ಮಂಗಳೂರು: ತಾಲಿಬಾನ್ ಗಳ ಕಪಿಮುಷ್ಠಿಗೆ ಸಿಲುಕಿರುವ ಅಪ್ಘಾನಿಸ್ತಾನದಿಂದ ಮರಳಿ ತಾಯ್ನಾಡಿಗೆ ಬಂದಿರುವ ಭಾರತೀಯರು ಅಲ್ಲಿನ ಪರಿಸ್ಥಿತಿಗಳ ಭಯಾನಕ ಸ್ಥಿತಿಗಳ ಬಗ್ಗೆ ತೆರೆದಿಟ್ಟಿದ್ದಾರೆ.
ಗಳೂರಿನ ಬಜಪೆ ನಿವಾಸಿ ದಿನೇಶ್ ರೈ ಅವರು ನ್ಯಾಟೋ ಮಿಲಿಟರಿ ಪಡೆಯ ಜೊತೆ ಕೆಲಸ ನಿರ್ವಹಿಸುತ್ತಿದ್ದು, ಅಪ್ಘಾನಿಸ್ತಾನದಿಂದ ಸುರಕ್ಷಿತವಾಗಿ ದೇಶಕ್ಕೆ ಆಗಮಿಸಿದ್ದಾರೆ . ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಅಪ್ಘಾನಿಸ್ತಾನದ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ನಾನು ಕಳೆದ 10 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ನ್ಯಾಟೋ ಮಿಲಿಟರಿ ಪಡೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ.
ನಮಗೆ ಹೊರಗಿನ ಜನರ ಯಾವುದೇ ಸಂಪರ್ಕ ಇರೋದಿಲ್ಲ. ನಾವಿದ್ದ ಜಾಗಕ್ಕೆ ನ್ಯಾಟೋ ಸಂಪೂರ್ಣ ಭಧ್ರತೆ ನೀಡಿದೆ. ಕಳೆದ ಕೆಲ ದಿನಗಳಿಂದ ಕಾಬೂಲ್ ಸೇರಿದಂತೆ ಪೂರ್ತಿ ಅಫ್ಘಾನಿಸ್ತಾನ ತಾಲಿಬಾನಿಗಳ ಕೈವಶ ವಾಗುತ್ತಿರುವುದು ನೋಡಿ ಆತಂಕ ಉಂಟಾಗಿತ್ತು” ಎಂದರು. “ನಮ್ಮನೆಲೆಗೆ ಅವರು ಬರೋಕೆ ಸಾಧ್ಯವಾಗಿಲ್ಲ. ನಮ್ಮ ನೆಲೆಯ ಹತ್ತಿರದಲ್ಲೇ ಕಾಬೂಲ್ ವಿಮಾನ ನಿಲ್ದಾಣ ಇರುವುದರಿಂದ ಸ್ಥಳೀಯರು ಅಮೆರಿಕ ವಿಮಾನಕ್ಕೆ ಮುತ್ತಿಗೆ ಹಾಕಿದ್ದರು. ಈ ದೃಶ್ಯವನ್ನು ನಾನು ಕಣ್ಣಾರೆ ಕಂಡಿದ್ದೇನೆ ಮತ್ತು ಹೊರಭಾಗದಲ್ಲಿ ಗುಂಡಿನ ಮೊರೆತವಾಗುತ್ತಿತ್ತು. ನಾವು ಕಾಬೂಲ್‌ನಲ್ಲಿ ಇದ್ದಿದ್ದರಿಂದ ಮನೆಯವರಿಗೂ ಭಯವಾಗಿತ್ತು. ಸದ್ಯ ನಾವು ಸೇಫ್ ಆಗಿ ಮರಳಿ ಬಂದಿದ್ದೇವೆ ಅನ್ನೋದೊಂದೇ ಖುಷಿ ಎಂದು ದಿನೇಶ್ ರೈ ಹೇಳಿದರು
ಇನ್ನು ಕಾಬೂಲ್ ವಿಮಾನ ನಿಲ್ದಾಣದಲ್ಲಿ ನ್ಯಾಟೋ ಪಡೆ ಫೈರಿಂಗ್ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅಗಸ್ಟ್ 15ರಂದು ಕಾಬೂಲ್ ವಿಮಾನ ನಿಲ್ದಾಣಕ್ಕೆ ನುಗ್ಗಿದ್ದ ಅಫ್ಘಾನ್ ನಿವಾಸಿಗಳು ತಮ್ಮನ್ನೂ ಕರೆದುಕೊಂಡು ಹೋಗುವಂತೆ ವಿಮಾನ ನಿಲ್ದಾಣದಲ್ಲಿ ಮುತ್ತಿಗೆ ಹಾಕಿದ್ದರು. ಈ ಸಂದರ್ಭ ಅಫ್ಘಾನ್ ನಿವಾಸಿಗಳನ್ನು ಚದುರಿಸಲು ಫೈರಿಂಗ್ ಮಾಡಿದ್ದ ನ್ಯಾಟೋ ಪಡೆ, ನ್ಯಾಟೋ ಪಡೆಯ ಫೈರಿಂಗ್ ನ್ನು ದಿನೇಶ್ ರೈ ಕಣ್ಣಾರೆ ಕಂಡಿದ್ದರು.