Ad Widget .

ಪ್ಯಾರಾಲಂಪಿಕ್ಸ್| ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಭಾವಿನಾ ಪಟೇಲ್

ಟೋಕಿಯೋ: ಇಲ್ಲಿ‌ ನಡೆಯುತ್ತಿರುವ ಪ್ಯಾರಾಲಂಪಿಕ್ಸ್ ನಲ್ಲಿ ಭಾರತದ ಕ್ರೀಡಾ ಪಟು ಭಾವಿನಾ ಪಟೇಲ್ ಟೇಬಲ್ ಟೆನಿಸ್​ನ ಫೈನಲ್‌ ಪಂದ್ಯದಲ್ಲಿ ಚೀನಾದ ಝೋ ಯಿಂಗ್ ವಿರುದ್ಧ 3-4 ಅಂಕಗಳ ಅಂತರದಿಂದ ಸೋಲು ಕಾಣುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

Ad Widget . Ad Widget .

ಟೇಬಲ್ ಟೆನಿಸ್​ನ ಫೈನಲ್‌ ಪಂದ್ಯದಲ್ಲಿ ಚೀನಾದ ಝೋ ಯಿಂಗ್ ವಿರುದ್ಧ 0-3 ಅಂತರದಿಂದ ಸೋಲು ಕಾಣುವ ಮೂಲಕ ಭಾವಿನಾ ಚಿನ್ನ ಗೆಲ್ಲುವಲ್ಲಿ ಎಡವಿದರು. ಆದರೆ, ಪ್ಯಾರಾಲಿಂಪಿಕ್ಸ್​ನ ಟೇಬಲ್ ಟೆನಿಸ್​ನಲ್ಲಿ ಭಾರತ ಈವರೆಗೆ ಫೈನಲ್​ಗೆ ಲಗ್ಗೆಯಿಟ್ಟಿದ್ದೇ ಇಲ್ಲ. ಇದೇ ಮೊದಲ ಬಾರಿಗೆ ಫೈನಲ್​ಗೆ ತಲುಪಿ ಪದಕ ಗೆದ್ದಿರುವುದು ಐತಿಹಾಸಿಕ ಸಾಧನೆಯಾಗಿದೆ.

Ad Widget . Ad Widget .

ಸಾಕಷ್ಟು ರೋಚಕತೆಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಮೊದಲ ಪಂದ್ಯ 11-7 ಪಾಯಿಂಟ್​ನಿಂದ ಭಾರತ ಕಳೆದುಕೊಂಡಿತು. ಎರಡನೇ ಸೆಟ್​ನಲ್ಲೂ ಝೋ ಯಿಂಗ್ ಗೆಲುವು ಸಾಧಿಸಿ 2-0 ಯಿಂದ ಮುನ್ನಡೆ ಪಡೆದುಕೊಂಡರು. ಮೂರನೇ ಸೆಟ್​ನಲ್ಲೂ ಭಾರತಕ್ಕೆ ಕಮ್​ಬ್ಯಾಕ್ ಮಾಡಲು ಸಾಧ್ಯವಾಗಲಿಲ್ಲ.

ಅಂತಿಮವಾಗಿ ಚೀನಾದ ಝೋ ಯಿಂಗ್ -3-0 ಅಂತರದಿಂದ ಗೆದ್ದು ಚಿನ್ನದ ಪದಕ ತಮ್ಮದಾಗಿಸಿದರು. ಭಾವಿನಾ ಬೆಳ್ಳಿಗೆ ತೃಪ್ತಿ ಪಡಬೇಕಾಯಿತು.

ಇದಕ್ಕೂ ಮುನ್ನ ಶನಿವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಭಾವಿನಾ ಅವರು 2016ರ ರಿಯೋ ಒಲಿಂಪಿಕ್ ಪದಕ ವಿಜೇತೆ ಚೀನಾದ ಮಿಯಾ ಝಂಗ್ ಅವರನ್ನು3-2 ಅಂಕಗಳ ಅಂತರದಿಂದ ಸೋಲಿಸಿ ಫೈನಲ್​ಗೆ ಪ್ರವೇಶಿಸಿದ್ದರು. ಮೊದಲ ಸೆಟ್​ನಲ್ಲಿ ಭಾವಿನಾ 7-11ರ ಹಿನ್ನಡೆ ಅನುಭವಿಸಿದರೆ, ನಂತರ ಭರ್ಜರಿ ಕಮ್​ಬ್ಯಾಕ್ ಮಾಡಿದರು. ಎರಡನೇ ಸೆಟ್​ನಲ್ಲಿ 11-7, 11-4, 9-11 ಮತ್ತು ಅಂತಿಮ ಸೆಟ್​ನಲ್ಲಿ 11-8 ಅಂತರದಲ್ಲಿ ಗೆದ್ದು ಫೈನಲ್​ಗೆ ಪ್ರವೇಶ ಪಡೆದರು.

ತನ್ನ 12ನೇ ವಯಸ್ಸಿನಲ್ಲಿ ಪೋಲಿಯೊ ಪತ್ತೆಯಾದ 34 ರ ಹರೆಯದ ಭಾವಿನಾ ಪಂದ್ಯ ಮುಗಿದ ಬಳಿಕ ಮಾತನಾಡಿದ್ದು, ‘ನಾನು ನನ್ನನ್ನು ಅಂಗವಿಕಲೆ ಎಂದು ಪರಿಗಣಿಸುವುದಿಲ್ಲ, ನಾನು ಏನು ಬೇಕಾದರೂ ಮಾಡಬಲ್ಲೆ ಎಂದು ನನಗೆ ಯಾವಾಗಲೂ ವಿಶ್ವಾಸವಿದೆ. ನಾವು ಹಿಂದೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದೇನೆ. ಟೋಕಿಯೊದ ಪ್ಯಾರಾಲಿಂಪಿಕ್ಸ್ ಪ್ಯಾರಾ ಟೇಬಲ್ ಟೆನಿಸ್ ನಲ್ಲಿ ಪದಕ ಗೆದ್ದಿರುವುದು ಖುಷಿ ತಂದಿದೆ’ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *