Ad Widget .

ಉಡುಪಿ| ಏಳು ವರ್ಷಗಳಿಂದ ಹೊರ ಪ್ರಪಂಚ ಕಾಣದ ತಾಯಿ ಮಗಳು| ಈ ಗೃಹಬಂಧನ ಯಾಕೆ ಗೊತ್ತಾ…?

Ad Widget . Ad Widget .

ಉಡುಪಿ: ಮಾನಸಿಕ ಅಸ್ವಸ್ಥ ಮಗನ ಉಪಟಳ, ಮತ್ತು ಉಗ್ರ ವರ್ತನೆಯ ಭೀತಿಯಿಂದ ತಾಯಿ ಗುಲಾಬಿ ಶೆಟ್ಟಿ(80 ವ) ಹಾಗೂ ಮಗಳು ವಾರಿಜ ಶೆಟ್ಟಿ (50ವರ್ಷ) ಕಳೆದ ಏಳು ವರ್ಷಗಳಿಂದ ಹೊರಪ್ರಪಂಚದ ಬೆಳಕು ಕಾಣದೆ ಮನೆಯಲ್ಲಿ ವಿದ್ಯುತ್ ಸಂಪರ್ಕವೂ ಇಲ್ಲದೆ ಗೃಹಬಂಧನಲ್ಲಿ ಕತ್ತಲೆಯ ದಿನಗಳ ಕಳೆಯುತ್ತಿದ್ದರು.

Ad Widget . Ad Widget .

ಮೂವರನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಸ್ಥಳೀಯರ ಸಹಕಾರದಿಂದ ರಕ್ಷಿಸಿರುವ ಘಟನೆಯು ಶುಕ್ರವಾರ ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

ವಿಶು ಶೆಟ್ಟಿಯವರು ಮಾನಸಿಕ ಅಸ್ವಸ್ಥನನ್ನು ಚಿಕಿತ್ಸೆಗಾಗಿ ದೊಡ್ಡಣಗುಡ್ಡೆ ಡಾ ಎ ವಿ ಬಾಳಿಗ ಆಸ್ಪತ್ರೆಗೆ ದಾಖಲು ಪಡಿಸಿದ್ದು, ಚಿಕಿತ್ಸೆ ನೀಡಿ ತಾಯಿ ಮತ್ತು ಮಗಳಿಗೆ ನಿಟ್ಟೂರಿನಲ್ಲಿರುವ ಸಖಿ ಒನ್ ಸ್ಟಾಪ್ ಸೆಂಟರಿನಲ್ಲಿ ತಾತ್ಕಾಲಿಕ ಆಶ್ರಯ ಒದಗಿಸಿದ್ದಾರೆ. ರಕ್ಷಣೆ ಕಾರ್ಯಚರಣೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯ ಎಎಸ್‌ಐ ನಾರಾಯಣ ಮತ್ತು ಸಿಬ್ಬಂದಿಗಳು, ಪಂಚಾಯತ್ ಸದಸ್ಯ ದೀಪು, ಅಶೋಕ್ ಶೆಟ್ಟಿ, ಕಿಶೋರ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ ಸಹಕರಿಸಿದ್ದರು.
ಮಾನಸಿಕ ಅಸ್ವಸ್ಥನ ಉಗ್ರ ವರ್ತನೆಯಿಂದ ಪರಿಸರದಲ್ಲಿಯೂ ಭಯದ ವಾತಾವರಣ ಸೃಷ್ಟಿಯಾಗಿತ್ತು. ರಾತ್ರಿಯ ಸಮಯದಲ್ಲಿ ವಿಕಾರವಾಗಿ ಬೊಬ್ಬಿಡುವುದು, ಮಂತ್ರ ಪಠಿಸುವಂತಹ ವಿಚಿತ್ರ ವರ್ತನೆಗಳು ಅಸ್ವಸ್ಥನಿಂದ ನಡೆಯುತ್ತಿದ್ದವು. ಮೂವರು ವಿದ್ಯುತ್ ಸಂಪರ್ಕ ಇಲ್ಲದ ಮನೆಯಲ್ಲಿ ವಾಸಿಸುತ್ತಿದ್ದರು. ಕಾರ್ಯಾಚರಣೆ ನಡೆಯುತ್ತಿರುವಾಗ, ಮನೋರೋಗಿಯು ಮನೆಯ ಬಾಗಿಲಿನ ಚಿಲಕ ಹಾಕಿಕೊಂಡಿದ್ದು ಬಾಗಿಲು ತೆರೆಯಲು ಚಿಲಕ ತುಂಡರಿಸಲಾಯಿತು. ಮನೋರೋಗಿಯ ತಾಯಿಗೆ ಪೌಷ್ಠಿಕ ಆಹಾರದ ಕೊರತೆಯಿಂದಾಗಿ ತೀವ್ರ ನಿತ್ರಾಣಗೊಂಡಿದ್ದರು. ಅವರನ್ನು ಹೊತ್ತುಕೊಂಡು ವಾಹನದೆಡೆಗೆ ಸಾಗಿಸಲಾಯಿತು. ಪರಊರಿನಲ್ಲಿರುವ ಸಂಬಂಧಿಯೋರ್ವರು ಇವರಿಗೆ ದಿನಸಿ ಸಾಮಾಗ್ರಿಗಳನ್ನು ಒದಗಿಸುತ್ತಿದ್ದರು. ಆದರೆ ಅದನ್ನು ಕೂಡಾ ಸರಿಯಾಗಿ ಬಳಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.

Leave a Comment

Your email address will not be published. Required fields are marked *