Ad Widget .

ಕ್ರಿಕೆಟ್ ಗೆ ವಿದಾಯ ಹೇಳಿದ ಸ್ಟುವರ್ಟ್ ಬಿನ್ನಿ

Ad Widget . Ad Widget .

ನವದೆಹಲಿ: ಟೀಂ ಇಂಡಿಯಾದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಇಂದು ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.

Ad Widget . Ad Widget .

ಹ್ಯಾಮಿಲ್ಟನ್​ನಲ್ಲಿ ನಡೆದಿದ್ದ ನ್ಯೂಜಿಲೆಂಡ್​ ವಿರುದ್ಧ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ ಜೀವನಕ್ಕೆ ಪಾದಾರ್ಪಣೆ ಮಾಡಿದ್ದ ಕನ್ನಡಿಗ ಸ್ಟುವರ್ಟ್​ ಬಿನ್ನಿ, ಏಕದಿನ ಪಂದ್ಯದಲ್ಲಿ 230 ರನ್ ಹಾಗೂ 20 ವಿಕೆಟ್​ಗಳನ್ನು ಕಬಳಿಸಿದ್ದಾರೆ.

6 ಟೆಸ್ಟ್, 14 ಏಕದಿನ ಮತ್ತು 3 ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 37 ವರ್ಷದ ಅವರು ಕೊನೆಯಬಾರಿಗೆ 2016 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕಾಣಿಸಿಕೊಂಡರು. 2014ರಲ್ಲಿ ಬಾಂಗ್ಲಾದೇಶದ ವಿರುದ್ಧ 9 ಕ್ಕೆ 6 ವಿಕೆಟ್ ಪಡೆದಿದ್ದರು.

ಒಟ್ಟಾರೆಯಾಗಿ, ಬಿನ್ನಿ 95 ಪ್ರಥಮ ದರ್ಜೆ, 100 ಲಿಸ್ಟ್ ಎ ಮತ್ತು 150 ಟಿ20 ಗಳನ್ನಾಡಿದ್ದು,4796 ರನ್ ಮತ್ತು 148 ವಿಕೆಟ್ ಗಳನ್ನು ಹೊಂದಿದ್ದಾರೆ. ಲಿಸ್ಟ್ ಎ ಕ್ರಿಕೆಟ್ ನಲ್ಲಿ, ಬಿನ್ನಿ 1788 ರನ್ ಗಳಿಸಿದ್ದಾರೆ.

Leave a Comment

Your email address will not be published. Required fields are marked *