Ad Widget .

ಧರ್ಮಸ್ಥಳ:ರಾತ್ರಿ ಜೊತೆಗಿದ್ದ ಪತ್ನಿ‌ ಮುಂಜಾನೆ ಪರಾರಿ| ಪತಿಯಿಂದ ನಾಪತ್ತೆ ದೂರು|

Ad Widget . Ad Widget .

ಬೆಳ್ತಂಗಡಿ: ಎರಡು ಮಕ್ಕಳ ತಾಯಿಯೊಬ್ಬಳು ಗಂಡ, ಮಕ್ಕಳನ್ನು ಬಿಟ್ಟು ಹಣ, ಒಡವೆ ಜೊತೆ‌ ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ರಾಜಿ ರಾಘವನ್ ನಾಪತ್ತೆಯಾದ ಮಹಿಳೆಯಾಗಿದ್ದು, ಈ ಕುರಿತು ಅವರ ಪತಿ ಚಿದಾನಂದ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದಾರೆ.

ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ರಾಜಿ ಜುಲೈ 11 ರಂದು ನೆರಿಯದ ನಾಯಿಕಟ್ಟೆಯಲ್ಲಿರುವ ಪತಿಯ ಮನೆಗೆ ಮರಳಿದ್ದರು. ಆಗಸ್ಟ್ 27ರ ರಾತ್ರಿ ಪತಿಯ ಜೊತೆ ಮಲಗಿದ್ದ ಅವರು 11 ಗಂಟೆಯ ಸುಮಾರಿಗೆ ಆಚೆ ಕೋಣೆಯಲ್ಲಿ ಮಲಗಿದ್ದ ಮಗಳ ಜೊತೆ ಮಲಗುವುದಾಗಿ ಹೇಳಿ ಎದ್ದು ಹೋಗಿದ್ದರು. ಆದರೆ ಬೆಳಗಾಗುವಷ್ಟರಲ್ಲಿ ನಾಪತ್ತೆಯಾಗಿದ್ದಾರೆ.

ದಂಪತಿಗೆ 11 ವರ್ಷದ ಹೆಣ್ಣು ಮಗಳು ಹಾಗೂ 10 ವರ್ಷದ ಗಂಡು ಮಗುವಿದೆ. ರಾಜಿ ಮನೆಯಲ್ಲಿದ್ದ 95,000 ರೂ. ನಗದು ಹಾಗೂ ತನ್ನ ತಾಯಿಯ ಎರಡು ಚಿನ್ನದ ಬಳೆಗಳನ್ನೂ ತೆಗೆದುಕೊಂಡು ಹೋಗಿದ್ದಾರೆ ಎಂದು ಪತಿ ಆಪಾದಿಸಿದ್ದಾರೆ.

ವಿದೇಶದಲ್ಲಿ ಆಕೆಗೆ ಅಕ್ರಮ ಸಂಬಂಧವಿರುವ ಶಂಕೆ ವ್ಯಕ್ತವಾಗುತ್ತಿದೆ.

Leave a Comment

Your email address will not be published. Required fields are marked *