Ad Widget .

ಕಡಬ: ಹುಡುಗಿಗಾಗಿ‌ ಮದ್ಯರಾತ್ರಿ ಬೆತ್ತಲಾದ ಯುವಕ| ವಿಡಿಯೋ ವೈರಲ್| ಹನಿಟ್ರಾಪ್ ಜಾಲಕ್ಕೆ ಸಿಲುಕಿದನಾ ಆಟೋ ಡ್ರೈವರ್

ಕಡಬ : ತಾಲೂಕಿನ ಬಿಳಿನೆಲೆಯ ಯುವಕನೊಂದಿಗೆ ಅಪರಿಚಿತ ಯುವತಿಯೊಬ್ಬಳು ರಾತ್ರಿಯ ವೀಡಿಯೋ ಚಾಟ್ ಮಾಡಿ ಅದರ ವಿಡಿಯೋ ರೆಕಾರ್ಡ್ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Ad Widget . Ad Widget .

ವೀಡಿಯೋ ಕಾಲ್ ನಲ್ಲಿ ಬಟ್ಟೆ ಬಿಚ್ಚಿದ ಯುವಕ ಬಿಳಿನೆಲೆಯ ಆಟೋ ಚಾಲಕ ಎಂದು ಸುದ್ದಿ ಹಬ್ಬಿದೆ. ಯುವಕನಿಗೆ ಯುವತಿಯೋರ್ವಳು ನಗ್ನವಾಗಿ ವೀಡಿಯೋ ಕಾಲ್ ಮಾಡಿದ್ದು, ಈ ಕಡೆಯಿಂದ ಯುವಕನೂ ಬಟ್ಟೆ ಬಿಚ್ಚಿದ್ದಾನೆ.

Ad Widget . Ad Widget .

ನಂತರ ಬ್ಲಾಕ್ ಮೆಲ್ ಶುರುಮಾಡಿದ ಯುವತಿ ಬಾರಿ ಹಣ ನೀಡಲು ಬೇಡಿಕೆ ಇಟ್ಟಿದ್ದಾಳೆ. ಹಣ ನೀಡಲು ಯುವಕ ಒಪ್ಪದಿದ್ದಾಗ ಯುವಕನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.

ಇದರ ಹಿಂದೆ ದೊಡ್ಡ ಜಾಲವೊಂದು ಕಾರ್ಯನಿರ್ವಹಿಸುತ್ತಿದ್ದು, ವೈರಲ್ ಆಗಿರುವ ವಿಡಿಯೋವನ್ನು ಗಮನಿಸಿದರೆ, ಯುವತಿಯ ವಿಡಿಯೋದಲ್ಲಿ ಪೋರ್ನ್ ಸೈಟ್ ಒಂದರ ವಾಟರ್ ಮಾರ್ಕ್ ಕಾಣಿಸುತ್ತಿದೆ. ಬಿಳಿನೆಲೆಯ ಯುವಕನಿಗೆ ಇದು ಲೈವ್ ವಿಡಿಯೋ ಕಾಲ್ ಎಂದು ನಂಬಿಸಿ, ಆತನನ್ನು ಬೆತ್ತಲಾಗುವಂತೆ ಪ್ರಚೋದಿಸಲಾಗಿದೆ.

ರಾತ್ರಿ ಹೊತ್ತು ನಡೆದ ಈ ಸಂಭಾಷಣೆಯ ವೀಡಿಯೋ ತುಣುಕೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಯುವಕನ ಮಾನ ಹರಾಜಾಗಿದೆ.

Leave a Comment

Your email address will not be published. Required fields are marked *