Ad Widget .

ಕೇಂದ್ರ ಸಚಿವ ನಾರಾಯಣ್ ರಾಣೆಯನ್ನು ಬಂಧಿಸಿದ ಮಹಾರಾಷ್ಟ್ರ ‌ಪೊಲೀಸ್

Ad Widget . Ad Widget .

ನಾಸಿಕ್​: ಭಾರತಕ್ಕೆ ಸ್ವಾತಂತ್ರ್ಯ ಬಂದ ವರ್ಷವನ್ನೇ ತಪ್ಪಾಗಿ ಹೇಳಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯ ಕಪಾಳಕ್ಕೆ ಹೊಡೆಯಬೇಕು ಎನ್ನಿಸಿತ್ತು ಎಂದು ಏಕವಚನದಲ್ಲಿ, ಬಹಿರಂಗವಾಗಿ ಬೈದಿದ್ದ ಬಿಜೆಪಿ ನಾಯಕ, ಕೇಂದ್ರ ಸಚಿವ ನಾರಾಯಣ್​ ರಾಣೆ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ರತ್ನಗಿರಿ ಜಿಲ್ಲೆಯ ಚಿಪ್ಲುನ್​ ನಗರದಲ್ಲಿದ್ದ ನಾರಾಯಣ್ ರಾಣೆಯವರನ್ನು ನಾಸಿಕ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಅವರ ವಿರುದ್ಧ ಅದಾಗಲೇ ಪುಣೆ, ನಾಸಿಕ್​​, ಮತ್ತು ರಾಯ್​ಗಡ್​ನ ಮಹಾದ್​​ನಲ್ಲಿ ಎಫ್​ಐಆರ್ ದಾಖಲಾಗಿದೆ. ಈ ಮಧ್ಯೆ ಬಂಧನ ಅಥವಾ ಇನ್ಯಾವುದೇ ಬಲವಂತವಾಗಿ ತೆಗೆದುಕೊಳ್ಳಲಾಗುವ ಕ್ರಮಗಳಿಂದ ರಕ್ಷಣೆ ಕೊಡುವಂತೆ ನಾರಾಯಣ ರಾಣೆ ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ್ದರು. ಆದರೆ ಅವರ ಅರ್ಜಿ ವಿಚಾರಣೆ ಮಾಡಲು ಜಸ್ಟೀಸ್​ ಎಸ್​ಎಸ್​ ಶಿಂಧೆ ಮತ್ತು ಎನ್​ಜೆ ಜಮ್ದಾರ್​ ಅವರಿದ್ದ ಪೀಠ ನಿರಾಕರಿಸಿದೆ.

Ad Widget . Ad Widget .

ಉದ್ಧವ್ ಠಾಕ್ರೆಯವರಿಗೆ ಸ್ವಾತಂತ್ರ್ಯ ಬಂದ ವರ್ಷವೇ ಗೊತ್ತಿಲ್ಲ. ಇದು ನಾಚಿಕೆಗೇಡಿನ ವಿಷಯ. ಈ ಬಾರಿ ಎಷ್ಟನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತಿದೆ ಎಂಬುದು ಗೊತ್ತಿಲ್ಲದೆ, ಅದನ್ನು ಕೇಳಲು ಭಾಷಣದ ಮಧ್ಯೆಯೇ ಹಿಂದೆ ಬಾಗಿದ್ದಾರೆ. ನಾನೇ ಅಲ್ಲಿದ್ದಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ನಾರಾಯಣ ರಾಣೆ ಹೇಳಿದ್ದರು. ಆದರೆ ಈ ಮಾತು ಸಿಕ್ಕಾಪಟೆ ವಿವಾದ ಸೃಷ್ಟಿಸಿತ್ತು. ಶಿವಸೇನೆ ಕಾರ್ಯಕರ್ತರೂ ಪ್ರತಿಭಟನೆ ಶುರು ಮಾಡಿದ್ದರು. ನಾಸಿಕ್​ನಲ್ಲಿರುವ ಬಿಜೆಪಿ ಕಚೇರಿಗೆ ಕಲ್ಲು ಎಸೆದು, ರಾಣೆ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಅಷ್ಟೇ ಅಲ್ಲ, ಶಿವಸೇನೆ ಸಂಸದ ವಿನಾಯಕ್​ ರಾವತ್​, ಪ್ರಧಾನಿ ಮೋದಿಯವರಿಗೆ ಪತ್ರ ಬರೆದು, ರಾಣೆಯನ್ನು ಕೇಂದ್ರ ಸಂಪುಟದಿಂದ ತೆಗೆದುಹಾಕಬೇಕು ಎಂದೂ ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *