Ad Widget .

ಮಂಗಳೂರು: ಕೊನೆಗೂ ಪತ್ತೆಯಾಯಿತು ಶವದಿಂದ ನಾಪತ್ತೆಯಾದ ಡೈಮಂಡ್ – ಕಳ್ಳ ಗಂಡನಿಗೆ ಸಾತ್ ಕೊಟ್ಟು ಹೆಂಡತಿ ಈಗ ಮಾತಾಡಮ್ಮ !!

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮಂಗಳೂರು: ಕೆಲ ದಿನಗಳ ಹಿಂದೆ ಭಾರೀ ಸುದ್ದಿಯಲ್ಲಿದ್ದ ನಗರದ ಬೆಂದೂರ್ ವೆಲ್ ನಲ್ಲಿರುವ ಖಾಸಗಿ ಆಸ್ಪತ್ರೆಯಾದ ಕೊಲಾಸ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿರುವ ವ್ಯಕ್ತಿಯ ಮೃತದೇಹದ ಕಿವಿಯಿಂದ ನಾಪತ್ತೆಯಾಗಿದ್ದ ವಜ್ರದ ಕಿವಿ ಓಲೆಯನ್ನು ಕದ್ರಿ ಪೊಲೀಸರು ಪತ್ತೆ ಮಾಡಿದ್ದಾರೆ.

Ad Widget . Ad Widget . Ad Widget .

ಮಾಲ್ ಒಂದರ ಭದ್ರತಾ ವಿಭಾಗದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಹರೀಶ್ ಶೆಟ್ಟಿ (45) ಗುರುವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಅವನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ತೆಗೆಯಲಾಗಿತ್ತಾದರೂ, ಮೃತದೇಹದ ಕಿವಿಯಲ್ಲಿನ ವಜ್ರದ ಓಲೆ ಹಾಗೆಯೇ ಬಿಡಲಾಗಿತ್ತು.

ಅಂತ್ಯಕ್ರಿಯೆಯ ಸಮಯದಲ್ಲಿ ಸಂಬಂಧಿಕರು ಓಲೆಗಳನ್ನು ತೆಗೆಯಲು ಯೋಜಿಸಿದ್ದರು ಈ ಬಗ್ಗೆ ಶವಾಗಾರದ ಕಾವಲು ಸಿಬ್ಬಂದಿಗೂ ಮಾಹಿತಿ ನೀಡಲಾಗಿತ್ತು. ಆದರೆ ಮರುದಿನ ಮೃತದೇಹದಿಂದ ಇಯರ್ ರಿಂಗ್‌
ಕಾಣೆಯಾಗಿತ್ತು. ಈ ಬಗ್ಗೆ ಸೆಕ್ಯುರಿಟಿ ಗಾರ್ಡ್ ಬಳಿ, ಕಾಣೆಯಾದ ಇಯರ್ ರಿಂಗ್‌ಗಳ ಬಗ್ಗೆ ಕೇಳಿದಾಗ, ತನಗೇನೂ ತಿಳಿದಿಲ್ಲ ಎಂದು ಉತ್ತರಿಸಿದ್ದ. ನಂತರ ಕದ್ರಿ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಸೆಕ್ಯುರಿಟಿ ಗಾರ್ಡ್ ವಿಚಾರಿಸಿದಾಗ ಆತನೇ ಕದ್ದಿರುವುದು ಗೊತ್ತಾಗಿದ್ದು, ಅದರ ನಂತರ ಅವರು ಹರೀಶ್ ಶೆಟ್ಟಿಯ ಕುಟುಂಬ ಸದಸ್ಯರಿಗೆ ಉಂಗುರಗಳನ್ನು ಹಿಂದಿರುಗಿಸಿದ್ದಾರೆ ಎಂದು ತಿಳಿದುಬಂದಿದೆ.

ಮೂರು ತಿಂಗಳ ಹಿಂದೆ ಸಂಬಂಧಪಟ್ಟ ಸೆಕ್ಯುರಿಟಿ ಗಾರ್ಡ್ ಕರ್ತವ್ಯಕ್ಕೆ ಸೇರಿದ್ದು, ಈ ರೀತಿ ಕದಿಯುತ್ತಾರೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿಗೆ ಯಾವುದೇ ಸುಳಿವು ಇರಲಿಲ್ಲ . ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಮತ್ತು ಆಸ್ಪತ್ರೆಯು ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರವನ್ನು ನೀಡುತ್ತದೆ ಎಂದು ಆಸ್ಪತ್ರೆಯ ಮ್ಯಾನೇಜರ್ ಹೇಳಿದ್ದಾರೆ.

ಕಳ್ಳತನ ಬೆಳಗಿಗೆ ಬಂದ ಕೂಡಲೇ ಅಲ್ಲಿರುವ ಸೆಕ್ಯೂರಿಟಿಯನ್ನು ವಿಚಾರಿಸಲಾಗಿತ್ತು. ಆದರೆ ಆತ ನಾನು ಕದ್ದೇ ಇಲ್ಲವೆಂದು ವಾದಿಸಿದ್ದರು. ಆತನ ಜೊತೆಗೆ ಆತನ ಪತ್ನಿ ಕೂಡ ನಾವು ಆ ಕಳ್ಳತನ ಮಾಡಿಲ್ಲ, ನಮ್ಮನ್ನು ಯಾಕೆ ಕಳ್ಳರೆಂದು ಹೇಳುತ್ತೀರಾ? ದೇವರಾಣೆ ಕದ್ದಿಲ್ಲ ಎಂದು ಹೇಳಿದ್ದಳು. ಆದರೆ ಇದೀಗ ಬೇಲಿಯೇ ಎದ್ದು ಹುಲ್ಲು ಮೇಯ್ದಂತೆ ಆಗಿದೆ.

Leave a Comment

Your email address will not be published. Required fields are marked *