Ad Widget .

ಡ್ರಗ್ಸ್ ಕೇಸ್- ‘ನಮ್ಮನ್ನು ಬಿಟ್ಟುಬಿಡಿ ಪ್ಲೀಸ್’ – ಮಾಧ್ಯಮದೆದುರು ಸಂಜನಾ ತಾಯಿ ಕಣ್ಣೀರು

ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ಸಂಜನಾ ಗಲ್ರಾಣಿ ಹಾಗೂ ರಾಗಿಣಿ ದ್ವಿವೇದಿ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಇದೀಗ ನಟಿಮಣಿಯರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಎಫ್‍ಎಸ್‍ಎಲ್ ವರದಿಯಲ್ಲಿ ಇಬ್ಬರೂ ಡ್ರಗ್ಸ್ ಸೇವನೆ ಮಾಡಿರುವುದು ದೃಢವಾಗಿದೆ. ಇದರ ಬೆನ್ನಲ್ಲೇ ನಟಿ ಸಂಜನಾ ಸಂಪರ್ಕಕ್ಕೆ ಸಿಗುತ್ತಿಲ್ಲ, ಇತ್ತ ಅವರ ತಾಯಿ ಮಾಧ್ಯಮದವರ ಮುಂದೆ ಕಣ್ಣೀರಿಟ್ಟಿದ್ದಾರೆ.

Ad Widget . Ad Widget .

ಈ ಕುರಿತು ಸಂಜನಾ ನಿವಾಸದ ಬಳಿ ಮಾತನಾಡಿರುವ ಸಂಜನಾ ತಾಯಿ, ಸಂಜನಾ ಈಗಾಗಲೇ ತುಂಬಾ ನೊಂದಿದ್ದಾರೆ. ಡ್ರಗ್ಸ್ ಸೇವನೆ ಸಾಬೀತಾಗಿರುವ ವಿಚಾರದ ಬಗ್ಗೆ ನಮಗೆ ಗೊತ್ತಿಲ್ಲ. ಯಾರೂ ಯಾವ ಮಾಹಿತಿಯನ್ನೂ ಕೊಟ್ಟಿಲ್ಲ, ನಮ್ಮನ್ನು ಬಿಟ್ಟುಬಿಡಿ. ನಾವು ಈಗಾಗಲೇ ತುಂಬಾ ನೋವು ಅನುಭವಿಸಿದ್ದೇವೆ. ನಮ್ಮನ್ನು ಬಿಟ್ಟುಬಿಡಿ ಎಂದು ಕ್ಯಾಮರಾಗೆ ಕೈ ಮುಗಿದು ಕಣ್ಣೀರು ಹಾಕಿದ್ದಾರೆ.

Ad Widget . Ad Widget .

ಸಂಜನಾ ಡ್ರಗ್ ಕೇಸ್ ನಿಂದ ಹೊರ ಬಂದಿದ್ದಾಳೆ, ಈಗಾಗಲೇ ಈ ಕೇಸ್ ನಿಂದ ನೊಂದಿದ್ದಾಳೆ. ಮತ್ತೆ ರಿಪೋರ್ಟ್ ಅದು, ಇದು ಎಂದು ತೊಂದರೆ ಕೊಡಬೇಡಿ. ದಯವಿಟ್ಟು ನಮ್ಮನ್ನ ಬಿಟ್ಟುಬಿಡಿ, ದೇವರ ದಯೆದಿಂದ ನನ್ನ ಮಗಳು ಕೇಸ್ ನಿಂದ ಹೊರ ಬಂದಿದ್ದಾಳೆ. ದಯವಿಟ್ಟು ಅವಳನ್ನು ನೆಮ್ಮದಿಯಾಗಿರಲು ಬಿಡಿ ಎಂದು ಬೇಡಿಕೊಂಡಿದ್ದಾರೆ.

ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ನ ಸಿಎಸ್‍ಎಫ್‍ಎಲ್‍ನ ಲ್ಯಾಬ್ ನೀಡಿರುವ ವರದಿಯನ್ನು ಸಿಸಿಬಿ ತರಿಸಿಕೊಂಡಿದೆ. ಈ ಹಿಂದೆ ಇಬ್ಬರು ನಟಿಯರನ್ನು ಬಂಧಿಸಿದ್ದಾಗ ತಲೆ ಕೂದಲು ಸಂಗ್ರಹಿಸಿ ಡ್ರಗ್ಸ್ ಸೇವನೆ ಪತ್ತೆ ಮಾಡಲು ಕಳುಹಿಸಲಾಗಿತ್ತು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಲೆ ಕೂದಲಿನ ಮಾದರಿ ಸಂಗ್ರಹ ಮಾಡಲಾಗಿತ್ತು. ಒಮ್ಮೆ ಸರಿಯಾದ ಕ್ರಮದಲ್ಲಿ ಮಾದರಿ ಸಂಗ್ರಹ ಆಗದೇ ರಿಜೆಕ್ಟ್ ಆಗಿತ್ತು. ಬಳಿಕ ಮತ್ತೊಮ್ಮೆ ಮಾದರಿ ಸಂಗ್ರಹ ಮಾಡಿ ಕಳುಹಿಸಲಾಗಿತ್ತು. ಡ್ರಗ್ಸ್ ಸೇವಿಸಿರುವುದು ಇದೀಗ ವರದಿಯಲ್ಲಿ ದೃಢಪಟ್ಟಿದೆ. ಹೀಗಾಗಿ ನಟಿಮಣಿಯರಿಗೆ ಮತ್ತೆ ಸಂಕಷ್ಟ ಎದುರಾಗಿದೆ.

Leave a Comment

Your email address will not be published. Required fields are marked *