Ad Widget .

ಮಂಗಳೂರು: ಟಿ.ವಿ ನೋಡಲು ಬಂದ ಬಾಲಕಿಗೆ ಲೈಂಗಿಕ ಕಿರುಕುಳ ಮನೆ ಮಾಲೀಕನ ಬಂಧನ

Ad Widget . Ad Widget .

ಮಂಗಳೂರು: ಪಕ್ಕದ ಮನೆಗೆ ಟಿ.ವಿ ನೋಡಲು ಬಂದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮನೆ ಮಾಲೀಕನನ್ನು ಮಹಿಳಾ ಠಾಣೆಯ ಪೋಲಿಸರು ಬಂಧಿಸಿದ್ದಾರೆ.

Ad Widget . Ad Widget .

ಪೆರ್ಮುದೆ ನಿವಾಸಿ ರಾಮಕೃಷ್ಣ ಬಂಧಿತ ಆರೋಪಿ. ಶಿವಮೊಗ್ಗ ಮೂಲದ ಮಹಿಳೆಯೊಬ್ಬರು ರಾಮಕೃಷ್ಣನ ಬಾಡಿಗೆ ಮನೆಯಲ್ಲಿ ಮೂವರು ಮಕ್ಕಳೊಂದಿಗೆ ವಾಸವಿದ್ದರು. ಆಗಸ್ಟ್ 21ರಂದು ತುರ್ತು ಕೆಲಸಕ್ಕಾಗಿ ತಾಯಿ ಶಿವಮೊಗ್ಗಕ್ಕೆ ಮಕ್ಕಳನ್ನು ಬಿಟ್ಟು ಹೋಗಿದ್ದರು. ಮಕ್ಕಳನ್ನು ನೋಡಿಕೊಳ್ಳುವಂತೆ ಆರೋಪಿಯ ಪತ್ನಿಗೆ ಹೇಳಿದ್ದರು. ಸಂಜೆಯ ವೇಳೆಗೆ ಮೂವರು ಮಕ್ಕಳು ಆರೋಪಿಯ ಮನೆಗೆ ಟಿವಿ ನೋಡಲು ಹೋಗಿದ್ದು, ಆಗ ಆರೋಪಿಯ ಪತ್ನಿ ಕಟ್ಟಿಗೆ ತರಲೆಂದು ಅವರ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದರು. ಈ ಸಂದರ್ಭ ಆರೋಪಿ ಎಂಟು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ .

ಮರುದಿನವೂ ಆರೋಪಿ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ ಸಂತ್ರಸ್ತೆಯ ತಾಯಿ ಶಿವಮೊಗ್ಗದಿಂದ ಹಿಂತಿರುಗಿ ಬಂದಾಗ ಮಗಳು ವಿಷಯ ತಿಳಿಸಿದ್ದಾಳೆ. ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪಾಂಡೇಶ್ವರ ಮಹಿಳಾ ಪೋಲೀಸ್ ಠಾಣೆಗೆ ಬಾಲಕಿಯ ತಾಯಿ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave a Comment

Your email address will not be published. Required fields are marked *