ನವದೆಹಲಿ: 2019-20ರಲ್ಲಿ ಬಿಜೆಪಿಯ ಆದಾಯವು 50% ಹೆಚ್ಚಾಗಿದೆ, ಬಹುಪಾಲು ದೇಣಿಗೆಗಳು ಚುನಾವಣಾ ಬಾಂಡ್‌ಗಳ ಮೂಲಕ ಬಂದಿವೆ ಎಂದು ಎಡಿಆರ್ ವರದಿ ಬಹಿರಂಗಪಡಿಸಿದೆ.
ಆಡಳಿತಾರೂಢ ಬಿಜೆಪಿ ಆದಾಯವು 2019-20ರಲ್ಲಿ ಚುನಾವಣಾ ಬಾಂಡ್‌ಗಳ ಮರುಪಾವತಿಯಿಂದ ಶೇಕಡಾ 50.34 ರಷ್ಟು ಏರಿಕೆಯಾಗಿ 3,623.28 ಕೋಟಿಗೆ ಹೆಚ್ಚಳವಾಗಿದೆ.
ಆದರೆ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ತನ್ನ ಆದಾಯದಲ್ಲಿ 25.69 ಶೇಕಡಾ ಇಳಿಕೆಯನ್ನು ಕಂಡು 682.21 ಕೋಟಿಗೆ ಇಳಿಕೆಯಾಗಿದೆ. ಬಿಜೆಪಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎನ್‌ಸಿಪಿ, ಸಿಪಿಐ (ಎಂ), ಸಿಪಿಐ ಮತ್ತು ಬಿಎಸ್‌ಪಿ-ಏಳು ರಾಷ್ಟ್ರೀಯ ಪಕ್ಷಗಳು ಒಟ್ಟಾಗಿ 2019-20ರಲ್ಲಿ 4758.20 ಕೋಟಿ ಆದಾಯವನ್ನು ಗಳಿಸಿವೆ.
ಏಳು ರಾಷ್ಟ್ರೀಯ ಪಕ್ಷಗಳ ಆದಾಯದಲ್ಲಿ ಬಿಜೆಪಿ ಶೇಕಡಾ 76.15 ರಷ್ಟನ್ನು ಹೊಂದಿದೆ, ಆದರೆ ಇತರ ಆರು ರಾಷ್ಟ್ರೀಯ ಪಕ್ಷಗಳು ಕಡಿಮೆ ಆದಾಯ ಪಡೆದಿದೆ.
ಕಾಂಗ್ರೆಸ್ ಪಾಲು ಕೇವಲ 14.24 ಶೇಕಡಾ ಆಗಿದ್ದರೆ ಇತರರ ಪಾಲು ಶೇಕಡಾ 3.33 ಕ್ಕಿಂತ ಕಡಿಮೆಯಿತ್ತು. 2018-19ರಲ್ಲಿ ರೂ 2410.08 ಕೋಟಿಯಿಂದ 2019-20ರಲ್ಲಿ ಬಿಜೆಪಿಯ ಆದಾಯ ರೂ. 3623.28 ಕೋಟಿಗೆ ಏರಿಕೆಯಾಗಿದೆ.
ಕಾಂಗ್ರೆಸ್‌ನ ಆದಾಯವು 918.03 ಕೋಟಿಯಿಂದ ರೂ .682.21 ಕೋಟಿಗೆ ಗೆ ಇಳಿಕೆಯಾಗಿದೆ. ತೃಣಮೂಲ ಕಾಂಗ್ರೆಸ್ ರೂ 143.76 ಕೋಟಿ (2018-19ರಲ್ಲಿ ರೂ 192.65 ಕೋಟಿ), ಸಿಪಿಐ (ಎಂ) ರೂ 158.62 ಕೋಟಿ (ರೂ 100.96 ಕೋಟಿ), ಎನ್ ಸಿಪಿ ರೂ 85.58 ಕೋಟಿ (ರೂ 50.71 ಕೋಟಿ), ಬಿಎಸ್ ಪಿ ರೂ 58.24 ಕೋಟಿ (ರೂ 69.70 ಕೋಟಿ) ಗಳಿಸಿದೆ. ಮತ್ತು ಸಿಪಿಐ ರೂ 6.58 ಕೋಟಿ (ರೂ. 7.15 ಕೋಟಿ) ಆದಾಯವನ್ನು ಗಳಿಸಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಿಶ್ಲೇಷನೆಯಲ್ಲಿ ತಿಳಿಸಿದೆ.