ಬೆಂಗಳೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣ ಅತ್ಯಂತ ಸೂಕ್ಷ್ಮ ವಿಚಾರ. ಹಾಗಾಘಿ ಈ ಪ್ರಕರಣದ ವಿಷಯದಲ್ಲಿ ಎಚ್ಚರಿಕೆಯಿಂದ ಮಾತನಾಡಿ ಎಂದು ಸಂಪುಟ ಸಚಿವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಕಿವಿಮಾತು ಹೇಳಿದ್ದಾರೆ. ಕಾಂಗ್ರೆಸ್ ನಾಯಕರ ಆರೋಪಕ್ಕೆ ಮಾತಾಡಿ ಗೊಂದಲ ಮಾಡ್ಕೊಬೇಡಿ. ಈ ರೀತಿ ಘಟನೆ ಆದಾಗ ವಿಪಕ್ಷದವರು ಟೀಕೆ ಮಾಡೋದು ಸಹಜ. ಹಾಗಂತ ಏನೋ ಮಾತಾಡಿ, ಗೊಂದಲ ಮಾಡ್ಕೊಳ್ಳೋದು ಬೇಡ. ಅತ್ಯಾಚಾರ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ ಎಂದು ಹೇಳಿದ್ದಾರೆ.
ಬಳಿಕ ಅವರು ನಿಮ್ಮ ಇಲಾಖೆಯ ಅಧಿಕಾರಿಗಳ ಜೊತೆಯಲ್ಲಿದ್ದು, ಪ್ರಕರಣದ ವಿವರ ಪಡೆಯಿರಿ. ಅನಾವಶ್ಯಕವಾಗಿ ಮಾತಾಡಿ ಗೊಂದಲಕ್ಕೀಡಾಗಬೇಡಿ. ಈಗಾಗಲೇ ಗೃಹ ಸಚಿವರು ಸ್ಥಳಕ್ಕೆ ಹೋಗಿದ್ದಾರೆ. ನೀವು ಕೂಡ ಹೋಗಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್‍ಗೆ ಸಿಎಂ ಸೂಚನೆ ನೀಡಿದರು. ಸಿಎಂ ಸೂಚನೆ ಹಿನ್ನೆಲೆ ಇದೀಗ ಹಾಲಪ್ಪ ಆಚಾರ್ ಮೈಸೂರಿಗೆ ತೆರಳಿದರು.
ಪೆÇಲೀಸ್ ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ. ಅವರು ಎಲ್ಲಾ ಮಾಹಿತಿಯೊಂದಿಗೆ ಮುಂದುವರೆಯುತ್ತಿದ್ದಾರೆ. ಯಾವ ಹಂತದಲ್ಲಿ ಇದೆ ಅಂತಾ ಅವರು ಇನ್ನೂ ಹೇಳಿಲ್ಲ. ಆದರೆ ತನಿಖೆ ಕುರಿತ ವರದಿಯನ್ನು ಖುದ್ದು ನನಗೆ ಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದಷ್ಟು ಬೇಗ ಪ್ರಕರಣ ಭೇದಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಡಿಜಿಪಿ ಪ್ರವೀಣ್ ಸೂದ್ ಕೂಡ ಇಂದು ಮೈಸೂರಿಗೆ ಹೋಗ್ತಿದ್ದಾರೆ ಎಂದರು.
ಆರೋಪಿಗಳು ಕೃತ್ಯ ಎಸಗಿ ಬೈಕ್‍ಗಳಲ್ಲಿ ಎಸ್ಕೇಪ್ ಆಗಿರೋ ಮಾಹಿತಿ ಲಭ್ಯವಾಗಿದೆ. ಪೆÇಲೀಸರು ಲಲಿತಾದ್ರಿ ಬೆಟ್ಟದ ಪ್ರದೇಶಕ್ಕೆ ಹೋಗುವ ಮಾರ್ಗದಲ್ಲಿರುವ ಬಾರ್ ಹಾಗೂ ಹೋಟೆಲ್‍ನಲ್ಲಿರುವ ಸಿಸಿಟಿವಿ ಡಿವಿಆರ್ ಪಡೆದಿದ್ದಾರೆ. ಎರಡು ಟೀಂ ನಿಂದ ಟೆಕ್ನಿಕಲ್ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ. ಘಟನೆ ನಡೆದ ಮೂರು ಗಂಟೆಗಳ ಅವಧಿಯಲ್ಲಿ ಸ್ಥಳದ ಟವರ್ ಲೊಕೇಷನ್‍ನ್ನು ಪೆÇಲೀಸರು ಡಂಪ್ ಮಾಡಿದ್ದಾರೆ.
ಸದ್ಯ ಯುವತಿ ಹಾಗೂ ಸ್ನೇಹಿತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂತ್ರಸ್ಥೆಯ ಸ್ನೇಹಿತನಿಗೆ ದುಷ್ಕರ್ಮಿಗಳು ಗಂಭೀರ ಹಲ್ಲೆ ಮಾಡಿದ್ದಾರೆ. ಹೀಗಾಗಿ ಇಬ್ಬರೂ ಶಾಕ್ ಗೊಳಗಾಗಿ ತನಿಖೆ ವೇಳೆ ಅಸ್ಪಷ್ಟ ಹೇಳಿಕೆ ನೀಡಿದ್ದಾರೆ.
ಕತ್ತಲಿನ ವಾತಾವರಣದಲ್ಲಿ ಯಾರೂ ಗುರುತು ಸಿಗಲಿಲ್ಲ. ಮಾಸ್ಕ್ ಹಾಕಿದ್ದರು. ಅತ್ಯಾಚಾರದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿಯಲಾಗಿದೆ ಎಂದು ಸಂತ್ರಸ್ಥೆಯ ಜೊತೆಗಿದ್ದ ಯುವಕ ಹೇಳಿದ್ದಾನೆ. ಸ್ನೇಹಿತನ ಜೊತೆಗಿದ್ದ ವಿಡಿಯೋ ಜೊತೆಗೆ ಅವರ ಕೃತ್ಯದ ವಿಡಿಯೋ ಸಹ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.