Ad Widget .

ಅನಾಥ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ| ಮೂವರ ಬಂಧನ

Ad Widget . Ad Widget .

ಮಹಾರಾಷ್ಟ್ರ: ತಂದೆಯ ಸಾವಿನ ಬಳಿಕ ಬೀದಿಪಾಲಾಗಿದ್ದ ಹದಿನೇಳು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಲ್ಲಿ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿಯಲ್ಲಿ ಈ ಘಟನೆ ನಡೆದಿದ್ದು, ಈ ಸಾಮೂಹಿಕ ಅತ್ಯಾಚಾರಕ್ಕೆ ಹೊರತಾಗಿ ಆರೋಪಿಗಳು ಪ್ರತ್ಯೇಕವಾಗಿ 2020ರ ನವೆಂಬರ್‌ನಿಂದ ಈ ವರ್ಷದ ಆಗಸ್ಟ್‌ವರೆಗೆ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ತಾಯಿ ಮನೆಬಿಟ್ಟು ಹೋದ ಬಳಿಕ ಬಾಲಕಿ ತಂದೆಯ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಕಳೆದ ವರ್ಷದ ನವೆಂಬರ್‌ನಲ್ಲಿ ತಂದೆ ಮೃತಪಟ್ಟ ಬಳಿಕ ಮನೆಯ ಮಾಲಕ ಮನೆ ತೆರವು ಮಾಡುವಂತೆ ಬಾಲಕಿಗೆ ಸೂಚಿಸಿದ. ಇದರಿಂದಾಗಿ ಆಕೆ ವಸಾಯಿಯ ಫುಟ್‌ಪಾತ್‌ನಲ್ಲಿ ವಾಸಿಸಬೇಕಾದ ಸ್ಥಿತಿ ನಿರ್ಮಾಣವಾಯಿತು ಎಂದು ರೈಲ್ವೆ ಡಿಸಿಪಿ ಪ್ರದೀಪ್ ಚವಾಣ್ ವಿವರಿಸಿದ್ದಾರೆ.

ಬಾಲಕಿ ನೀಡಿದ ಮಾಹಿತಿ ಆಧಾರದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಅಜಯ್ ಕುಮಾರ್ ವಿನೋದ್ ಜೈಸ್ವಾಲ್ (34) ಎಂಬಾತನನ್ನು ಬಂಧಿಸಲಾಯಿತು. ಆತ ತಪ್ಪೊಪ್ಪಿಕೊಂಡು ಸಹಚರರಾದ ಮುನ್ನಾ ಯಾದವ್ (28) ಮತ್ತು ಅಕ್ರಮ್ ಚೌಧರಿ (34) ಅವರ ಬಗ್ಗೆ ವಿವರ ನೀಡಿದ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *