Ad Widget .

ಉಡುಪಿ| ಪ್ರೇಯಸಿಯ ಇರಿದು ಕೊಂದ ಪ್ರೇಮಿಯೂ ಸಾವು| ಸಾವಲ್ಲಿ ಕೊನೆಯಾಯ್ತು ಭಗ್ನ ಪ್ರೇಮ

ಉಡುಪಿ: ಪ್ರೇಯಸಿಗೆ ಚೂರಿಯಿಂದ ಇರಿದು ತಾನೂ ಕುತ್ತಿಗೆ ಕೊಯ್ದುಕೊಂಡ ಪ್ರಿಯಕರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಪ್ರೀತಿ ಸಾವಲ್ಲಿ ಅಂತ್ಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ಗಾಯಗೊಂಡಿದ್ದ ಪ್ರೇಯಸಿ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಕೊನೆಯುಸಿರೆಳೆದಿದ್ದಳು.

Ad Widget . Ad Widget .

ಉಡುಪಿಯ ಸಂತೆಕಟ್ಟೆ ಸಮೀಪದ ಬ್ಯಾಂಕ್ ಉದ್ಯೋಗಿಯಾಗಿದ್ದ ಸೌಮ್ಯಶ್ರೀ ಹಾಗೂ ಮೆಡಿಕಲ್ ಉದ್ಯೋಗಿಯಾಗಿದ್ದ ಸಂದೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಸೌಮ್ಯಶ್ರೀಗೆ ವಾರದ ಹಿಂದಷ್ಟೇ‌ ಬೇರೆ ಯುವಕನೊಂದಿಗೆ ನಿಶ್ಚಿತಾರ್ಥ ನೆರವೇರಿತ್ತು. ಇದರಿಂದ ಸಂದೇಶ ಕುಲಾಲ್ ಕುಪಿತಗೊಂಡಿದ್ದ, ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವೂ ನಡೆದಿತ್ತು. ಹೀಗಿರುವಾಗ ನಿನ್ನೆ ಸಂಜೆ ಆಕೆ ಬ್ಯಾಂಕಿನಿಂದ ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭ ಸಂದೇಶ್​ ಕುಲಾಲ್ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಬಳಿ ಅಡ್ಡಗಟ್ಟಿ ನಿಂತಿದ್ದಾನೆ. ಈ ವೇಳೆ ಯುವತಿಯ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ.

Ad Widget . Ad Widget .

ಇಬ್ಬರ ನಡುವಿನ ಜಗಳ ತಾರಕಕ್ಕೇರಿದ್ದು, ಕೋಪದಿಂದ ಸಂದೇಶ್​ ಚಾಕು ತೆಗೆದು ಸೌಮ್ಯಶ್ರೀ ಸ್ಥಳದಲ್ಲೇ ಇರಿದಿದ್ದಾನೆ. ಇದರಿಂದ ಸೌಮ್ಯಶ್ರೀ ದ್ವಿಚಕ್ರವಾಹನದಿಂದ ಕೆಳಗೆ ಕುಸಿದು ಬಿದ್ದು ಒದ್ದಾಡಲು ಆರಂಭಿಸಿದ್ದಾಳೆ. ಬಳಿಕ ಅದೇ ಚಾಕುವಿನಿಂದ ತಾನೂ ತನ್ನ ಕುತ್ತಿಗೆ ಕೊಯ್ದುಕೊಂಡಿದ್ದಾನೆ. ಇಬ್ಬರು ಒದ್ದಾಡುವುದನ್ನು ನೋಡಿದ ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಉಡುಪಿ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಎಸ್ಪಿ ಕುಮಾರ್ ಚಂದ್ರ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿಯನ್ನು ಕಲೆಹಾಕಿದ್ದಾರೆ.

Leave a Comment

Your email address will not be published. Required fields are marked *