಶ್ ಶೆಟ್ಟಿ (42) ಮೃತ ಪಟ್ಟವರು. ಇವರು ನಿನ್ನೆ ಬೆಳಗ್ಗೆ ತನ್ನ ಪತ್ನಿ, ಮಕ್ಕಳೊಂದಿಗೆ ಕುಂದಾಪುರಕ್ಕೆ ತೆರಳಿದ್ದರು. ಮಧ್ಯಾಹ್ನ ಹೊಟೇಲ್ ಒಂದರಲ್ಲಿ ಊಟ ಮಾಡುತ್ತಿದ್ದಾಗ ದಿಢೀರ್ ಆಗಿ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು […]

ಮಂಗಳೂರು: ಶವದಿಂದಲೇ ಡೈಮಂಡ್ ರಿಂಗ್ ಕಳ್ಳತನ|ಆಸ್ಪತ್ರೆಯಲ್ಲಿದ್ದ ಸೆಕ್ಯುರಿಟಿಯ ಸುತ್ತ ಬೆಳೆದ ಅನುಮಾನದ ಹುತ್ತ…! Read More »

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ| ರಾಜ್ ಕುಂದ್ರಾ ಕಂಪೆನಿ ನಿರ್ದೇಶಕ ಅರೆಸ್ಟ್

ಮುಂಬೈ : ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಅವರ ಕಂಪನಿಯ ನಿರ್ದೇಶಕ ಅಭಿಜಿತ್ ಬೊಂಬ್ಲೆ ಎಂಬವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ಚಿತ್ರ ನಿರ್ಮಾಣದ ಆರೋಪದಲ್ಲಿ ರಾಜ್ ಕುಂದ್ರಾ ಅವರನ್ನು ಕಳೆದ ತಿಂಗಳು ಬಂಧಿಸಲಾಗಿತ್ತು. ರೂಪದರ್ಶಿಯೊಬ್ಬರು ನೀಡಿದ್ದ ದೂರಿನ ಆಧಾರದಲ್ಲಿ ಮಾಲ್‌ವಾನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಕಿರುಚಿತ್ರಗಳು ಮತ್ತು ವೆಬ್ ಸೀರೀಸ್‌ಗಳಲ್ಲಿ ನಟಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿ ಬಳಿಕ ನಗ್ನ ದೃಶ್ಯಗಳಲ್ಲಿ ನಟಿಸುವಂತೆ ಒತ್ತಡ ಹೇರಲಾಗಿತ್ತು ಎಂದು ರೂಪದರ್ಶಿ

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ| ರಾಜ್ ಕುಂದ್ರಾ ಕಂಪೆನಿ ನಿರ್ದೇಶಕ ಅರೆಸ್ಟ್ Read More »

ಚಲಿಸುತ್ತಿದ್ದ ಕಾರಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ವಿವಾಹಿತೆ| ಅನಾಮಿಕ ಕರೆಗೆ ಬಲಿಯಾದ ಸಂತ್ರಸ್ತೆ|

ನವದೆಹಲಿ: ಚಲಿಸುತ್ತಿದ್ದ ಕಾರಿನಲ್ಲಿ ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಕೃತ್ಯ ದೇಶದ ರಾಜಧಾನಿಯಲ್ಲಿ ನಡೆದಿದೆ.ಕೆಲಸ ಕೊಡಿಸುವುದಾಗಿ ಹೇಳಿ ಕಾರಿನೊಳಗೆ ಹತ್ತಿಸಿಕೊಂಡ ಇಬ್ಬರು ಕಾಮುಕರು ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದು, ದುಷ್ಕೃತ್ಯದ ಬಗ್ಗೆ ಬಾಯ್ಬಿಟ್ಟರೆ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಸಂತ್ರಸ್ತೆ ತನ್ನ ಪತಿಯೊಂದಿಗೆ ಗಾಜಿಯಾಬಾದ್ ಪ್ರದೇಶದಲ್ಲಿ ವಾಸವಾಗಿದ್ದು ಕೆಲವು ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯಿಂದ

ಚಲಿಸುತ್ತಿದ್ದ ಕಾರಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ವಿವಾಹಿತೆ| ಅನಾಮಿಕ ಕರೆಗೆ ಬಲಿಯಾದ ಸಂತ್ರಸ್ತೆ| Read More »

ದೇವಾಲಯಗಳಲ್ಲಿ ಆನೆಗಳನ್ನು ಬಳಸುವುದಕ್ಕೆ ಹೈಕೋರ್ಟ್ ವಿರೋಧ

ಬೆಂಗಳೂರು: ನಗರದ ವಿದ್ಯಾರಣ್ಯಪುರದ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ಕೆ ಬಳಸಲು ಆನೆಯನ್ನು ಇರಿಸಿಕೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೈಕೋರ್ಟ್‌, ಆನೆಗಳು ಕಾಡಿನಲ್ಲಿ ಇರಬೇಕು ಹೊರತು ದೇವಸ್ಥಾನದಲ್ಲಿ ಅಲ್ಲ.ಪೂಜಾ ಕಾರ್ಯಕ್ರಮಕ್ಕೆ ಆನೆಗಳನ್ನು ಬಳಸಿಕೊಳ್ಳುವುದು ಕ್ರೌರ್ಯವೇ ಆಗುತ್ತದೆ ಎಂದು ತೀಕ್ಷ್ಣವಾಗಿ ಹೇಳಿತು. ಈ ಕುರಿತು ಸಲ್ಲಿಸಿದ್ದ ಅರ್ಜಿಯು ಮುಖ್ಯ ನ್ಯಾ. ಎ.ಎಸ್.ಓಕ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು. ಈ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನವು ಖಾಸಗಿ ದೇವಾಲಯವಾಗಿದೆ.

ದೇವಾಲಯಗಳಲ್ಲಿ ಆನೆಗಳನ್ನು ಬಳಸುವುದಕ್ಕೆ ಹೈಕೋರ್ಟ್ ವಿರೋಧ Read More »

ಉಡುಪಿ: ಸಿಡಿಲು ಬಡಿದು ಇಬ್ಬರು ಗಂಭೀರ

ಉಡುಪಿ: ಗದ್ದೆ‌ ಬದಿಯಲ್ಲಿ ನಡೆದುಕೊಂಡು ಹೋಗುತಿದ್ದ ವೇಳೆ ಸಿಡಿಲು ಬಡಿದು ಇಬ್ಬರು ಗಂಭೀರ ಗಾಯಗೊಂಡ ಘಟನೆ ಪರ್ಕಳದ ಪರೀಕದಲ್ಲಿ ಸಂಭವಿಸಿದೆ. ಉಡುಪಿಯಲ್ಲಿ ಶುಕ್ರವಾರ ಬೆಳಗ್ಗೆಯಿಂದ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುತ್ತಿದೆ. ಸಿಡಿಲು ಅಪ್ಪಳಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ಉಡುಪಿ: ಸಿಡಿಲು ಬಡಿದು ಇಬ್ಬರು ಗಂಭೀರ Read More »

ಹಣದಾಸೆಗೆ ಗಾಂಜಾ ಮಾರಾಟ ಮಾಡುತ್ತಿದ್ದ 19ರ ಪೋರ ಬಂಧನ

ನೆಲಮಂಗಲ: 19 ವರ್ಷದ ಯುವಕನೊಬ್ಬ ಹಣದಾಸೆಗೆ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪೋಲೀಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕಡಬಗೆರೆ ಬಳಿಯ ಜನಪ್ರಿಯ ನಿವಾಸಿ ಹರಿ ಗೋವಿಂದರಾಜು(19) ಬಂಧಿತ ಆರೋಪಿ. ಖಚಿತ ಮಾಹಿತಿ ತಿಳಿದು ಪೋಲೀಸರು ದಾಳಿ ಮಾಡಿದ್ದರು. ಈ ವೇಳೆ ಬೆಂಗಳೂರು ಹೊರವಲಯ ನೆಲಮಂಗಲದ ಇಂದಿರಾನಗರದಲ್ಲಿ ಯುವಕನನ್ನು ಬಂಧಿಸಿದಿದ್ದಾರೆ. ಬರೋಬ್ಬರಿ 600 ಗ್ರಾಂ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ, ನ್ಯಾಯಾಲಯದ ವಶಕ್ಕೆ ನೀಡಿದ್ದಾರೆ. ಹೆಚ್ಚಿನ ತನಿಖೆಯನ್ನು ಪೋಲೀಸರು ಮುಂದುವರಿಸಿದ್ದಾರೆ.

ಹಣದಾಸೆಗೆ ಗಾಂಜಾ ಮಾರಾಟ ಮಾಡುತ್ತಿದ್ದ 19ರ ಪೋರ ಬಂಧನ Read More »

ನೀನು ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು -ಮಹಿಳಾ ಪತ್ರಕರ್ತೆಗೆ ಉಲ್ಟಾ ಹೊಡೆದ ತಾಲಿಬಾನಿಗಳು

ಕಾಬೂಲ್: ನೀನು ಮಹಿಳೆ ಹಾಗಾಗಿ ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು ಎಂದು ಹೇಳಿ ಮಹಿಳಾ ಪತ್ರಕರ್ತೆಗೆ ಅಫ್ಘಾನಿಸ್ತಾನದಲ್ಲಿ ಆಡಳಿತದಲ್ಲಿರುವ ತಾಲಿಬಾನಿಗಳು ಉಲ್ಟಾ ಹೊಡೆದಿದ್ದಾರೆ. ನಾವು ಬದಲಾಗಿದ್ದೇವೆ, ಮಹಿಳೆಯರು ಉದ್ಯೋಗಕ್ಕೆ ತೆರಳಲು ಅನುಮತಿ ನೀಡುತ್ತೇವೆ ಎಂದಿದ್ದ ತಾಲಿಬಾನಿಗಳ ನಿಜ ರೂಪ ಇದೀಗ ನಿಧಾನವಾಗಿ ಬಹಿರಂಗಗೊಳ್ಳುತ್ತಿದೆ. ಅಫ್ಘಾನಿಸ್ತಾನದಲ್ಲಿ ಪ್ರಭುತ್ವ ಸ್ಥಾಪಿಸಿದ ಬಳಿಕ ಸರ್ಕಾರಿ ಸ್ವಾಮ್ಯದ ವಾಹಿನಿಗಳಲ್ಲಿ ಮಹಿಳಾ ಪತ್ರಕರ್ತರು ಕೆಲಸಕ್ಕೆ ಬರದಂತೆ ತಾಲಿಬಾನ್ ಸೂಚಿಸಿದೆ ಎಂದು ಖಖಿಂ RTA Pashto ನಿರೂಪಕಿ ಶಬ್ನಮ್ ದವ್ರನ್ ಹೇಳಿದ್ದಾರೆ. ಮಾಧ್ಯಮಕ್ಕೆ ಸಂದರ್ಶನ ನೀಡಿದ

ನೀನು ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು -ಮಹಿಳಾ ಪತ್ರಕರ್ತೆಗೆ ಉಲ್ಟಾ ಹೊಡೆದ ತಾಲಿಬಾನಿಗಳು Read More »

ರಾತ್ರಿ ಎಣ್ಣೆ ಪಾರ್ಟಿ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಸ್ನೇಹಿತರಿಬ್ಬರು ರಾತ್ರಿ ಫುಲ್ ಎಣ್ಣೆ (ಮದ್ಯಪಾನ) ಪಾರ್ಟಿ ಮಾಡುತ್ತಿದ್ದ ವೇಳೇ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಡಿಜೆಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಿತೇಶ್ ಕೊಲೆಯಾದವನು. ಆತನ ಸ್ನೇಹಿತ ಪ್ರಶಾಂತ್ ಕೊಲೆ ಮಾಡಿದ ಆರೋಪಿ.ರಾತ್ರಿ ಇಬ್ಬರೂ ಒಟ್ಟಿಗೆ ಸೇರಿ ಪಾರ್ಟಿ ಮಾಡಿದ್ದು, ಪಾರ್ಟಿ ಬಳಿಕ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಈ ವೆಳೆ ನಿತೇಶ್ ಸ್ನೇಹಿತ ಪ್ರಶಾಂತ್ ಗೆ ಕಾಲಿನಿಂದ ಒದ್ದಿದ್ದ. ಕಾಲಿನಿಂದ ಒದ್ದ ಬಳಿಕ ಇಬ್ಬರು

ರಾತ್ರಿ ಎಣ್ಣೆ ಪಾರ್ಟಿ ಕೊಲೆಯಲ್ಲಿ ಅಂತ್ಯ Read More »

ಉಡುಪಿ: ಫುಟ್ ವೇರ್ ಮಳಿಗೆ ಬೆಂಕಿಗಾಹುತಿ: ಲಕ್ಷಾಂತರ ರೂ. ನಷ್ಟ

ಉಡುಪಿ: ಮಣಿಪಾಲದಲ್ಲಿರುವ ಫುಟ್ ವೇರ್ ಅಂಗಡಿಯೊಂದರಲ್ಲಿ ಬೆಂಕಿ ಅವಘಡ ಉಂಟಾಗಿ ಲಕ್ಷಾಂತರ ರೂ. ನಷ್ಟವಾದ ಘಟನೆ ಗುರುವಾರ ರಾತ್ರಿ ನಡೆದಿದೆ. ಖ್ಯಾತ ಫುಟ್ ವೇರ್ ಮಳಿಗೆಗೆ ಇದಾಗಿದ್ದು ಶಾಟ್ ಸಕ್ರ್ಯೂಟ್’ನಿಂದ ದುರಂತ ಸಂಭವಿಸಿದೆ. ಅಂಗಡಿ ಮಾಲೀಕರು ರಾತ್ರಿ ವ್ಯವಹಾರ ಮುಗಿಸಿ ಅಂಗಡಿ ಮುಚ್ಚಿ ತೆರಳಿದ ಬಳಿಕ ಈ ಘಟನೆ ನಡೆದಿದೆ. ಒಳಗಿದ್ದ ಸಂಪೂರ್ಣ ದಾಸ್ತಾನು ಬೆಂಕಿಗಾಹುತಿಯಾಗಿದ್ದು ಉಡುಪಿ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಫುಟ್ ವೇರ್ ಮಳಿಗೆ ಅಲ್ಲದೇ ಪಕ್ಕದ ಒಂದು

ಉಡುಪಿ: ಫುಟ್ ವೇರ್ ಮಳಿಗೆ ಬೆಂಕಿಗಾಹುತಿ: ಲಕ್ಷಾಂತರ ರೂ. ನಷ್ಟ Read More »

ತಾಲಿಬಾನಿಗಳ ಕರಿನೆರಳು| ಆತಂಕದಲ್ಲಿದ್ದಾರೆ ಮಂಗಳೂರು ವಿ.ವಿಯ ಅಪ್ಘಾನ್ ವಿದ್ಯಾರ್ಥಿಗಳು|

ಮಂಗಳೂರು : ದೇಶವು ತಾಲಿಬಾನ್‌ ಉಗ್ರರ ಕೈವಶವಾಗುತ್ತಿದ್ದಂತೆ ಇತ್ತ ಮಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿರುವ ಅಫ್ಘಾನಿ ಸ್ಥಾನದ ವಿದ್ಯಾರ್ಥಿಗಳು ಮುಂದೇನು ಎಂಬ ಆತಂಕದಲ್ಲಿದ್ದಾರೆ. 2-3 ವರ್ಷದ ಹಿಂದೆ ಮಂಗಳೂರಿಗೆ ಶಿಕ್ಷಣಕ್ಕಾಗಿ ಬಂದಿದ್ದ ಈ ವಿಧ್ಯಾರ್ಥಿಗಳು ಪದವಿಯಲ್ಲಿ 18, ಸ್ನಾತಕೋತ್ತರ ಪದವಿಯಲ್ಲಿ 13, ಪಿಎಚ್‌ಡಿಯಲ್ಲಿ 22 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಹಾಸ್ಟೆಲ್‌ಗ‌ಳಲ್ಲಿದ್ದಾರೆ. ತಮ್ಮ ದೇಶದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಮಾಧ್ಯಮಗಳ ಮೂಲಕ ಮೊಬೈಲ್‌ ಕರೆ ಮಾಡಿ ವಿಚಾರಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ. ಕೆಲವು ವಿದ್ಯಾರ್ಥಿಗಳು ದೇಶದ ಪರಿಸ್ಥಿತಿ ಹಾಗೂ ಮನೆ ಮಂದಿಯ

ತಾಲಿಬಾನಿಗಳ ಕರಿನೆರಳು| ಆತಂಕದಲ್ಲಿದ್ದಾರೆ ಮಂಗಳೂರು ವಿ.ವಿಯ ಅಪ್ಘಾನ್ ವಿದ್ಯಾರ್ಥಿಗಳು| Read More »