Ad Widget .

OLX ನಲ್ಲಿ ಅತ್ಯಾಚಾರ ಆರೋಪಿಯನ್ನು ಹಿಡಿದ ಪೊಲೀಸರು| ಪುತ್ತೂರು ಮೂಲದ ಆರೋಪಿ ಕೊಚ್ಚಿಯಲ್ಲಿ ಪತ್ತೆಯಾಗಿದ್ದು ಹೇಗೆ?

Ad Widget . Ad Widget .

ಕೊಚ್ಚಿ: ಎರಡೂವರೆ ವರ್ಷದ ಹಿಂದಿನ ಕೇರಳದ ಕಾಕ್ಕನಾಡ್ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಪುತ್ತೂರು ಮೂಲದ ಪ್ರವೀಣ್ ಎಂಬಾತನನ್ನು ಕೇರಳ ಪೊಲೀಸರು ಒ ಎಲ್ ಎಕ್ಸ್ ಸಹಾಯದಿಂದ ಹಿಡಿದಿರುವ ಅಚ್ಚರಿಯ ಘಟನೆ ನಡೆದಿದೆ.

Ad Widget . Ad Widget .

ಆರೋಪಿ ಕಳೆದ ಎರಡೂವರೆ ವರ್ಷಗಳಿಂದ ಪೊಲೀಸರಿಂದ ತಲೆತಪ್ಪಿಸಿಕೊಂಡು ತಿರುಗಾಡುತ್ತಿದ್ದ. ಆತನ ಬಂಧನಕ್ಕಾಗಿ ಪೊಲೀಸರು ಎಷ್ಟೇ ಬಲೆ ಬೀಸಿದ್ದರೂ ಸಾಧ್ಯವಾಗಿರಲಿಲ್ಲ. ಕಡೆಗೆ ಅವರಿಗೆ ಸಹಾಯ ಮಾಡಿದ್ದು ಒ ಎಲ್ ಎಕ್ಸ್ ಜಾಲತಾಣ.

30ರ ಹರೆಯದ ಆರೋಪಿ ಪ್ರವೀಣ್ ದಕ್ಷಿಣ ಕನ್ನಡದ ಪುತ್ತೂರಿನ ನಿವಾಸಿ. 2019ರಲ್ಲಿ ಆತ ಕೇರಳದ ಚೊಟ್ಟನಿಕ್ಕರ ದೇವಾಲಯದಲ್ಲಿ ಕೆಲಸಕ್ಕಿದ್ದ. ಆ ಸಂದರ್ಭದಲ್ಲಿ ಆತ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ.

ಅದೇ ಸಂದರ್ಭದಲ್ಲಿ ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಸಾಧಿಸಿದ್ದ. ಅಲ್ಲದೆ ಇಬ್ಬರೂ ಲೀವಿನ್ ರಿಲೇಶನ್ ಶಿಪ್ ನಲ್ಲಿ ಇದ್ದಿದ್ದು ಕೆಲ ಕಾಲ ಒಂದೇ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ.

ಯುವತಿ ಪ್ರವೀಣ್ ಬಳಿ ತಾನು ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದುದಾಗಿ ಹೇಳಿದ್ದಳು. ಆದರೆ ನಂತರ ಆಕೆ ನಿರುದ್ಯೋಗಿ ಎಂದು ಪ್ರವೀಣ್ ಗೆ ತಿಳಿದುಬಂದಿತ್ತು. ಇದೇ ವಿಷಯವಾಗಿ ಇಬ್ಬರ ನಡುವೆ ಬಿರುಕು ಮೂಡಿ ಅವರಿಬ್ಬರ ಸಂಬಂಧ ಮುರಿದು ಬಿದ್ದಿತ್ತು. ನಂತರ ಪ್ರವೀಣ್ ಮೇಲೆ ಆಕೆ ಲೈಂಗಿನ ದೌರ್ಜನ್ಯ ನಡೆಸಿದ ಪ್ರಕರಣ ದಾಖಲಿಸಿದ್ದಳು. ಆಕೆ ಈಗ ಎರಡು ಮಕ್ಕಳ ತಾಯಿ ಎಂದು ತಿಳಿದುಬಂದಿದೆ.

ಆರೋಪಿ ಸೆರೆಗೆ ಹಲವು ಬಾರಿ ಪ್ರಯತ್ನಿಸಿದ್ದರೂ ಪೊಲೀಸರು ವಿಫಲರಾಗಿದ್ದರು. ಕಡೆಗೆ ಆರೋಪಿ ಪ್ರವೀಣ್ ತನ್ನ ಕಾರನ್ನು ಒ ಎಲ್ ಎಕ್ಸ್ ನಲ್ಲಿ ಮಾರಾಟಕ್ಕಿಟ್ಟಿದ್ದಾನೆ ಎನ್ನುವ ಸಂಗತಿ ಪೊಲೀಸರಿಗೆ ತಿಳಿಯಿತು. ಪೊಲೀಸರು ಗ್ರಾಹಕರ ಸೋಗಿನಲ್ಲಿ ವ್ಯವಹಾರ ಕುದುರಿಸಿದರು. ಕಾರು ಕೊಳ್ಳುವ ನೆಪದಲ್ಲಿ ಮಫ್ತಿ ಪೊಲೀಸರು ಆರೋಪಿ ಹೇಳಿದ್ದ ಸ್ಥಳಕ್ಕೆ ಬಂದು ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಒಎಲ್ ಎಕ್ಸ್ ನಲ್ಲಿ ಆರೋಪಿಗಳನ್ನೂ ಹಿಡಿಯಬಹುದು ಎಂದು ಕೇರಳ ಪೊಲೀಸರು ಸಾಧಿಸಿದ್ದಾರೆ!.

Leave a Comment

Your email address will not be published. Required fields are marked *