August 2021

ಉಡುಪಿ: ಬಿ.ಆರ್ ಶೆಟ್ಟಿ ಆಸ್ಪತ್ರೆಯಲ್ಲಿ ಮುಗಿಯದ ಕಥೆಯಾದ ಸಿಬ್ಬಂದಿ ಮುಷ್ಕರ

ಉಡುಪಿ: ಇಲ್ಲಿನ ಬಿ.ಆರ್ ಶೆಟ್ಟಿ ನಿರ್ವಹಣೆ ಮಾಡುತ್ತಿರುವ ಆಸ್ಪತ್ರೆಯ ಸಿಬ್ಬಂದಿಯ ಮುಷ್ಕರ ಮುಗಿಯದ ಕಥೆಯಾಗಿದ್ದು, ಸಾರ್ವಜನಿಕರು, ಆಸ್ಪತ್ರೆಗೆ ಆಗಮಿಸುತ್ತಿರು ರೋಗಿಗಳಿಗೆ ಸಂಕಷ್ಟ ಎದುರಾಗಿದೆ. ವೇತನ ನೀಡುವಂತೆ ಆಗ್ರಹಿಸಿ ಇತ್ತೀಚೆಗೆ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ 16 ಸಿಬ್ಬಂದಿಯನ್ನು ಬಿ.ಆರ್ ಶೆಟ್ಟಿ ಆಸ್ಪತ್ರೆಯ ಆಡಳಿತ ಮಂಡಳಿ ಕೆಲಸದಿಂದಲೇ ತೆಗೆದು ಹಾಕಿದೆ. ಹೀಗಾಗಿ ಕೆಲಸದಿಂದ ತೆಗೆದುಹಾಕಲು ಕಾರಣ ತಿಳಿಸಲು ಪಟ್ಟು ಹಿಡಿದು ಬಿ.ಆರ್.ಶೆಟ್ಟಿ ಆಸ್ಪತ್ರೆಯ ಮುಂದೆ ಸಿಬ್ಬಂದಿ ಮತ್ತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲಸ ಕಳೆದುಕೊಂಡವರ ಬೆಂಬಲಕ್ಕೆ ಇತರ […]

ಉಡುಪಿ: ಬಿ.ಆರ್ ಶೆಟ್ಟಿ ಆಸ್ಪತ್ರೆಯಲ್ಲಿ ಮುಗಿಯದ ಕಥೆಯಾದ ಸಿಬ್ಬಂದಿ ಮುಷ್ಕರ Read More »

ನಮಗೆ ಭಾರತವೇ ಸುರಕ್ಷಿತ ರಾಷ್ಟ್ರ| ಮಂಗಳೂರು ವಿವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ ನೂರಾರು ಅಫ್ಘಾನ್ ವಿದ್ಯಾರ್ಥಿಗಳು|

ಮಂಗಳೂರು: ಅಫ್ಘಾನಿಸ್ತಾನ ತಾಲಿಬಾನ್‌ಗಳ ವಶವಾದ ಬೆನ್ನಲ್ಲೇ ಇಡೀ ಜಗತ್ತು ಅಫ್ಘಾನಿಸ್ತಾನದ ಕಡೆಗೆ ಕಿಸುಗಣ್ಣು ಇರಿಸಿದೆ, ಅದರೆ ಇತ್ತಾ ಅಫ್ಘಾನಿಸ್ತಾನದ ವಿದ್ಯಾರ್ಥಿಗಳು ಮಂಗಳೂರು ವಿಶ್ವ ವಿದ್ಯಾನಿಲಯದೆಡೆ ಹೆಜ್ಜೆ ಹಾಕಲು ಮುಂದಾಗಿದ್ದು, ಸಾವಿರಾರು ವಿದ್ಯಾರ್ಥಿಗಳು ವಿ.ವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಪ್ಘಾನಿಸ್ತಾನದ ಬೆಳವಣಿಗೆಯ ಬಳಿಕ ನಮಗೆ ಭಾರತವು ಸುರಕ್ಷಿತ ರಾಷ್ಟ್ರವೆಂದು ಭಾರತದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ಘಾನ್ ವಿದ್ಯಾರ್ಥಿಗಳ ಹೇಳಿಕೆಯನ್ನು ನಾವು ಮತ್ತೊಮ್ಮೆ ನೆನಪಿಸಿಕೊಳ್ಳ ಬಹುದು. ಅಪ್ಘಾನಿಸ್ತಾನದ ಸಾವಿರಾರು ವಿದ್ಯಾರ್ಥಿಗಳು ಮಂಗಳೂರು ವಿ.ವಿ.ಯಲ್ಲಿ ವ್ಯಾಸಂಗ ಮಾಡಲು ಅರ್ಜಿ ಸಲ್ಲಿಕೆ ಮಾಡಿದ್ದು, ಇಷ್ಟೊಂದು

ನಮಗೆ ಭಾರತವೇ ಸುರಕ್ಷಿತ ರಾಷ್ಟ್ರ| ಮಂಗಳೂರು ವಿವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ ನೂರಾರು ಅಫ್ಘಾನ್ ವಿದ್ಯಾರ್ಥಿಗಳು| Read More »

ಸುಳ್ಯ| ದನಕ್ಕೆ ಗುದ್ದಿದ ಬೈಕ್, ದನ ಸ್ಥಳದಲ್ಲೇ ಸಾವು, ಸವಾರ ಗಂಭೀರ|

ಸುಳ್ಯ: ಮಾಣಿ‌- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಗೂನಡ್ಕ ಸಮೀಪ ಸುಳ್ಯದಿಂದ ಕೊಯನಾಡಿಗೆ ಹೋಗುತ್ತಿದ್ದ ಬೈಕ್ ದನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದನ ಸ್ಥಳದಲ್ಲಿ ಸಾವಿಗೀಡಾಗಿ ಬೈಕ್ ಸವಾರರು ಗಂಭೀರ ಗಾಯಗೊಂಡಿರುವ ಘಟನೆ ಮಂಗಳವಾರ ತಡರಾತ್ರಿ‌ ಸಂಭವಿಸಿದೆ. ಗಾಯಗೊಂಡವರನ್ನು ಕೊಯಿನಾಡು ಪರಿಸರದ ಸವಾದ್ ಹಾಗೂ ಮಿರ್ಷದ್‌ ಎಂದು ಗುರುತಿಸಲಾಗಿದೆ.ಈ ಇಬ್ಬರು ಯುವಕರು ಮಂಗಳೂರಿಗೆ ಹೋಗಿದ್ದು ಸಂಜೆ ಮರಳಿ ಬರುವ ಸಂದರ್ಭದಲ್ಲಿ ಗೂನಡ್ಕ ಸಮೀಪ ಘಟನೆ ಸಂಭವಿಸಿದೆ. ಅಪಘಾತದಿಂದ ಸವಾದ್ ರವರಿಗೆ ತಲೆಗೆ ಗಂಭೀರ ಗಾಯವಾಗಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ

ಸುಳ್ಯ| ದನಕ್ಕೆ ಗುದ್ದಿದ ಬೈಕ್, ದನ ಸ್ಥಳದಲ್ಲೇ ಸಾವು, ಸವಾರ ಗಂಭೀರ| Read More »

ಸುಳ್ಳು ವರದಕ್ಷಿಣೆ ಆರೋಪ| ಸೊಸೆಯ ಕಿರುಕುಳ ತಾಳಲಾರದೆ ಮಾವ ಆತ್ಮಹತ್ಯೆ

ಪಂಜಾಬ್: ವರದಕ್ಷಿಣೆ ಕಿರುಕುಳ ತಾಳಲಾರದೆ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ, ಆತ್ಮಹತ್ಯೆ ಮಾಡಿಕೊಂಡ ಅದೆಷ್ಟೋ ಮಹಿಳೆಯರ ಕತೆಗಳನ್ನು ಕೇಳುತ್ತಲೇ ಇರುತ್ತೇವೆ. ಪಂಜಾಬ್​ನ ಲುಧಿಯಾನದ 60 ವರ್ಷದ ವ್ಯಕ್ತಿಯೊಬ್ಬರು ತಮ್ಮ ಸೊಸೆ ಮಾಡಿದ ಸುಳ್ಳು ವರದಕ್ಷಿಣೆ ಆರೋಪದಿಂದ ಅವಮಾನಗೊಂಡು, ತಮಗೆ ತಾವೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳಂತೆ ನೋಡಿಕೊಳ್ಳುತ್ತಿದ್ದ ಸೊಸೆ ವರದಕ್ಷಿಣೆ ಆರೋಪ ಮಾಡಿ, ಪೊಲೀಸರಿಗೆ ದೂರು ನೀಡುತ್ತೇವೆಂದು ಹೇಳಿದ್ದನ್ನು ಸಹಿಸಲಾಗದೆ ಆ ವ್ಯಕ್ತಿ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ. 60 ವರ್ಷದ ಆ ವ್ಯಕ್ತಿಗೆ ಸೊಸೆ ಹಾಗೂ ಆಕೆಯ

ಸುಳ್ಳು ವರದಕ್ಷಿಣೆ ಆರೋಪ| ಸೊಸೆಯ ಕಿರುಕುಳ ತಾಳಲಾರದೆ ಮಾವ ಆತ್ಮಹತ್ಯೆ Read More »

ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕುಮಾರ್ ಕುಮಾರಮಂಗಲ ಇನ್ನಿಲ್ಲ

ಪುತ್ತೂರು: ಶಿಕ್ಷಣ ಕ್ಷೇತ್ರದಲ್ಲಿನ ಉತ್ತಮ ಸೇವೆಗಾಗಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತರಾಗಿದ್ದ ನಿವೃತ್ತ ಶಿಕ್ಷಕ ಕುಮಾರ್ ಮಾಸ್ಟರ್ ಕುಮಾರಮಂಗಲ(68) ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪುತ್ತೂರು ತಾಲೂಕಿನ ಕಬಕ ಗ್ರಾಮದ ವಿದ್ಯಾಪುರ ಎಂಬಲ್ಲಿನ ನಿವಾಸಿಯಾಗಿರುವ ಕುಮಾರ್ ಮಾಸ್ಟರ್ ಅವರು 36 ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇವರ ಸೇವೆಯನ್ನು ಗುರುತಿಸಿ 1994ರಲ್ಲಿ ಜಿಲ್ಲಾ ಪ್ರಶಸ್ತಿ, 2009ರಲ್ಲಿ ರಾಜ್ಯ ಪ್ರಶಸ್ತಿ ಹಾಗೂ 2011ರಲ್ಲಿ

ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕುಮಾರ್ ಕುಮಾರಮಂಗಲ ಇನ್ನಿಲ್ಲ Read More »

ಬಿಕ್ಷುಕರನ್ನು ಪಾಕಿಸ್ತಾನಕ್ಕೆ ತೆರಳುವಂತೆ ತಾಕೀತು ಮಾಡಿ ಥಳಿತ

ರಾಜಸ್ಥಾನ: ಭಿಕ್ಷುಕರನ್ನು ಪಾಕಿಸ್ತಾನಕ್ಕೆ ಹೋಗುವಂತೆ ಆಗ್ರಹಿಸಿ ದುಷ್ಕರ್ಮಿಗಳು ಥಳಿಸಿರುವ ಅಮಾನವೀಯ ಘಟನೆ ರಾಜಸ್ಥಾನದ ಅಜ್ಮೀರ್ ನಲ್ಲಿ ನಡೆದಿದೆ. ದುಷ್ಕರ್ಮಿಗಳ ತಂಡ ಇಬ್ಬರು ಪುರುಷ ಮತ್ತು ಓರ್ವ ಮಹಿಳಾ ಭಿಕ್ಷುಕಿ ಮೇಲೆ ಕಿರುಕುಳ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿನ ದೃಶ್ಯಗಳಲ್ಲಿ ವ್ಯಕ್ತಿ ಮೇಲೆ ಥಳಿಸುವುದು ಮತ್ತು ಆತನ ಕುಟುಂಬಸ್ಥರನ್ನು ನಿಂದಿಸಿರುವುದು ಸೆರೆಯಾಗಿದೆ. ಘಟನೆಗೆ ಸಂಬಂಧಿಸಿ ಲಲಿತ್ ಶರ್ಮಾ, ಸುರೇಂದ್ರ , ತೇಜಪಾಲ್, ರೋಹಿತ್ ಶರ್ಮಾ, ಶೈಲೇಂದ್ರ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ನೀವು ಉತ್ತರ

ಬಿಕ್ಷುಕರನ್ನು ಪಾಕಿಸ್ತಾನಕ್ಕೆ ತೆರಳುವಂತೆ ತಾಕೀತು ಮಾಡಿ ಥಳಿತ Read More »

ಕಾಬೂಲ್‍ನಿಂದ ಉಕ್ರೇನ್ ವಿಮಾನ ಹೈಜಾಕ್

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ತೆರಳಿದ್ದ ಉಕ್ರೇನ್ ವಿಮಾನ ಹೈಜಾಕ್ ಮಾಡಲಾಗಿದೆ. ತಮ್ಮ ವಿಮಾನವನ್ನು ಇರಾನ್ ಗೆ ತೆಗೆದುಕೊಂಡು ಹೋಗಲಾಗಿದೆ ಎಂದು ಉಕ್ರೇನ್ ಸರ್ಕಾರದ ಸಚಿವರು ಹೇಳಿದ್ದಾರೆ. ಭಾನುವಾರವೇ ವಿಮಾನವೇ ಹೈಜಾಕ್ ಆಗಿದ್ದು, ಕೆಲ ಅಪರಿಚಿತರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಉಕ್ರೇನ್ ಸರ್ಕಾರ ಹೇಳಿದೆ. ಉಕ್ರೇನ್ ಡೆಪ್ಯುಟಿ ವಿದೇಶಾಂಗ ಮಂತ್ರಿ ಯೆವ್ಗೆನಿ ಯೆನಿನ್, ಭಾನುವಾರ ಕೆಲ ಅಪರಿಚಿತರು ವಿಮಾನ ಹೈಜಾಕ್ ಮಾಡಿದ್ದು, ಇರಾನ್ ನತ್ತ ತೆಗೆದುಕೊಂಡು ಹೋಗಿದ್ದಾರೆ. ನಮ್ಮ ಜನರು ಏರ್ ಪೋರ್ಟ್ ತಲುಪದ ಕಾರಣ

ಕಾಬೂಲ್‍ನಿಂದ ಉಕ್ರೇನ್ ವಿಮಾನ ಹೈಜಾಕ್ Read More »

ಯೂನಿವರ್ಸಿಟಿ ಕ್ಯಾಂಪಸ್ ನಲ್ಲೇ ಮಧುಮಂಚದ ಸಂಭ್ರಮ…! ಹೈದರಾಬಾದ್ ನ ವಿ ವಿ ಅತಿಥಿ ಗೃಹದಲ್ಲಿ ಹೂವಿನ ಹಾಸಿಗೆಯಲ್ಲಿ ಹೊರಳಾಡಿದವರಾರು?

ಹೈದರಾಬಾದ್:‌ ವಿಶ್ವವಿದ್ಯಾಲಯದ ಅತಿಥಿಗೃಹಗಳನ್ನು ಸೆಮಿನಾರ್‌, ಉಪನ್ಯಾಸಗಳಿಗೆ ಬಳಕೆ ಮಾಡಲಾಗುತ್ತದೆ. ಆದರೆ ಆಂಧ್ರಪ್ರದೇಶದ ಕಾಕಿನಾಡ ಜವಾಹರಲಾಲ್‌ ನೆಹರು ಟೆಕ್ನಾಲಜಿಕಲ್‌ ಯೂನಿವರ್ಸಿಟಿ ಅತಿಥಿಗೃಹವನ್ನು ಹನಿಮೂನ್‌ ಗೆ ಬಳಕೆ ಮಾಡಿಕೊಂಡಿದ್ದು ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ವಿವಿಯ ಮಹಿಳಾ ಸಬಲೀಕರಣ ಕೋಶದ ನಿರ್ದೇಶಕಿ ಸ್ವರ್ಣಕುಮಾರಿ ಅವರು ವಿವಿಯ ಕ್ಯಾಂಪಸ್‌ ನಲ್ಲಿರುವ ಗೆಸ್ಟ್‌ ಹೌಸ್‌ ಪಡೆದುಕೊಂಡಿದ್ದರು. ಆದರೆ ಅವರು ಕಾಯ್ದಿರಿಸಿದ ಕೋಣೆಯನ್ನು ಎರಡು ದಿನ ಹನಿಮೂನ್‌ ಗೆ ಬಳಸಿಕೊಳ್ಳಲಾಗಿದೆ ಎಂಬುದು ಇದೀಗ ಹೊರಬಿದ್ದಿದೆ. ಕೋಣೆಯನ್ನು ತೆರವು ಮಾಡಿದ ಬಳಿಕ ಪರಿಶೀಲನೆ ನಡೆಸಿದ ಸಿಬ್ಬಂದಿಗೆ

ಯೂನಿವರ್ಸಿಟಿ ಕ್ಯಾಂಪಸ್ ನಲ್ಲೇ ಮಧುಮಂಚದ ಸಂಭ್ರಮ…! ಹೈದರಾಬಾದ್ ನ ವಿ ವಿ ಅತಿಥಿ ಗೃಹದಲ್ಲಿ ಹೂವಿನ ಹಾಸಿಗೆಯಲ್ಲಿ ಹೊರಳಾಡಿದವರಾರು? Read More »

ಫೈರಿಂಗ್ ಆಗುತ್ತಿದ್ದುದ್ದನ್ನು ಕಣ್ಣಾರೆ ನೋಡಿದ ದಿನೇಶ್ ರೈ

ಮಂಗಳೂರು: ತಾಲಿಬಾನ್ ಗಳ ಕಪಿಮುಷ್ಠಿಗೆ ಸಿಲುಕಿರುವ ಅಪ್ಘಾನಿಸ್ತಾನದಿಂದ ಮರಳಿ ತಾಯ್ನಾಡಿಗೆ ಬಂದಿರುವ ಭಾರತೀಯರು ಅಲ್ಲಿನ ಪರಿಸ್ಥಿತಿಗಳ ಭಯಾನಕ ಸ್ಥಿತಿಗಳ ಬಗ್ಗೆ ತೆರೆದಿಟ್ಟಿದ್ದಾರೆ. ಗಳೂರಿನ ಬಜಪೆ ನಿವಾಸಿ ದಿನೇಶ್ ರೈ ಅವರು ನ್ಯಾಟೋ ಮಿಲಿಟರಿ ಪಡೆಯ ಜೊತೆ ಕೆಲಸ ನಿರ್ವಹಿಸುತ್ತಿದ್ದು, ಅಪ್ಘಾನಿಸ್ತಾನದಿಂದ ಸುರಕ್ಷಿತವಾಗಿ ದೇಶಕ್ಕೆ ಆಗಮಿಸಿದ್ದಾರೆ . ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಅಪ್ಘಾನಿಸ್ತಾನದ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ನಾನು ಕಳೆದ 10 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ನ್ಯಾಟೋ ಮಿಲಿಟರಿ ಪಡೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮಗೆ ಹೊರಗಿನ ಜನರ ಯಾವುದೇ

ಫೈರಿಂಗ್ ಆಗುತ್ತಿದ್ದುದ್ದನ್ನು ಕಣ್ಣಾರೆ ನೋಡಿದ ದಿನೇಶ್ ರೈ Read More »

ಮಂಗಳೂರು: ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಮಂಗಳೂರು: ರಾವ್ ಅಂಡ್ ರಾವ್ ಸರ್ಕಲ್ ರಸ್ತೆಯಲ್ಲಿರುವ ಸ್ಟಾರ್ ಟವರ್ ಬಳಿ ಆ. 24ರಂದು ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ವರದಿ ಪ್ರಕಾರ, ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯ ವಯಸ್ಸು 45 ವರ್ಷ ಎಂದು ಅಂದಾಜಿಸಲಾಗಿದೆ. ಮೃತನ ಬಲಗೈ `ಆರ್ ಎಸ್’, ‘ಓಂ’ ಮತ್ತು ನಕ್ಷತ್ರದ ಹಚ್ಚೆ ಇದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದೇಹದ ಮೇಲೆ ಯಾವುದೇ ಬಾಹ್ಯ ಗಾಯಗಳಿಲ್ಲ ಎಂದು ಪೆÇಲೀಸರು ಮಾಹಿತಿ ನೀಡಿದ್ದಾರೆ.

ಮಂಗಳೂರು: ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ Read More »