Ad Widget .

ಕುಂದಾಪುರ: ಆಕಸ್ಮಿಕವಾಗಿ ನದಿಗೆ ಬಿದ್ದು ಇಬ್ಬರು ಯುವಕರು ಮೃತ್ಯು

Ad Widget . Ad Widget .

ಕುಂದಾಪುರ: ಇಬ್ಬರು ಯುವಕರು ಆಕಸ್ಮಿಕವಾಗಿ ನದಿಗೆ ಬಿದ್ದು ಸಾವನಪ್ಪಿದ ಘಟನೆ ಕುಂದಾಪುರದ ಅಲ್ಬಾಡಿ ಗ್ರಾಮದ ಗಂಟುಬೀಲು ಬಳಿ ಸಂಭವಿಸಿದೆ.

Ad Widget . Ad Widget .

ಅಲ್ಬಾಡಿ ಗ್ರಾಮದ ಮೋಹನ್ ನಾಯಕ್ (21) ಮತ್ತು ಮಹಾಬಲ ನಾಯ್ಕ್ ಅವರ ಮಗ ಸುರೇಶ್ (19) ಮೃತಪಟ್ಟ ಯುವಕರು. ಇವರಿಬ್ಬರು ಬಡ ಕುಟುಂಬದವರಾಗಿದ್ದು, ಇಬ್ಬರು ಕೂಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಅವರು ಗಂಟುಬೀಲು ಕೃಷ್ಣ ನಾಯಕ್ ಅವರಿಗೆ ಸೇರಿದ ತೋಟಕ್ಕೆ ಕೂಲಿ ಕೆಲಸ ಮಾಡಲು ಹೋಗಿದ್ದು, ಬಳಿಕ ತಡವಾದರೂ ಹಿಂದಿರುಗದ ಹಿನ್ನಲೆಯಲ್ಲಿ ಹುಡುಕಾಟ ಆರಂಭಿಸಿದಾಗ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿವೆ.

ಇಬ್ಬರೂ ಒಟ್ಟಿಗೆ ನದಿಗೆ ಹೋದರೋ ಅಥವಾ ಇನ್ನೊಬ್ಬರು ಅಪಾಯದಲ್ಲಿದ್ದ ವ್ಯಕ್ತಿಯ ಜೀವವನ್ನು ಉಳಿಸಲು ಪ್ರಯತ್ನಿಸುವಾಗ ಸತ್ತಿದ್ದಾರೋ ಯಾರಿಗೂ ತಿಳಿದಿಲ್ಲ.

ಇವರಿಬ್ಬರು ಹತ್ತಿರದ ಸಂಬAಧಿಗಳಾಗಿದ್ದು, ಮೋಹನ್ ನಾಯ್ಕ್ ತನ್ನ ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ ಮತ್ತು ಸುರೇಶ್ ನಾಯ್ಕ್ ಪೋಷಕರು ಮತ್ತು ಸಹೋದರನನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *