ಉದ್ದಟತನ ಪ್ರದರ್ಶಸಿದರೆ ತಕ್ಕ ಉತ್ತರ ನೀಡುತ್ತೇವೆ- ತಾಲಿಬಾನಿಗಳಿಗೆ ಎಚ್ಚರಿಕೆ ನೀಡಿದ ರಾವತ್

Ad Widget ... ..

ನವದೆಹಲಿ: ತಾಲಿಬಾನಿಗಳು ಉದ್ಧಟತನ ಪ್ರದರ್ಶಿಸಿದರೆ ಮುಲಾಜಿಲ್ಲದೆ ಭಾರತೀಯ ಸೇನೆ ತಕ್ಕ ಉತ್ತರ ನೀಡಲಿದೆ ಎಂದು ಭಾರತದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ.
ಕುರಿತು ದೆಹಲಿಯಲ್ಲಿ ಮಾತನಾಡಿರುವ ಅವರು, ನುಸುಳುವಿಕೆ ಸೇರಿದಂತೆ ಅಫ್ಘಾನಿಸ್ತಾನದ ಕಡೆಯಿಂದ ಯಾವುದೇ ಚಟುವಟಿಕೆ ನಡೆದರೆ ತಕ್ಕ ಉತ್ತರ ನೀಡಲಾಗುವುದು. ನುಸುಳುವಿಕೆಯನ್ನು ನಾವು ಭಯೋತ್ಪಾದನೆಯ ರೀತಿಯಲ್ಲೇ ಉತ್ತರಿಸುತ್ತೇವೆ ಎಂದು ಈಗಾಗಲೇ ಖಚಿತಪಡಿಸಲಾಗಿದೆ. ತಾಲಿಬಾನಿಗಳು ಉದ್ಧಟತನ ಪ್ರದರ್ಶಿಸಿದರೆ ಭಾರತೀಯ ಸೇನೆ ತಕ್ಕ ಉತ್ತರ ನೀಡಲಿದೆ ಎಂದು ಅವರು ಎಚ್ಚರಿಸಿದರು.

Ad Widget

ಇದೇ ವೇಳೆ ಭಯೋತ್ಪಾದನೆಯ ವಿರುದ್ಧ ಜಾಗತಿಕ ಉದ್ಧದ ಕುರಿತು ಚರ್ಚೆ ನಡೆಯುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ್ದಾರೆ. ಸಮನ್ವಯತೆಯಿಂದ ಯಾರೇ ಬೆಂಬಲ ನೀಡಿದರೂ, ಭಯೋತ್ಪಾದನೆಯನ್ನು ಗುರುತಿಸುವುದು, ಭಯೋತ್ಪಾದನೆಯ ವಿರುದ್ಧ ಜಾಗತಿಕ ಯುದ್ಧದ ಕುರಿತು ಯಾವುದೇ ಮಾಹಿತಿ ಬಂದರೂ ಸ್ವಾಗತಾರ್ಹ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

https://twitter.com/ANI/status/1430449105499693058?s=20

Leave a Comment

Your email address will not be published. Required fields are marked *