Ad Widget .

ಮತ್ತೆ ಮದುವೆಯಾದ ಪ್ರಕಾಶ್ ರಾಜ್

Ad Widget . Ad Widget .

ಬಹುಭಾಷಾ ನಟ ಪ್ರಕಾಶ್‌ ರಾಜ್‌ ಮತ್ತೆ ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ಅರೆ ಪ್ರಕಾಶ್​ ರಾಜ್​ ಮತ್ತೆ ಮದುವೆಯಾದ್ರಾ ಅಂತ ಯೋಚಿಸಬೇಡಿ. ಅವರು ಇದೀಗ ತಮ್ಮ ಮಗ ವೇದಾಂತ್​ ಆಸೆಯಂತೆ ಪತ್ನಿಯೊಂದಿಗೆ ಮತ್ತೆ ಮದುವೆಯಾಗಿದ್ದಾರೆ.

Ad Widget . Ad Widget .

ಪ್ರಕಾಶ್​ ರಾಜ್​ ಮತ್ತು ಪೋನಿ ವರ್ಮಾ ದಂಪತಿ ನಿನ್ನೆ (ಆಗಸ್ಟ್ 24) ತಮ್ಮ 11ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

ಇವರ ಪುತ್ರ ವೇದಾಂತ್​ಗೆ ತನ್ನ ತಂದೆ-ತಾಯಿ ಮದುವೆಯನ್ನು ನೋಡುವ ಬಯಕೆ ಇತ್ತಂತೆ. ಅದನ್ನು ಅಪ್ಪ-ಅಮ್ಮನ ಬಳಿ ಹೇಳಿಕೊಂಡಿದ್ದ. ಮಗನ ಆಸೆಯಂತೆ ಪ್ರಕಾಶ್​ ರಾಜ್​ ದಂಪತಿ ತಮ್ಮ ವೆಡ್ಡಿಂಗ್ ಆಯನಿವರ್ಸರಿ ದಿನ ಮತ್ತೆ ಮದುವೆಯಾಗಿದ್ದಾರೆ.

ಈ ಕುರಿತು ನಟ ಪ್ರಕಾಶ್​ ರಾಜ್ ಟ್ವೀಟ್​ ಮಾಡಿ, ಫೋಟೋ ಹಂಚಿಕೊಂಡಿದ್ದಾರೆ. ನಾವಿಂದು ಇನ್ನೊಮ್ಮೆ ಮದುವೆ ಮಾಡಿಕೊಂಡಿದ್ದೇವೆ. ಏಕೆಂದರೆ ನಮ್ಮ ಮದುವೆ ನೋಡಲು ಮಗ ವೇದಾಂತ್​ ತುಂಬ ಆಸೆಪಟ್ಟಿದ್ದ. ಕುಟುಂಬದೊಂದಿಗೆ ತುಂಬ ಉತ್ತಮ ಸಮಯ ಕಳೆದೆ ಎಂದು ಬರೆದುಕೊಂಡಿದ್ದಾರೆ. ನಿನ್ನೆ ನಡೆದ ಪ್ರಕಾಶ್​ ರಾಜ್​ ಮತ್ತು ಪೋನಿ ವರ್ಮಾ ಮದುವೆ ಸಂಭ್ರಮದಲ್ಲಿ ಪ್ರಕಾಶ್​ ರಾಜ್​ ಪುತ್ರಿಯರಾದ ಮೇಘನಾ ಮತ್ತು ಪೂಜಾ ಕೂಡ ಇದ್ದರು. ಇವರು ಪ್ರಕಾಶ್​ ರಾಜ್​ ಮೊದಲನೇ ಪತ್ನಿಯ ಮಕ್ಕಳು.

Leave a Comment

Your email address will not be published. Required fields are marked *