Ad Widget .

ಬಾರಿಯಂಡ ದೀಪಕ್ ಜೋಯಪ್ಪರಿಗೆ ಜರ್ನಲಿಸಂನಲ್ಲಿ ಪಿಹೆಚ್.ಡಿ.

Ad Widget . Ad Widget .

ಮಡಿಕೇರಿ: ಕೊಡಗಿನ ಮದೆನಾಡು ಗ್ರಾಮದ ಬಾರಿಯಂಡ ದೀಪಕ್ ಜೋಯಪ್ಪ ಅವರು ಸಂಶೋಧಸಿದ ’ಇಂಗ್ಲಿಷ್ ಮತ್ತು ಕನ್ನಡ ನ್ಯೂಸ್ ವೆಬ್‌ಸೈಟ್ಸ್: ಸ್ಟಡಿ ಆನ್ ದೇರ್ ಪೊಟೆನ್‌ಷ್ಯಾಲಿಟಿ ಆಂಡ್ ಸಸ್ಟೈನೇಬಿಲಿಟಿ’ ಎಂಬ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್(ಮಾಹೆ) ಸಂಸ್ಥೆಯು ಡಾಕ್ಟರೇಟ್ ನೀಡಿದೆ. ದೀಪಕ್ ಅವರು ಈ ಸಂಸ್ಥೆಯು ಕೊಡುವ ಪ್ರತಿಷ್ಠಿತ ’ಡಾ. ಟಿಎಂಎ ಪೈ’ ವಿದ್ಯಾರ್ಥಿ ವೇತನದಲ್ಲಿ ಸಂಶೋಧನೆ ನಡೆಸಿದ್ದರು. ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸಂಸ್ಥೆಯ ಪ್ರೊಫೆಸರ್ ಮತ್ತು ನಿರ್ದೇಶಕರಾದ ಡಾ. ಪದ್ಮ ರಾಣಿ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆಯನ್ನು ಮಾಡಲಾಗಿತ್ತು.

Ad Widget . Ad Widget .

ದೀಪಕ್ ಆಸ್ರ್ಟೇಲಿಯಾದ ’ಏಶೀಯಾ ಪೆಸಿಫಿಕ್ ಮೀಡಿಯಾ ಎಜುಕೇಶನ್’ ಮತ್ತು ಮಲೇಶಿಯಾದ ’ಸರ್ಚ್ ಜರ್ನಲ್ ಆಫ್ ಮೀಡಿಯಾ ಅಂಡ್ ಕಮಿನಿಕೇಶನ್ ರಿಸರ್ಚ್’ ಎಂಬ ಅಂತರಾಷ್ಟ್ರೀಯ ಸ್ಕೋಪಸ್ ಇಂಡೆಕ್ಸ್ಡ್ ಜರ್ನಲ್‌ಗಳಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ, ಆರು ಅಂತರಾಷ್ಟ್ರೀಯ ಎಜುಕೇಶನ್ ಸಮ್ಮೇಳನಗಳಲ್ಲಿ ವಿಚಾರ ಮಂಡನೆ ಮಾಡಿದ್ದಾರೆ.
ಪ್ರಸ್ತುತ ಇವರು ಬೆಂಗಳೂರಿನ ಕ್ರೈಸ್ಟ್ ಯೂನಿರ್ವಸಿಟಿಯಲ್ಲಿ ಅಸಿಸ್ಟೆಂಟ್ ಪ್ರೊಫೆರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಮದೆನಾಡು ಗ್ರಾಮದ ನಿವೃತ್ತ ಮುಖ್ಯೋಪಧ್ಯಾಯ ಬಾರಿಯಂಡ ಜೋಯಪ್ಪ ಮತ್ತು ಭಾರತಿ ದಂಪತಿಗಳ ಪುತ್ರರಾಗಿದ್ದಾರೆ.

Leave a Comment

Your email address will not be published. Required fields are marked *