Ad Widget .

ಅಂತರಾಷ್ಟ್ರೀಯ ವಿಮಾನ ಹಾರಾಟ ನಿರ್ಬಂಧ ಸೆ.30ರವರೆಗೂ ವಿಸ್ತರಣೆ| ಲೋಹದ ಹಕ್ಕಿಗಳ ಹಾರಾಟಕ್ಕೆ ತಡೆ ಮುಂದುವರಿಸಿದ ಕೇಂದ್ರ

ನವದೆಹಲಿ: ಕಳೆದ ವರ್ಷ ಮಾರ್ಚ್​ 23ರಿಂದಲೂ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ಸೆ.30ರ ವರೆಗೂ ಕೇಂದ್ರ ಸರ್ಕಾರ ಮುಂದುವರೆಸಿದೆ. ಇದೇ ಆಗಸ್ಟ್ 31ಕ್ಕೆ ಮುಗಿಯಬಹುದು ಎಂದು ಹೇಳಲಾಗಿತ್ತಾದರೂ, ಕೊರೊನಾ ಇಳಿಕೆ ಕಾಣದ ಪರಿಣಾಮ
ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದ ಮೇಲಿನ ನಿರ್ಬಂಧವನ್ನು ಸೆಪ್ಟೆಂಬರ್​ 30ರವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಇಂದು ಆದೇಶ ಹೊರಡಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ಆದೇಶದಂತೆ, ಸೆಪ್ಟೆಂಬರ್​ 30ರವರೆಗೆ ಭಾರತದಿಂದ ಯಾವುದೇ ವಿಮಾನಗಳೂ ಬೇರೆ ರಾಷ್ಟ್ರಗಳಿಗೆ ಹಾರಾಟ ಮಾಡುವುದಿಲ್ಲ, ಹಾಗೇಯೆ ಬೇರೆ ದೇಶಗಳ ವಿಮಾನಕ್ಕೂ ಭಾರತಕ್ಕೆ ಪ್ರವೇಶ ಇರುವುದಿಲ್ಲ. ಕೆಲವು ವಿಶೇಷ ವಿಮಾನಗಳನ್ನು ಹೊರತುಪಡಿಸಿದರೆ, ಉಳಿದಂತೆ ಕಳೆದ ವರ್ಷ ಮಾರ್ಚ್​ 23ರಿಂದಲೂ ಅಂತಾರಾಷ್ಟ್ರೀಯ, ಪ್ರಯಾಣಿಕರ ವಿಮಾನಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧ 2021ರ ಆಗಸ್ಟ್ 31ಕ್ಕೆ ಮುಗಿಯಬಹುದು ಎಂದು ಹೇಳಲಾಗಿತ್ತು. ಆದರೆ ಕೊವಿಡ್​ 19 (Covid 19) ಪರಿಸ್ಥಿತಿ ಇನ್ನೂ ಹಾಗೇ ಇರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್​ 30ರವರೆಗೆ ವಿಸ್ತರಿಸಲಾಗಿದೆ.

Ad Widget . Ad Widget . Ad Widget .

ಈ ಬಗ್ಗೆ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ (DGCA) ಸುತ್ತೋಲೆ ಹೊರಡಿಸಿದೆ. ಅಂತಾರಾಷ್ಟ್ರೀಯ ಸರಕು ವಿಮಾನಗಳು ಮತ್ತು ಡಿಜಿಸಿಎಯಿಂದ ಅನುಮೋದನೆ ಪಡೆದ ವಿಶೇಷ ವಿಮಾನಗಳನ್ನು ಹೊರತುಪಡಿಸಿ, ಉಳಿದಂತೆ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳಿಗೂ ಸೆಪ್ಟೆಂಬರ್​ 30ರವರೆಗೆ ನಿರ್ಬಂಧ ಇರುತ್ತದೆ ಎಂದು ಹೇಳಲಾಗಿದೆ.

ಭಾರತವು ಯುಎಸ್​, ಯುಕೆ, ಯುಎಇ, ಮಾಲ್ಡೀವ್ಸ್​, ನೆದರ್​ಲ್ಯಾಂಡ್​, ಫ್ರಾನ್ಸ್​, ಜರ್ಮನಿ, ಕತಾರ್​​, ಭೂತಾನ್​ ಸೇರಿ 28 ದೇಶಗಳೊಂದಿಗೆ ಏರ್​ ಬಬಲ್​ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಕೋವಿಡ್ 19 ಸಂದರ್ಭದಲ್ಲೂ ಈ ದೇಶಗಳ ಮಧ್ಯೆ ವಿಶೇಷ ವಿಮಾನ ಸಂಚಾರ ನಡೆಯಲಿದೆ. ಈ ವಿಶೇಷ ವಿಮಾನಗಳ ಮೂಲಕ ಪ್ರಯಾಣಿಕರನ್ನು ಸಾಗಿಸಲಾಗುತ್ತಿದೆ.

Leave a Comment

Your email address will not be published. Required fields are marked *