Ad Widget .

ಮೈಸೂರು ಅತ್ಯಾಚಾರ ಪ್ರಕರಣಕ್ಕೆ ‘ಮಾನಿನಿ‘ ಎಂದು ಹೆಸರಿಟ್ಟ ಇಂದ್ರಜಿತ್ ಲಂಕೇಶ್

Ad Widget . Ad Widget .

ಮೈಸೂರು: ಮೈಸೂರಿನಲ್ಲಿ ಗ್ಯಾಂಗ್ ರೇಪ್ ಹಾಗೂ ದರೋಡೆ ಪ್ರಕರಣಗಳ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಹಳ ಬೇಸರ ವ್ಯಕ್ತಪಡಿಸಿ, ಇಂದು ನಗರದ ಖಾಸಗಿ ಹೋಟೆಲ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಅವರು, ಮೈಸೂರಿನಲ್ಲಾದ ಅತ್ಯಾಚಾರ ಪ್ರಕರಣಕ್ಕೆ ಹೊಸ ನಾಮಕರಣ ಮಾಡಿದ್ದಾರೆ. ನಿರ್ಭಯಾ ನಂತರದ ಮೈಸೂರಿನ ಈ ಪ್ರಕರಣಕ್ಕೆ ‘ಮಾನಿನಿ‘ ಎಂದು ಇಂದ್ರಜಿತ್ ಲಂಕೇಶ್ ಹೆಸರಿಟ್ಟಿದ್ದಾರೆ.

Ad Widget . Ad Widget .

ಮೈಸೂರು ನೆಚ್ಚಿನ ತಾಣವಾಗಿತ್ತು. ನನ್ನ ಕೊನೆಯ ಹುಟ್ಟುಹಬ್ಬ ಸಹ ಇಲ್ಲೇ ಆಚರಣೆ ಆಗಿದ್ದು. ಇಂತಹ ಸ್ಥಳ ಹೀಗಾಯ್ತಲ್ಲ ಅಂತಾ ಬೇಜಾರಾಗ್ತಿದೆ. ಘಟನೆ ಬಗ್ಗೆ ಸಂಪೂರ್ಣ ಪೆÇಲೀಸರನ್ನು ದೂರಲು ಆಗುವುದಿಲ್ಲ. ನಾನು ಒಂದು ತಿಂಗಳ ಹಿಂದೆಯೇ ಆಡಳಿತದ ದೌರ್ಬಲ್ಯದ ಬಗ್ಗೆ ಮಾತನಾಡಿದ್ದೆ. ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಹೇಳಿದ್ದೆ ಎಂದರು.
ಮೈಸೂರು ಒಂದು ಐತಿಹಾಸಿಕ ಹಾಗೂ ಸಾಂಸ್ಕøತಿಕ ಸ್ಥಳ. ಕುವೆಂಪುರವರ ಹಲವಾರು ಸ್ಪೂರ್ತಿಗಳ ಸ್ಥಳ. ನಮ್ಮ ತಂದೆ ಇಲ್ಲಿ ವಿದ್ಯಾಭ್ಯಾಸ ಸಹ ಮಾಡಿದ್ದರು. ಇಂತಹ ಇತಿಹಾಸ ಇರುವ ಸ್ಥಳದಲ್ಲಿ ಸ್ಥಿತಿಗಳು ಸಾಗುತ್ತಿರುವ ಬಗ್ಗೆ ಬೇಸರವಾಗುತ್ತಿದೆ. ಇಂತಹ ಪ್ರಕರಣಗಳಿಂದ ಮೈಸೂರು ಡಿಸ್ಟರ್ಬ್ ಆಗಿದೆ ಎಂದು ಬಹಳ ಅಸಮಾಧಾನ ವ್ಯಕ್ತಪಡಿಸಿದರು.

Leave a Comment

Your email address will not be published. Required fields are marked *