Ad Widget .

ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ – ಇಬ್ಬರು ಬಲಿ ದುರ್ಮರಣ

Ad Widget . Ad Widget .

ಬೆಂಗಳೂರು: ಫುಡ್ ಪ್ರಾಡಕ್ಟ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟಗೊಂಡು ಇಬ್ಬರು ದುರ್ಮರಣಗೊಂಡ ಘಟನೆ ನಗರದ ಮಾಗಡಿ ರಸ್ತೆಯ 5ನೇ ಕ್ರಾಸ್ ಬಳಿ ನಡೆದಿದೆ.

Ad Widget . Ad Widget .

ಬಿಹಾರ ಮೂಲದ ಸೌರಭ್ ಮತ್ತು ಮನೀಶ್ ಮೃತ ಪಟ್ಟವರು. ಘಟನೆಯಲ್ಲಿ ಸಚಿನ್, ಶಾಂತಿ ಹಾಗೂ ಧನಲಕ್ಷ್ಮಿ ಎಂಬವರಿಗೆ ಗಾಯಗಳಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.ವಿಜಯ್ ಮೆಹ್ತಾ ಒಡೆತನದ ಸ್ನ್ಯಾಕ್ಸ್ ತಿಂಡಿ ಪದಾರ್ಥ ತಯಾರಿ ಮಾಡುವ ಎಂಎಂ ಫುಡ್ ಫ್ಯಾಕ್ಟರಿಯಲ್ಲಿ ಅವಘಡ ಸಂಭವಿಸಿದೆ. ಘಟನೆಯ ವೇಳೆ ಫ್ಯಾಕ್ಟರಿ ಒಳಗಡೆ ಒಟ್ಟು 7 ಮಂದಿ ಕೆಲಸ ಮಾಡುತ್ತಿದ್ದರು.
ಮಾಗಡಿ ರೋಡ್ ನಲ್ಲಿ ಇದ್ದ ಫ್ಯಾಕ್ಟರಿಗೆ ಈ ಹಿಂದೆ ಬೆಂಕಿ ಅವಘಡ ಸಂಭವಿಸಿತ್ತು. ಅಲ್ಲಿಂದ ಇಲ್ಲಿಗೆ ಫ್ಯಾಕ್ಟರಿಯನ್ನ ಶಿಫ್ಟ್ ಮಾಡಲಾಗಿತ್ತು. ಇಲ್ಲಿಗೆ ಶಿಪ್ಟ್ ಆಗಿ ಮೂರು ತಿಂಗಳಾಗಿದೆ. ಚಿಪ್ಸ್, ಚಕ್ಕುಲಿ, ಮೀಕ್ಷರ್ ಸೇರಿದಂತೆ ಬೇಕರಿ ಉತ್ಪನ್ನಗಳನ್ನ ತಯಾರಿಸುತ್ತಿದ್ದು, ಪಕ್ಕದಲ್ಲೇ ಶಾಲೆ ಕೂಡ ಇದೆ.

ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ದೌಡಾಯಿಸಿವೆ. ಹಾಗೆಯೇ ಡಿಸಿಪಿ ಸಂಜೀವ್ ಪಾಟೀಲ್ ಕೂಡ ಭೇಟಿ ಕೊಟ್ಟಿದ್ದಾರೆ.

ಇನ್ನೂ ಪೆÇಲೀಸರು ಎಫ್‍ಎಸ್‍ಎಲ್‍ಟೀಂ ಗೆ ಸ್ಫೋಟದ ಬಗ್ಗೆ ಮಾಹಿತಿ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ತಂಡ ಫ್ಯಾಕ್ಟರಿಗೆ ಭೇಟಿ ಕೊಟ್ಟಿದ್ದು, ಬಾಯ್ಲರ್ ಸ್ಫೋಟಕ್ಕೆ ಕಾರಣ ಹುಡಕಲಿದೆ.

Leave a Comment

Your email address will not be published. Required fields are marked *