Ad Widget .

ಸೈನಿಕರನ್ನು ಕೊಂದವರನ್ನು ಸುಮ್ನೆ ಬಿಡಲ್ಲ| ಕಾಬೂಲ್ ಸ್ಪೋಟದಿಂದ ವ್ಯಗ್ರನಾದ ದೊಡ್ಡಣ್ಣ|

Ad Widget . Ad Widget .

ವಾಷಿಂಗ್ಟನ್: ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ್ನಿಂಗ್ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ನಾವು ಉಗ್ರರ ದಾಳಿಗಳಿಂದ ಕಂಗೆಡುವುವುದಿಲ್ಲ. ಜನರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡುತ್ತೇವೆ.

Ad Widget . Ad Widget .

ಐಸಿಸ್ ವಿರುದ್ಧ ಕಾರ್ಯಾಚರಣೆಗೆ ಯೋಜನೆ ರೂಪಿಸಲಾಗಿದೆ. ಎಲ್ಲಿ? ಹೇಗೆ? ಎಷ್ಟು ಹೊತ್ತಿಗೆ ಹೊಡೆಯಬೇಕೋ ಅಷ್ಟುಹೊತ್ತಿಗೆ ಹೊಡೆಯುತ್ತೇವೆ. ಐಸಿಸ್ ಉಗ್ರರು ಯಾವತ್ತಿಗೂ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

ಜಗತ್ತಿನ ಜನ ಸಂಕಷ್ಟದಲ್ಲಿದ್ದಾಗ ಅಂಥವರ ನೆರವಿಗೆ ನಿಲ್ಲುವುದು ಅಮೆರಿಕ. ದೇವರ ಪ್ರಶ್ನೆಗೆ ಮಾತ್ರ ಅಮೆರಿಕ ಸೇನೆ ಉತ್ತರ ಕೊಟ್ಟಿದೆ. ಅಮೆರಿಕದ ಸೈನಿಕರು ಕೇಳಿದ ನೆರವು ಕೊಡಲು ಸಿದ್ಧ. ನಮ್ಮ ಕಮಾಂಡೋಗಳನ್ನು ಕೊಂದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ

ಅಮೆರಿಕದ ವಿರುದ್ಧ ದಾಳಿ ಮಾಡುವವರು ಎಚ್ಚರಿಕೆಯಿಂದ ಇರಬೇಕು. ನಮ್ಮ ವಿರುದ್ಧ ದಾಳಿ ಮಾಡಿದವರನ್ನು ಕ್ಷಮಿಸುವುದಿಲ್ಲ. ಅವರನ್ನು ಬಿಡುವುದೂ ಇಲ್ಲ. ಹುಡುಕಿ ಹುಡುಕಿ ಹೊಡೆಯುತ್ತೇವೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *