August 2021

‘ ಲಾ’ ಮರೆತು‌ ಮೈಮುಟ್ಟುತ್ತಿದ್ದ ಲಾಯರ್| ಕಂಬಿ ರುಚಿ ತೋರಿಸಿದ ಯುವತಿ|

ಪುತ್ತೂರು: ತನ್ನ ಕಚೇರಿಯಲ್ಲಿ ಕೆಲಸಕ್ಕಿದ್ದ ಯುವತಿಯೊಬ್ಬಳನ್ನು ಕೆಲಸದ ನೆಪದಲ್ಲಿ ಆಗಾಗ್ಗೆ ಮುಟ್ಟುತ್ತಿದ್ದ ಲಾಯರ್ ಒಬ್ಬಾತನಿಗೆ ಕಾನೂನು ಪಾಠ ಕಲಿಸಿದ ಘಟನೆ ‌ಬಂಟ್ವಾಳದ ವಿಟ್ಲದಲ್ಲಿ ನಡೆದಿದೆ. ವಕೀಲ ಉಮ್ಮರ್ ಎಂಬಾತ ನಗರದ ವಿ.ಹೆಚ್ ಕಾಂಪ್ಲೆಕ್ಸ್ ನಲ್ಲಿ ಕಚೇರಿ ನಡೆಸುತ್ತಿದ್ದು, ಕೆಲಸಕ್ಕಾಗಿ ಹಿಂದೂ ಯುವತಿಯೋರ್ವಳನ್ನು ಕೆಲಸಕ್ಕೆ ಇರಿಸಿದ್ದ. ಕಳೆದ ಸೋಮವಾರ ಕಚೇರಿಯಲ್ಲಿ ಯಾರೂ ಇಲ್ಲದ ವೇಳೆ ಈತ ಆಕೆಯೊಂದಿಗೆ ಕಾಮ ಪ್ರಚೋದನೆಗೆ ತೊಡಗಿದ್ದು, ಆಕೆಯನ್ನು ಮೈ ಮುಟ್ಟಿ, ತಬ್ಬಿಕೊಳ್ಳಲು ಯತ್ನಿಸಿದ್ದನೆಂದೂ, ಇದರಿಂದ ಭಯಗೊಂಡ ಆಕೆ ಆತನನ್ನು ದೂರ ತಳ್ಳಿರುವುದಾಗಿಯೂ ಹೇಳಲಾಗಿದೆ. […]

‘ ಲಾ’ ಮರೆತು‌ ಮೈಮುಟ್ಟುತ್ತಿದ್ದ ಲಾಯರ್| ಕಂಬಿ ರುಚಿ ತೋರಿಸಿದ ಯುವತಿ| Read More »

ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ವಿಧಿವಶ

ನವದೆಹಲಿ : ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಕೆಲ ನಿಮಿಷಗಳ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಕಲ್ಯಾಣ್ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಸೇರಿದಂತೆ ಹಲವು ನಾಯಕರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಕಲ್ಯಾಣ್ ಸಿಂಗ್ ಅವರು ಹಲವು ತಿಂಗಳುಗಳಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗೆ ನವದೆಹಲಿಯ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಎಸ್‌ಜಿಪಿಜಿಐ)

ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ವಿಧಿವಶ Read More »

ಕಾಬೂಲ್​ನಲ್ಲಿ ಸಿಲುಕಿಕೊಂಡಿದ್ದಾರೆ ಕರ್ನಾಟಕದ ದಕ್ಷ ಅಧಿಕಾರಿ

ಬೆಂಗಳೂರು: ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದ ಐಪಿಎಸ್ ಅಧಿಕಾರಿ ಸವಿತಾ ಹಂಡೆ ಕಾಬೂಲ್​ನಲ್ಲಿದ್ದು, ಅವರು ಸುರಕ್ಷಿತವಾಗಿ ಭಾರತಕ್ಕೆ ಮರಳಲಿ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ಶುಭ ಹಾರೈಸಿದ್ದಾರೆ. ಐಪಿಎಸ್ ಅಧಿಕಾರಿ ಸವಿತಾ ಹಂಡೆ ಹೊಳೆನರಸೀಪುರ, ಬೀದರ್​​ನಲ್ಲಿ ಎಎಸ್​ಪಿ ಆಗಿ‌, ಉಡುಪಿ ಮತ್ತು ಹಾಸನ ಜಿಲ್ಲೆಯಲ್ಲಿ ಎಸ್.ಪಿ ಆಗಿ , ಬಳಿಕ ಬೆಂಗಳೂರಿನಲ್ಲಿ ಅಡ್ಮಿನ್ ವಿಭಾಗದ ಡಿಸಿಪಿಯಾಗಿ ಸೇವೆ ಸಲ್ಲಿಸಲ್ಲಿಸಿದ್ದರು. ಇದಾದ ಬಳಿಕ 2000 ಇಸವಿಯಲ್ಲಿ ಮುಂಬಡ್ತಿ ಪಡೆದು ಕೇಂದ್ರದ ಸೇವೆಗೆ ನಿಯೋಜನೆಯಾಗಿದ್ದರು. ಬಳಿಕ ಯು.ಎನ್

ಕಾಬೂಲ್​ನಲ್ಲಿ ಸಿಲುಕಿಕೊಂಡಿದ್ದಾರೆ ಕರ್ನಾಟಕದ ದಕ್ಷ ಅಧಿಕಾರಿ Read More »

ಮಂಗಳೂರು: ಮಹಿಳೆಯರ ಹೇರ್ಬ್ಯಾಂಡ್‌ನಲ್ಲಿಟ್ಟು ಚಿನ್ನ ಸಾಗಟ – ಆರೋಪಿ ವಶಕ್ಕೆ

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ 5,58,900 ಲಕ್ಷದ ಚಿನ್ನ ಸಾಗಟ ಮಾಡುತ್ತಿದ್ದಾಗ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಇಂದು ನಡೆದಿದೆ. ದುಬೈನಿಂದ ಮಂಗಳೂರಿಗೆ ಆಗಮಿಸಿದ ಮುರುಡೇಶ್ವರ ನಿವಾಸಿಯನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳಿಂದ ಕಾರ್ಯಾಚರಣೆ ನಡೆಸಿದಾಗ ಆರೋಪಿಯು ದುಬೈನಿಂದ ಮಹಿಳೆಯರ ಹೇರ್ಬ್ಯಾಂಡ್ ಇನ್ನಿತರ ವಸ್ತುಗಳ ಮೂಲಕ ಚಿನ್ನ ಸಾಗಟ ಮಾಡುತ್ತಿರುವುದು ಪತ್ತೆಯಾಗಿದೆ. ಇನ್ನು ಒಟ್ಟು 115 ಗ್ರಾಂ ನ 558900 ಲಕ್ಷ ಮೌಲ್ಯದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಮಂಗಳೂರು: ಮಹಿಳೆಯರ ಹೇರ್ಬ್ಯಾಂಡ್‌ನಲ್ಲಿಟ್ಟು ಚಿನ್ನ ಸಾಗಟ – ಆರೋಪಿ ವಶಕ್ಕೆ Read More »

ಪರಪುರುಷನೊಂದಿಗೆ ಸಂಬಂಧ – ಮಹಿಳೆಯ ಬಟ್ಟೆಕಳಚಿ ಮೆರವಣಿಗೆ‌ ಮಾಡಿ ಅನಾಗರಿಕ ‌ವರ್ತನೆ

ಜಾರ್ಖಂಡ್‌: ವಿವಾಹಿತ ಪುರುಷನೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿವಾಹಿತ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದ ಜಾರ್ಖಂಡ್‌ನ ಡುಮ್ಕಾ ಜಿಲ್ಲೆಯಲ್ಲಿ ಮಹಿಳೆಯೊಬ್ಬಳನ್ನು ಆಕೆಯ ಕುತ್ತಿಗೆಗೆ ಶೂಗಳ ಮಾಲೆ ಹಾಕಿ ವಿವಸ್ತ್ರಗೊಳಿಸಿದ್ದಾರೆ ಎಂದು ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ. ಈ ಘಟನೆ ಡುಮ್ಕಾ ಜಿಲ್ಲೆಯ ರಣೀಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಈ ಘಟನೆಯ ವಿರುದ್ಧ ಪ್ರಕರಣ

ಪರಪುರುಷನೊಂದಿಗೆ ಸಂಬಂಧ – ಮಹಿಳೆಯ ಬಟ್ಟೆಕಳಚಿ ಮೆರವಣಿಗೆ‌ ಮಾಡಿ ಅನಾಗರಿಕ ‌ವರ್ತನೆ Read More »

ಬ್ರಹ್ಮಾವರ: ವಿಶಾಲಾ ಗಾಣಿಗ ಕೊಲೆ ಪ್ರಕರಣ – ಮತ್ತೋರ್ವ ಆರೋಪಿಗಾಗಿ ಬಲೆ ಬೀಸಿದ ಪೊಲೀಸರು

ಬ್ರಹ್ಮಾವರ: ಉಪ್ಪಿನಕೋಟೆಯ ಕುಮ್ರಗೋಡು ಎಂಬಲ್ಲಿ ಫ್ಲ್ಯಾಟ್ ನಲ್ಲಿ ವಿಶಾಲಾ ಗಾಣಿಗ ಕೊಲೆಯಾಗಿ ಒಂದೂವರೆ ತಿಂಗಳು ಕಳೆದಿದೆ. ಕೊಲೆಯಾದ ಕೆಲವೇ ದಿನಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ವಿಶಾಲಾಳ ಪತಿ ಸಮೇತ ಇಬ್ಬರನ್ನು ಬಂಧಿಸಲಾಯಿತು. ಇದೀಗ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ, ತಲೆಮರೆಸಿಕೊಂಡಿರುವ ಮೂರನೇ ವ್ಯಕ್ತಿ ಗೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣದ ಬಯಲಿಗೆಳೆಯಲು ಸಾಕಷ್ಟು ಶ್ರಮ ಪಟ್ಟಿದ್ದ ಪೊಲೀಸರು, ನೇಪಾಳ ಗಡಿಯ ಸಮೀಪದಿಂದ ಸ್ವಾಮಿಂತ್ ನಿಶಾದ್ ಎಂಬಾತನನ್ನು ಬಂಧಿಸಿದ್ದರು. ವಿಶಾಲಾಳ ಪತಿ ರಾಮಕೃಷ್ಣ ಗಾಣಿಗ ತನ್ನ ಪತ್ನಿಯ ಮೇಲೆ ತುಂಬಾ

ಬ್ರಹ್ಮಾವರ: ವಿಶಾಲಾ ಗಾಣಿಗ ಕೊಲೆ ಪ್ರಕರಣ – ಮತ್ತೋರ್ವ ಆರೋಪಿಗಾಗಿ ಬಲೆ ಬೀಸಿದ ಪೊಲೀಸರು Read More »

ಮಂಗಳೂರು: ರೈಲಿನಡಿಗೆ ಸಿಲುಕಿ ಮಹಿಳೆಯರಿಬ್ಬರು ದುರ್ಮರಣ

ಮಂಗಳೂರು: ಹಳಿ ದಾಟುವಾಗ ರೈಲಿನಡಿಗೆ ಸಿಲುಕಿ ಮಹಿಳೆಯರಿಬ್ಬರು ಸಾವನಪ್ಪಿದ ಘಟನೆ ನಗರದ ಮಹಾಕಾಳಿ ಪಡ್ಪು ಎಂಬಲ್ಲಿ ಆ. 21 ರ ಶನಿವಾರ ಬೆಳಿಗ್ಗೆ ಸಂಭವಿಸಿದ. ಮೃತರನ್ನು ಸ್ಥಳೀಯ ನಿವಾಸಿಗಳಾದ ವಸಂತಿ (50) ಮತ್ತು ಪ್ರೇಮಾ (48) ಎಂದು ಗುರುತಿಸಲಾಗಿದೆ. ಬೀಡಿ ಕಾರ್ಮಿಕರಾಗಿದ್ದ ಇವರಿಬ್ಬರು ದಿನಿತ್ಯ ಕುಡುಪ್ಪಾಡಿ ದೋಟ ಎಂಬಲ್ಲಿಂದ ಮಹಾಕಾಳಿಪಡ್ಪುವಿನಲ್ಲಿರುವ ಬ್ರ್ಯಾಂಚ್ ಗೆ ರೈಲು ಹಳಿಯನ್ನು ದಾಟಿ ಬೀಡಿ ಕೊಂಡೊಯ್ಯುತ್ತಿದ್ದರು. ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಪಾರ್ಥಿವ ಶರೀರವನ್ನು ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.

ಮಂಗಳೂರು: ರೈಲಿನಡಿಗೆ ಸಿಲುಕಿ ಮಹಿಳೆಯರಿಬ್ಬರು ದುರ್ಮರಣ Read More »

ಬೆಲೆ ಇಳಿಕೆ ನಿರೀಕ್ಷೆಯಲ್ಲಿ ಅಡುಗೆ ಎಣ್ಣೆ| ಆಮದು ಸುಂಕ ಕಡಿತಕ್ಕೆ ಕೇಂದ್ರ ನಿರ್ಧಾರ

ನವದೆಹಲಿ : ಸಾರ್ವಜನಿಕರಿಗೆ ದೊಡ್ಡ ಪರಿಹಾರ ಸಿಗಲಿದ್ದು, ಹಬ್ಬಗಳಿಗೆ ಮುನ್ನ ಖಾದ್ಯ ತೈಲವನ್ನು ಅಗ್ಗವಾಗಿಸಲು ಕೇಂದ್ರ ಸರ್ಕಾರವು ದೊಡ್ಡ ಹೆಜ್ಜೆಯನ್ನ ಇಟ್ಟಿದೆ. ತೆರಿಗೆ ಕಡಿತಗೊಳಿಸುವುದಾಗಿ ಸರ್ಕಾರ ಘೋಷಿಸಿದೆ. ಕಳೆದ ಹಲವು ತಿಂಗಳುಗಳಿಂದ ಖಾದ್ಯ ತೈಲದ ಬೆಲೆಗಳು ವಿಪಾರೀತ ಏರಿಕೆ ಆಗ್ತಿದ್ದು, ಕೇಂದ್ರ ಸರ್ಕಾರವು ಬೆಲೆಗಳನ್ನ ನಿಯಂತ್ರಿಸುವ ಮೂಲಕ ಸಾಮಾನ್ಯ ಜನರಿಗೆ ಪರಿಹಾರ ನೀಡುವ ದೊಡ್ಡ ನಿರ್ಧಾರಕ್ಕೆ ಬಂದಿದೆ. ಅದರಂತೆ, ಸರ್ಕಾರ ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಆಮದು ಸುಂಕವನ್ನು ಕಡಿಮೆ ಮಾಡಿದೆ. ಇದನ್ನು ಶೇ.15 ರಿಂದ

ಬೆಲೆ ಇಳಿಕೆ ನಿರೀಕ್ಷೆಯಲ್ಲಿ ಅಡುಗೆ ಎಣ್ಣೆ| ಆಮದು ಸುಂಕ ಕಡಿತಕ್ಕೆ ಕೇಂದ್ರ ನಿರ್ಧಾರ Read More »

ಸುಳ್ಯ | ಹಿಂದೂ ಯುವತಿಯರ ಜೊತೆ ಮುಸ್ಲಿಂ ಯುವಕನ ಪ್ರಯಾಣ…!? ತಪ್ಪು ಮಾಹಿತಿ‌ಯಿಂದ ಬಸ್ ಅಡ್ಡಗಟ್ಟಿ ಪೇಚಿಗೆ ಸಿಲುಕಿದ ಹಿಂಜಾವೇ | ಇತ್ಯರ್ಥ ಬಳಿಕವೂ ನಿಲ್ಲದ ಆವೇಶ, ಪೊಲೀಸರಿಗೇ ಧಮ್ಕಿ….!

ಸುಳ್ಯ: ರಾತ್ರಿ ಬಸ್ಸಿನಲ್ಲಿ ಹಿಂದೂ ಯುವತಿಯರ ಜೊತೆ ಮುಸ್ಲಿಂ ಯುವಕನೊಬ್ಬ ಪ್ರಯಾಣಿಸುತ್ತಿರುವುದಾಗಿ ತಪ್ಪು ಮಾಹಿತಿ ಪಡೆದ ಹಿಂಜಾವೇ ಕಾರ್ಯಕರ್ತರು ಬಸ್ಸನ್ನು ತಡೆದು ಬಳಿಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ಇತ್ಯರ್ಥವಾದ ನಂತರವೂ ಪೊಲೀಸರ ಮೇಲೆಯೇ ಧಮ್ಕಿ ಹಾಕಿದ ಘಟನೆ ನಿನ್ನೆ ರಾತ್ರಿ ಸುಳ್ಯದಲ್ಲಿ ನಡೆದಿದೆ. ಪುತ್ತೂರಿನಿಂದ ನಿನ್ನೆ ರಾತ್ರಿ ಬೆಂಗಳೂರಿಗೆ ಹೊರಟಿದ್ದ ಸಾರಿಗೆ ಬಸ್ಸಿನಲ್ಲಿ ಬೆಂಗಳೂರಿನ ಇಬ್ಬರು ಯುವತಿಯರು ಪ್ರಯಾಣಿಸುತ್ತಿದ್ದರು. ಈ ವೇಳೆ ಪುತ್ತೂರಿನಿಂದ ಕುಂಬ್ರಕ್ಕೆ ಟಿಕೆಟ್ ಮಾಡಿದ್ದ ಮುಸ್ಲಿಮ್ ಯುವಕನೋರ್ವನೂ ಪ್ರಯಾಣಿಸುತ್ತಿದ್ದ. ಬಸ್ ಕುಂಬ್ರ ತಲುಪುತ್ತಿದ್ದಂತೆ ಬೆಂಗಳೂರಿನಿಂದ

ಸುಳ್ಯ | ಹಿಂದೂ ಯುವತಿಯರ ಜೊತೆ ಮುಸ್ಲಿಂ ಯುವಕನ ಪ್ರಯಾಣ…!? ತಪ್ಪು ಮಾಹಿತಿ‌ಯಿಂದ ಬಸ್ ಅಡ್ಡಗಟ್ಟಿ ಪೇಚಿಗೆ ಸಿಲುಕಿದ ಹಿಂಜಾವೇ | ಇತ್ಯರ್ಥ ಬಳಿಕವೂ ನಿಲ್ಲದ ಆವೇಶ, ಪೊಲೀಸರಿಗೇ ಧಮ್ಕಿ….! Read More »

ಶೀಘ್ರದಲ್ಲೇ ಪ್ರಾಥಮಿಕ ತರಗತಿಗಳೂ ಪ್ರಾರಂಭ – ಮಕ್ಕಳಿಗೆ ಕೋವಿಡ್ ವರದಿ ಕಡ್ಡಾಯವಲ್ಲ – ಶಿಕ್ಷಣ ಸಚಿವ ಬಿ.ಸಿ ನಾಗೇಶ್.

ಮೈಸೂರು: ವಿದ್ಯಾರ್ಥಿಗಳಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ ಒಂದು ವೇಳೆ ವಿದ್ಯಾರ್ಥಿಗಳಿಗೆ ಕೊರೋನಾ ದೃಢಪಟ್ಟರೆ ಒಂದು ವಾರ ತರಗತಿ ಅಮಾನತು ಮಾಡಲಾಗುತ್ತದೆ. ಸ್ಯಾನಿಟೈಸ್ ಮಾಡಿ ವಾರದ ನಂತರ ಮತ್ತೆ ತರಗತಿಗಳನ್ನು ಆರಂಭಿಸಲಾಗುವುದು. ಶಾಲೆ ಆರಂಭಿಸುವುದರಲ್ಲಿ ತೊಂದರೆ ಇದೆ ಆದರೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ತಜ್ಞರ ಅಭಿಪ್ರಾಯದಂತೆ ಶಾಲೆಗಳನ್ನು ಆರಂಭ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಕೊರೋನಾ ಮಕ್ಕಳ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ. ಪ್ರಾಣಹಾನಿಯಂತಹ

ಶೀಘ್ರದಲ್ಲೇ ಪ್ರಾಥಮಿಕ ತರಗತಿಗಳೂ ಪ್ರಾರಂಭ – ಮಕ್ಕಳಿಗೆ ಕೋವಿಡ್ ವರದಿ ಕಡ್ಡಾಯವಲ್ಲ – ಶಿಕ್ಷಣ ಸಚಿವ ಬಿ.ಸಿ ನಾಗೇಶ್. Read More »