Ad Widget .

ಪುತ್ತೂರು: ಕಾರು ಚಾಲಕನ ಕೊಲೆ ಯತ್ನ |6 ಮಂದಿಯ ಬಂಧನ |ಇದು ಕಾರ್ತಿಕ್ ಮೇರ್ಲ ಕೊಲೆ ಕೇಸಿಗೆ ಸಂಬಂಧವೇ?

Ad Widget . Ad Widget .

ಪುತ್ತೂರು: ದರ್ಬೆ ಪೆಟ್ರೋಲ್ ಪಂಪ್‌ನಲ್ಲಿ ಆ.24ರಂದು ರಾತ್ರಿ ಇನ್ನೋವಾ ಕಾರು ಚಾಲಕನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕೆಲವೇ ಗಂಟೆಗಳಲ್ಲಿ 6 ಮಂದಿ ಆರೋಪಿಗಳನ್ನು ಪುತ್ತೂರು ನಗರ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಗೋಪಾಲ್ ನಾಯ್ಕ್ ನೇತೃತ್ವದಲ್ಲಿ ಬಂಧಿಸಿದ್ದಾರೆ. ಇದು ಹಿಂಜಾವೇ ಯ ಕಾರ್ತಿಕ್ ಮೇರ್ಲ ಕೊಲೆ ಕೇಸಿಗೆ ಸಂಬಂಧಿಸಿದ ಈ ಕೊಲೆ ಯತ್ನ ನಡೆದಿದೆ ಎಂದು ತನಿಖೆ ವೇಳೆ ತಿಳಿದು ಬಂಧಿದೆ.

Ad Widget . Ad Widget .

ಕಿಶೊರ್ ಮೇರ್ಲ, ರಾಕೇಶ್ ಪಂಚೋಡಿ, ರೆಹಮಂತ್, ಇಬ್ರಾಹಿಂ, ದೇವಿಪ್ರಸಾದ್ ಮತ್ತು ಅಶ್ರಫ್ ಬಂಧಿತ ಆರೋಪಿಗಳು. ಪೈಂಟಿಂಗ್ ವೃತ್ತಿ ಮಾಡುತ್ತಿರುವ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ದಿ.ರಾಮಣ್ಣ ಪೂಜಾರಿ ಅವರ ಪುತ್ರ ರಾಧಾಕೃಷ್ಣ(44ವ)ರವರು ಹಲ್ಲೆಗೊಳಗಾದವರು. ಅವರು ದರ್ಬೆ ಜಗನ್ನಾಥ ರೈ ಪೆಟ್ರೋಲ್ ಪಂಪ್‌ನಲ್ಲಿ ತನ್ನ ಇನ್ನೋವ ಕಾರಿಗೆ ಡೀಸೆಲ್ ಹಾಕಿಸಿ ಬಳಿಕ ಟಯರ್‌ಗೆ ಗಾಳಿ ತುಂಬಿಸುವ ವೇಳೆ ತಂಡವೊAದು ಬಂದು ಹಲ್ಲೆ ನಡೆಸಿದೆ. ಹಲ್ಲೆಯಿಂದ ತಲೆ ಮತ್ತು ಬೆನ್ನಿಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ”ನಾನು ತನ್ನ ಕಾರಿಗೆ ಗಾಳಿ ತುಂಬಿಸುತ್ತಿದ್ದ ವೇಳೆ ಹಿಂದಿನಿಂದ ಬಂದ ಕಿಶೋರ್ ಮತ್ತು ತಂಡ ರಾಡ್‌ನಿಂದ ತಲೆಗೆ ಹಲ್ಲೆ ನಡೆಸಿ ಬಳಿಕ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ್ದಾರೆ. ಅದಲ್ಲದೆ ನನ್ನ ಕಾರಿನ ಎಲ್ಲಾ ಗಾಜುಗಳನ್ನು ಪುಡಿ ಮಾಡಿದ್ದಾರೆ” ಎಂದು ರಾಧಾಕೃಷ್ಣ ಆರೋಪಿಸಿದ್ದಾರೆ

ಕೆಲವೇ ಗಂಟೆಗಳಲ್ಲಿ ಆರೋಪಿಗಳ ಬಂಧನ:

ಘಟನೆ ಪೊಲೀಸರಿಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ. ಅದರೆ ಹಲ್ಲೆ ನಡೆಸಿದ ಆರೋಪಿಗಳು ಪೊಲೀಸರು ಬರುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದರು. ತಕ್ಷಣ ಸ್ಥಳೀಯ ಸಂಸ್ಥೆಗಳ ಸಿಸಿ ಕ್ಯಾಮರ ಪರಿಶೀಲಿಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಒಂದು ಕಾರು ಮತ್ತು ಎರಡು ಬೈಕ್‌ನಲ್ಲಿ ಬಂದು ಗುಂಪುಸೇರಿ ರಾಧಾಕೃಷ್ಣ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಸ್ಥಳದಲ್ಲಿ ಇದ್ದ ಮಾರಕಾಯುಧವಾದ ಫೈಬರ್ ಪಾರ್ಕಿಂಗ್ ಕೋನ್, ನೋಪಾರ್ಕಿಂಗ್ ಬೋರ್ಡಿನ ಕಬ್ಬಿಣದ ಸ್ಟಾಂಡ್, ಹೆಲ್ಮೆಟ್ ಹಾಗೂ ಕಲ್ಲಿನಿಂದ ಪಿರ್ಯಾದಿದಾರರ ಬೆನ್ನಿಗೆ ಎಡಗೈ ಮಣಿಗಂಟಿಗೆ, ಹಣೆಯ ಎಡಬದಿಗೆ ಬಲವಾಗಿ ಹಲ್ಲೆ ಮಾಡಿ ರಕ್ತಗಾಯವನ್ನು ಉಂಟು ಮಾಡಿರುವುದಲ್ಲದೆ, ಇನ್ನೋವ ಕಾರನ್ನು ಜಖಂಗೊಳಿಸಿ ನಷ್ಟ ಉಂಟುಮಾಡಿದ್ದಾರೆ. ಆರೋಪಿಗಳ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ತಿಕ್ ಮೇರ್ಲ ಕೊಲೆ ಕೇಸಿಗೆ ನಡೆದ ಹಲ್ಲೆ:

ಬಂಧಿತ ಆರೋಪಿಗಳು ಕೊಲೆ ಕೇಸಿಗೆ ಸಂಬಂಧಿಸಿ ಮಹತ್ವದ ವಿಚಾರವನ್ನು ಪೊಲೀಸರ ವಿಚಾರಣೆಯ ವೇಳೆ ತಿಳಿಸಿದ್ದಾರೆ. ಸುಮಾರು 2 ವರ್ಷಗಳ ಹಿಂದೆ ನಡೆದ ಕಾರ್ತಿಕ್ ಮೇರ್ಲ ಕೊಲೆ ಕೇಸಿನ ಆರೋಪಿ ಪ್ರೀತೇಶ್ ಎಂಬವರು ಈಗಲೂ ಜೈಲಿನಲ್ಲಿದ್ದು ಈ ಬಗ್ಗೆ ಪ್ರಮುಖ ಸಾಕ್ಷಿದಾರರಾದ ಆರೋಪಿ ಕಿಶೋರನ ಸಂಬಂಧಿಗಳಾದ ಕೇಶವ ಸುವರ್ಣ ಮತ್ತು ಪ್ರಮೋದರವರು ಪ್ರೀತೇಶನಪರ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯುವಂತೆ ಒಪ್ಪಿಸಲು ಪಿರ್ಯಾದುದಾರರು ತನ್ನ ಸ್ನೇಹಿತ ಪ್ರಜ್ವಲ್ ಜೊತೆ ಸೇರಿ 3 ದಿಗಳ ಹಿಂದೆ ಬೀರಮಲೆ ಗುಡ್ಡೆಯಲ್ಲಿ ಆರೋಪಿ ಕಿಶೋರನ ಜೊತೆ ಮಾತುಕತೆಯಾಡಿದ ಸಂದರ್ಭ ಅವರೊಳಗೆ ಮಾತಿಗೆ ಮಾತಾಗಿ ಗಲಾಟೆಯಾಗಿರುತ್ತದೆ. ಇದೇ ಸಿಟ್ಟಿನಿಂದ ಆರೋಪಿ ಕಿಶೋರನು ತನ್ನ ಸ್ನೇಹತರೊಂದಿಗೆ ಸೇರಿಕೊಂಡು ಈ ದಿನ ಈ ಕೃತ್ಯ ನಡೆಸಿರುವುದಾಗಿದೆ ಎಂದು ಆರೋಪಿಗಳ ವಿಚಾರಣೆ ವೇಳೆ ಮಾಹಿತಿ ಬೆಳಕಿಗೆ ಬಂದಿದೆ.

Leave a Comment

Your email address will not be published. Required fields are marked *