Ad Widget .

ಕಾರಿಂಜೇಶ್ವರನ ಸನ್ನಿಧಿ ಬಳಿ ಭಿನ್ನಕೋಮಿನ ಯುವಜೋಡಿಗಳ ನಂಗಾನಾಚ್| ಹಿಂಜಾವೇ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದ ಹುಡುಗರಿಗೆ ಸಿಕ್ತು ಬಿಸಿಬಿಸಿ ಕಜ್ಜಾಯ| ಯಾಕ್ಹಿಂಗಾಡ್ತಾರೋ ಈ ಹುಡುಗೀರು..?

ಬಂಟ್ವಾಳ: ಇಲ್ಲಿನ ಕಾರಿಂಜ ಬೆಟ್ಟದ ಕಾರಿಂಜೇಶ್ವರ ದೇವಸ್ಥಾನದ ಬಳಿ ಮುಸ್ಲಿಂ ಯುವಕರೊಂದಿಗೆ ಹಿಂದೂ ಯುವತಿಯರು ತಿರುಗಾಡುತ್ತಿದ್ದು, ಈ ಜೋಡಿಗಳನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪೋಲಿಸರಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ.

Ad Widget . Ad Widget .

ಕಾರಿಂಜ ದೇವಸ್ಥಾನದ ಬಳಿ ಮುಸ್ಲಿಂ ಯುವಕರು ಹಾಗೂ ಹಿಂದೂ ಹುಡುಗಿಯರ ಜೋಡಿಗಳು ತಿರುಗಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಗಮನಕ್ಕೆ ತಂದಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಕಾರ್ಯಕರ್ತರು ದಾಳಿ ನಡೆಸಿ ಜೋಡಿಗಳನ್ನು ಹಿಡಿದು ಬಿಸಿ ಬಿಸಿ ಕಜ್ಜಾಯ ನೀಡಿ ನಂತರ ಪೋಲಿಸರರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

Ad Widget . Ad Widget .

ಸ್ಥಳಕ್ಕೆ ಪುಂಜಾಲಕಟ್ಟೆ ಪೋಲೀಸರು ಧಾವಿಸಿ ಜೋಡಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದು ಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.

ಪೋಲೀಸರೊಂದಿಗೆ ಹಿಂದೂ ಜಾಗರಣ ವೇದಿಕೆ ಮುಖಂಡರು ಮಾತುಕತೆ ನಡೆಸಿ ಸರಿಯಾದ ತನಿಖೆ ನಡೆಸಿ ಪ್ರಕರಣ ದಾಖಲಿಸಲು ಒತ್ತಾಯಿಸಿದ್ದು ಮನೆಯವರನ್ನು ಕರೆಸಲು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೊಂದು ಲವ್ ಜಿಹಾದ್ ಶಂಕೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಲಾಗಿದೆ. ಅನ್ಯಧರ್ಮೀಯರ ಜೊತೆ ತಿರುಗಾಡುವ ಹಿಂದು ಹುಡುಗಿಯರಿಗೆ ಅದ್ಯಾವಾಗ ಭಾಷೆ ಬರುತ್ತೋ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

Leave a Comment

Your email address will not be published. Required fields are marked *