ಪ್ರತಿಯೊಬ್ಬ ಮನುಷ್ಯನಿಗೆ ಪ್ರಾಣಿ ಪಕ್ಷಿಗಳ ಜೊತೆ ಪ್ರೀತಿ ಇರುವುದು ಸಾಮಾನ್ಯ. ಅದರಲ್ಲೂ ನಮ್ಮ ಭಾರತೀಯರಿಗೆ ದನ, ನಾಯಿ, ಬೆಕ್ಕು, ಮೊಲ, ಹಾಗೇ ಇನ್ನೂ ಕೆಲವು ಪಕ್ಷಿಗಳ ಜೊತೆ ಪ್ರೀತಿ ಹುಟ್ಟುವುದು ಸಾಮಾನ್ಯ, ಇದರಿಂದ ಆ ಪ್ರಾಣಿಗಳ ಮೇಲೆ ಮನುಷ್ಯರು ಕಾಳಜಿ ತೋರಿಸುತ್ತಾರೆ. ಅದರ ಮಧ್ಯೆ ಆ ಪ್ರಾಣಿಗಳಿಗೆ ನೋವು ಆದರೆ ಮನುಷ್ಯರ ಮನಸ್ಸಿಗೂ ನೋವು ಉಂಟಾಗುತ್ತದೆ. ಇನ್ನೂ ಕೆಲವು ಕಡೆ ನಾಯಿ, ಕುದುರೆಗಳ ಮೇಳೆ ಲೈಂಗಿಕ ತೃಷೆ ತೀರಿಸಿಕೊಂಡ ಕಾಮುಕರು ಕೂಡ ನಮ್ಮಲ್ಲಿ ಇದ್ದಾರೆ. ಅದು ಪ್ರೀತಿ ಜಾಸ್ತಿಯಾಗಿ ಆ ಪ್ರೀತಿ ಆ ಪ್ರಾಣಿಗಳ ಮೇಲೆ ಕಾಮದ ಆಸೆ ಹುಟ್ಟುವಂತೆ ಮಾಡುತ್ತದೆ. ಅದರಿಂದ ಆಂತಹ ಘಟನೆಗಳು ನಡೆಯುತ್ತದೆ . ವಿಷಯ ಕೂಡ ಮಿತಿಮೀರಿದಾಗ ಅಮೃತವು ವಿಷವಾದಿತು ಅನ್ನುವ ಗಾದೆ ಮಾತು ಇವತ್ತಿಗೂ ನಿಜವಾಗುತ್ತಾ ಬಂದಿದೆ. ಅದರೆ ರೀತಿ ಇಲ್ಲೊಂದು ಮನುಷ್ಯ ಮತ್ತು ಪ್ರಾಣಿಯ ಮಧ್ಯೆ ಪ್ರೇಮ ಕಹಾನಿ ಇದೆ. ಇಂಥ ವಿಲಕ್ಷಣ ಘಟನೆ ನಡೆದಿರೋದು ಬೆಲ್ಜಿಯಂನ ಆಂಟ್‌ವರ್ಪ್ನಲ್ಲಿ.
ಆ ಮಹಿಳೆಗೆ ಮೃಗಾಲಯದಲ್ಲಿ ಚಿಂಪಾಂಜಿಯೊಂದಿಗೆ 4 ವರ್ಷಗಳ ಕಾಲ ಸಂಬಂಧ ಹೊಂದಿದ್ದಾಗಿ ಹೇಳಿಕೊಂಡಿದ್ದಾರೆ. ಮೃಗಾಲಯದಲ್ಲಿರುವ ‘ಚಿಟಾ’ ಹೆಸರಿನ ಚಿಂಪಾಂಜಿ ಜೊತೆ ತನಗೆ ಸಂಬಂಧವಿದೆ ಎಂದು ಆಡಿ ಟಿಮ್ಮರ್ಮನ್ಸ್ ಬಾಯ್ಬಿಟ್ಟಿದ್ದಾರೆ. ಇವರ ಪ್ರೇಮ ಕಹಾನಿಯನ್ನು ಕೇಳಿದ ಮೃಗಾಲಯದ ಆಡಳಿತ ಮಂಡಳಿ ಆಟಿ ಟಿಮ್ಮರ್ಮನ್ಸ್ಗೆ ಮೃಗಾಲಯಕ್ಕೆ ಭೇಟಿ ನೀಡುವುದನ್ನು ನಿಷೇಧಿಸಿದೆ.
ಮಹಿಳೆ ಹಾಗೂ ಜಿಂಪಾಂಜಿ ನಡುವೆ ಇದ್ದ ಗಾಜಿನ ತಡೆ ಅವರಿಬ್ಬರ ನಡುವಿನ ಪ್ರೇಮಕ್ಕೆ ಅಡ್ಡಿ ಬಂದಿಲ್ಲವಂತೆ. ಗ್ಲಾಸ್ ನ ಆ ಕಡೆ ಜಿಂಪಾಂಜಿ ಈ ಕಡೆ ಮಹಿಳೆ ಪರಸ್ಪರ ಸಂವಹನ ನಡೆಸಿದ್ದಾರೆ. ಪರಸ್ಪರ ಚುಂಬಿಸುತ್ತಿದ್ದರು ಕೂಡ ಎಂದು ತಿಳಿದು ಬಂದಿದೆ. ಚಿತಾ ಜೊತೆ ಆಡಿ ಸಂಬಂಧ ಒಳ್ಳೆಯದಲ್ಲ. ಇದು ಇತರ ಚಿಂಪಾಂಜಿಗಳೊಂದಿಗಿನ ಬಾಂಧವ್ಯಕ್ಕೆ ಹಾನಿಕಾರಕವೆಂದು ಮೃಗಾಲಯ ನಿಷೇಧವೇರಿದೆ. ಇನ್ಮುಂದೆ ಜಿಂಪಾಂಜಿಯನ್ನು ಮಹಿಳೆ ಭೇಟಿಯಾಗಬಾರದು. ಇದಕ್ಕಾಗಿ ಝೋಗೆ ಭೇಟಿ ನೀಡಬಾರದು ಎಂದು ತಾಕೀತು ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳೆ, ನಾನು ಆ ಪ್ರಾಣಿಯನ್ನು ಪ್ರೀತಿಸುತ್ತೇನೆ. ಅವನು ನನ್ನನ್ನು ಪ್ರೀತಿಸುತ್ತಾನೆ. ನನಗೆ ಜೀವನದಲ್ಲಿ ಬೇರೆ ಏನೂ ಸಿಕ್ಕಿಲ್ಲ. ಈಗ ಅವನಿಂದ ಸಿಕ್ಕಿರುವ ಪ್ರೀತಿಯನ್ನು ತೆಗೆದುಕೊಳ್ಳಲು ಏಕೆ ಬಯಸುತ್ತಾರೆ. ನಮ್ಮ ಸಂಬಂಧಕ್ಕೆ ಈ ಅಡ್ಡಿ ಏಕೆ ಎಂದು ಪ್ರಶ್ನಿಸಿದ್ದಾರೆ.
ಪ್ರೀತಿಗೆ ಕಣ್ಣಿಲ್ಲ ಅಂತಾರೆ, ಆದರೆ ಇಲ್ಲಿ ಪ್ರಾಣಿ ಪ್ರೀತಿಗೂ ಕಣ್ಣಿಲ್ಲ. ಝೋನಲ್ಲಿರುವ ಜಿಂಪಾಂಜಿ ಹಾಗೂ ಮಹಿಳೆ ಮಧ್ಯೆ ಮೂಡಿದ ಸಂಬಂಧಕ್ಕೆ ಮೃಗಾಲಯದ ಆಡಳಿತ ಮಂಡಳಿಯೇ ವಿಲನ್ ಆಗಿದೆಯಂತೆ. ಜಿಂಪಾಂಜಿಯನ್ನು ಭೇಟಿಯಾಗಲು ಸಾಧ್ಯವಾಗದೆ ಮಹಿಳೆ ಕಣ್ಣೀರಿಡುತ್ತಿದ್ದಾರೆ.
ಇನ್ನು ಮಹಿಳೆಯ ಜೊತೆ ಸಂಬಂಧ ಹೊಂದಿರುವ ಜಿಂಪಾಂಜಿ ಇತರೆ ಪ್ರಾಣಿಗಳೊಂದಿಗೆ ಸೇರುತ್ತಿಲ್ಲವಂತೆ. ಮಹಿಳೆಯ ಆಗಮನವನ್ನೇ ನಿರೀಕ್ಷಿಸುತ್ತಾ ಕೂತಿರುತ್ತದೆ. ಅದು ಈಗ ಪ್ರಾಣಿಗಳೊಂದಿಗೆ ಬೆರೆಯುವದನ್ನು ಬಿಟ್ಟಿದೆ ಎನ್ನಲಾಗುತ್ತಿದೆ. ಆದರೆ ಮೃಗಾಲಯ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದೆ.