Ad Widget .

ದ್ವಾದಶ ರಾಶಿಗಳ ವಾರಭವಿಷ್ಯ. ಆ.22ರಿಂದ 28ರವರೆಗೆ

ಜಗತ್ತಿನ ಪ್ರತೀ ಚಲನೆಗೂ ಗ್ರಹಗತಿಗಳೇ ಕಾರಣ ಎಂಬುದು ಶಾಸ್ತ್ರಸಮ್ಮತ ನಂಬಿಕೆ. ಭಾರತೀಯ ಶಾಸ್ತ್ರಗಳ ಪ್ರಕಾರ ಗ್ರಹಚಾರಗಳು ವ್ಯಕ್ತಿಯ ರಾಶಿಗಳ ಚಲನೆಗೆ ಅನುಸಾರವಾಗಿ ನಡೆಯುತ್ತವೆ. ಒಬ್ಬ ವ್ಯಕ್ತಿ ಆತ ಏನೇ ಕೆಲಸ ಕಾರ್ಯ‌ಮಾಡಲು ಆತ ಹುಟ್ಟಿದ ಜನ್ಮ ನಕ್ಷತ್ರ, ರಾಶಿಗಳ ಪ್ರಭಾವ ಕಾರಣ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ರಾಶಿ‌ ಮತ್ತು ಗ್ರಹಗಳ ಚಲನಗೆ ಅನುಸಾರವಾಗಿ ಆ.22ರಿಂದ 28ರವರೆಗಿನ ಒಂದಿಡೀ ವಾರದ ರಾಶಿಫಲವನ್ನು ನೀಡಲಾಗಿದೆ. ಜೊತೆಗೆ ದೋಷ ಪರಿಹಾರಗಳನ್ನು ತಿಳಿಸಲಾಗಿದೆ. ನಿಮ್ಮ ಈ ವಾರದ ರಾಶಿಭವಿಷ್ಯ ತಿಳಿದುಕೊಂಡು, ವಾರವನ್ನು ಉತ್ತಮಗೊಳಿಸಿಕೊಳ್ಳಿ. ಶುಭವಾಗಲಿ…

Ad Widget . Ad Widget .

ಮೇಷ

Ad Widget . Ad Widget .

ಶ್ರಾವಣ ಮಾಸದ ಬಹುಳ ಪಾಡ್ಯವು ಗಾಯತ್ರಿ ಪ್ರತಿಪತ್ ಆಗಿದ್ದು ಶುಕ್ರನು ನಸುಕಿನ ಪೂರ್ವದಲ್ಲೂ, ಗುರು, ಶನಿ ಗ್ರಹಗಳು ಪಶ್ಚಿಮದಲ್ಲ್ಲ ಕಾಣಿಸುತ್ತಾರೆ.ರಾಶಿಗೆ ಮಂಗಳನೇ ಅಧಿಪತಿ ಹಾಗೂ ಏಕಾದಶದಲ್ಲಿ ಗುರುವಿರುವುದರಿಂದ ನೀವು ಯಾವ ಕೆಲಸದಲ್ಲೂ ವಿಫಲವಾಗುವುದಿಲ್ಲ. ದುರ್ಗೆ, ಸುಬ್ರಹ್ಮಣ್ಯನನ್ನು ಪೂಜಿಸಿದರೆ ಸರ್ವಾಭಿಷ್ಟಗಳು ಸಿದ್ಧಿಯಾಗುತ್ತದೆ. ಆ.23 ರಿಂದ 26ರವರೆಗೆ ಎಲ್ಲ ಕಾರ್ಯಗಳು ಮಿಂಚಿನ ವೇಗದಲ್ಲಿ ಸಾಗುತ್ತವೆ. ಆ.27 ರಿಂದ ಸಾಧಾರಣ ಕೆಲಸಗಳನ್ನು ಮುಂದೂಡಿ.

ವೃಷಭ

ವೃಷಭ ರಾಶಿಯಲ್ಲಿ ಆ.23 ರಿಂದ 26ರವರೆಗೆ ಕಾರ್ಯ ಜಯ. ನಂತರ ಆ.29ರ ವರೆಗೆ ಅನುಕೂಲಕರವಾಗಿಲ್ಲ. ದಶಮದಲ್ಲಿ ಗುರುವು, ನವಮ ಶನಿಯು ಇದ್ದು, ದ್ವಾದಶದಲ್ಲಿ ಅಂಗಾರಕನ ಮನೆಯಿರುವುದರಿಂದ ಷಣ್ಮುಖನನ್ನು ಪ್ರಾರ್ಥಿಸಿ. ಏನು ಬೇಕಾದರೂ ಪಡೆಯಿರಿ. ವಾಗ್ದಾನ ಮಾಡಿದ್ದನ್ನು ನಡೆಸದಿದ್ದರೆ ನಿಮ್ಮ ಒಳ್ಳೆಯ ಕಾಲದಲ್ಲಿ ಕಾಡುತ್ತದೆ. ಶುಭಕ್ಕೆ ಶನಿಯೊಬ್ಬನೇ ಸಾಕು.

ಮಿಥುನ

ರಾಶ್ಯಾಧಿಪತಿ ಬುಧನು ಸ್ವಂತ ಮನೆಯಾದ ಕನ್ಯಾ ರಾಶಿಯಲ್ಲಿ ಕುಳಿತಿರುವುದರಿಂದ, ಗುರುವು 9ರಲ್ಲಿ ಇನ್ನೂ ಸ್ವಲ್ಪ ಕಾಲ ಇದ್ದು, ಬೆಳಕನ್ನು ನೀಡಿದರೂ, ಎಂಟರ ಶನಿ ತಡೆಯೊಡ್ಡುತ್ತಾನೆ. ಅದಕ್ಕೆ ಪರಿಹಾರ ಶ್ರಾವಣ ಸೋಮವಾರದಂದು ವಿಶೇಷವಾಗಿ ಉಮಾ ಮಹೇಶ್ವರನನ್ನು ಆರಾಧಿಸಿದರೆ ಹೆಚ್ಚಿನ ಸುಖ ಪಡೆಯಬಹುದು.

ಕಟಕ

ಜಲ ರಾಶ್ಯಾಧಿಪತಿ ಚಂದ್ರನು ಶನಿ ಮನೆಯಲ್ಲಿ ಸಂಚರಿಸುವುದರಿಂದ ಸ್ಥಿರವಾಗಿ ಒಮ್ಮೊಮ್ಮೆ ಭಯವೂ ಕಾಡಿ ಆರೋಗ್ಯ ವ್ಯತ್ಯಯವಾಗುತ್ತದೆ. ಪ್ರಾಣಭಯವಿಲ್ಲ. ಸುಖಕ್ಕೆ ಕೊರತೆಯಿಲ್ಲ. ಶಾರದೆ, ಚಂದ್ರಮೌಳೇಶ್ವರನನ್ನು ಅನನ್ಯವಾಗಿ ಪ್ರಾರ್ಥಿಸಿ. ದಾರಿದ್ರ್ಯ ದುಃಖದಹನ ಸ್ತೋತ್ರವನ್ನು ಪ್ರಾತಃಕಾಲ ಪ್ರದೋಷ ಕಾಲದಲ್ಲಿ ಪಠಿಸಿ.

ಸಿಂಹ

ರಾಶ್ಯಾಧಿಪತಿ ಸೂರ್ಯ ತನ್ನ ಸ್ವಗ್ರಹಕ್ಕೆ ಬಂದು ತನ್ನ ಮನೆಯಲ್ಲಿ 2 ಪಕ್ಷಗಳ ಕಾಲ ವಿಜೃಂಭಿಸುತ್ತಾನೆ. ನಿಮಗೆ ಬೆಳಕನ್ನು ಹರಿಸುತ್ತಾನೆ. ವಿವೇಚನೆಯಿಂದ ಕೆಲಸ ಮಾಡಿ. ಸ್ವಕ್ಷೇತ್ರ ಶನಿ, ಕುಂಭದಲ್ಲಿ ಗುರುವು ನಿಮಗೆ ಒಳ್ಳೆಯದನ್ನು ಅನುಗ್ರಹಿಸುತ್ತಾರೆ. ಪಾರ್ವತಿ ಸಮೇತ ಸಾಂಬಸದಾಶಿವನನ್ನು ಪೂಜಿಸಿ.

ಕನ್ಯಾ

ರಾಶ್ಯಾಧಿಪತಿ ಬುಧನು ರಾಶಿಯಲ್ಲೇ ಇದ್ದು, ಮಿತ್ರನಾದ ಶನಿಯು ಪಂಚಮದಲ್ಲಿ, ಗುರುವು ಷಷ್ಟದಲ್ಲಿದ್ದೂ, ಶನಿ ಮನೆಯನ್ನೇ ಸೇರಿದ್ದಾನೆ. ಅಂಗಾರಕನು ರಾಶ್ಯಾಧಿಪತಿ ಜತೆ ಇರುವುದರಿಂದ ಕಂಡವರಿಂದ ದ್ರೋಹ, ದುಃಖ ಬರದಂತೆ ಕಾಪಾಡಿಕೊಳ್ಳಲು ಕಾಳಿಕಾಷ್ಟೋತ್ತರ ಪಾರಾಯಣ ಮಾಡಿ. ತಪ್ಪದೆ ಸತ್ಯನಾರಾಯಣ ವ್ರತಕಥೆ ಓದಿ ಶುಭಪಡೆದುಕೊಳ್ಳಿ.

ತುಲಾ

ತುಲಾಧಿಪತಿ ಶುಕ್ರನು ಧನಧಾನ್ಯ, ಐಶ್ವರ್ಯ, ಸಮೃದ್ಧಿ ಮಾಡುವವನು. ಆತ ನಿಮ್ಮ ಆತ್ಮದಲ್ಲಿ ನೆಲೆಸಿದ್ದಾನೆ. ಮಹಾಲಕ್ಷ್ಮಿಯು ನಿಮ್ಮ ಆತ್ಮಸಿಂಹಾಸನದಲ್ಲಿ ಕುಳಿತಿರುವಾಗ ಅವಳನ್ನು ಏನು ಕೇಳಬೇಕೆಂದು ವಿವೇಚನೆ ಉಪಯೋಗಿಸಿ. ಆತ್ಮಸ್ಥೈರ್ಯ, ಕೆಲಸದಲ್ಲಿ ಪ್ರಗತಿ ಕಂಡರೆ ನಿಮಗೆ ಧನಬಂದಂತೆ. ಈ ಶ್ರಾವಣದ ಇನ್ನೂ 3 ಸಂಪತ್ ಶುಕ್ರವಾರಗಳಂದು ಒಮ್ಮೆಯಾದರೂ ಲಕ್ಷ್ಮೀನರಸಿಂಹ ಸಹಸ್ರನಾಮ ಪಾರಾಯಣ ಮಾಡಿ.

ವೃಶ್ಚಿಕ

ಲಗ್ನದಲ್ಲಿ ಕೇತು, ದ್ವಾದಶದಲ್ಲಿ ಶುಕ್ರ, ಆದಾಯಕ್ಕಿಂತ ಖರ್ಚು ಜಾಸ್ತಿ.ಲಕ್ಷ್ಮೀ ವೇಂಕಟೇಶ್ವರನನ್ನು ಹಾಡಿ ಹೊಗಳಿದರೆ ನಿಮ್ಮ ಧನದ ಪೆಟ್ಟಿಗೆ ಬಾಗಿಲು ತೆರೆದು ಹಣ ತುಂಬಿಸಿಕೊಳ್ಳಬಹುದು. ಲಕ್ಷ್ಮೀ ವೆಂಕಟೇಶ್ವರ ಅಷ್ಟೋತ್ತರ ಪಾರಾಯಣ ಮಾಡಿ. ದುಡ್ಡನ್ನು ಕೂಡಿಡಬೇಕು. ದೇವರಿಗೆ ಮಾಡಿದ ಹರಕೆ ಸಾಧ್ಯವಾದಷ್ಟು ಬೇಗ ತೀರಿಸಬೇಕು. ನಿಮ್ಮ ಗುರುಗಳನ್ನು ಸಂದರ್ಶಿಸಿ.

ಧನು

ರಾಶ್ಯಾಧಿಪತಿಯಾದ ಗುರುವು ಶನಿ ಮನೆಯಲ್ಲಿದ್ದು, ಉಪಯೋಗವಾಗುವಂಥ ಕೆಲಸ ಮಾತ್ರ ಮಾಡಬೇಕು. ಅಗಸನು ಕತ್ತೆಯ ಮೇಲೆ ಬಟ್ಟೆಯನ್ನು ಹೊರಿಸಿಕೊಂಡು ಹೋಗುವಂತೆ ನಿಮ್ಮ ಜೀವನ ಆಗಬಾರದು. ನಿತ್ಯವೂ ಶಾಂತಚಿತ್ತರಾಗಿರಿ. ನುಡಿಯಲ್ಲಿ ಮಾಧುರ್ಯವಿದ್ದರೆ ಜೀವನ ಸೊಗಸು. ಗುರು ದತ್ತನನ್ನು, ಮಾನಸ ಮೈಲಾರ ಲಿಂಗೇಶ್ವರನನ್ನು ಆರಾಧಿಸಿ.

ಮಕರ

ಮನೆಯಲ್ಲಿ ನಿಂದಕರನ್ನು, ಶತ್ರುಗಳನ್ನು ಇಟ್ಟುಕೊಂಡು ಕಾಪಾಡಲಾಗುತ್ತದೆಯೇ? ನಿಮ್ಮ ಆಲಸ್ಯ ತೊರೆದು ರಾಶ್ಯಾಧಿಪತಿ ಶನಿ, ರಾಶಿಯಲ್ಲೇ ಇದ್ದು ಉತ್ತರಾಷಾಢ. ಶ್ರಾವಣ, ಧನಿಷ್ಠ ನಕ್ಷತ್ರದವರು ಶಿವಕವಚವನ್ನು ಪ್ರಾರ್ಥಿಸಲೇಬೇಕು. ಶನಿಯು ಕಷ್ಟವನ್ನು ಕೊಡುವವನಲ್ಲ. ಮನುಷ್ಯನಿಗೆ ಪಾಠ ಕಲಿಸಲೆಂದೇ ಬಂದ ಮಹಾ ಗುರು. ಅನನ್ಯ ಭಕ್ತಿಯಿಂದ ಆರಾಧಿಸಿ, ವಾಮನ ವ್ರತಕಥೆ ಓದಿ.

ಕುಂಭ

12ರ ಶನಿ, ಜನ್ಮ ಶನಿ ಬರುವುದೇ ಮುಂದಿನ ಅಭ್ಯುದಯಕ್ಕಾಗಿ, ಶನಿ ಸಂಚಾರ ಕಾಲದಲ್ಲಿ, ಅನನ್ಯವಾಗಿ ದೈವಭಕ್ತಿ ಮಾಡಿದಲ್ಲಿ ಕಷ್ಟ-ನಷ್ಟವನ್ನು ಪರಿಹರಿಸಿ ದುಪ್ಪಟ್ಟು ಭಾಗ್ಯ ಕೊಡುತ್ತಾನೆ. ಮಂಗಳವಾರ-ಶುಕ್ರವಾರದಂದು ತಪ್ಪದೆ ಗ-ಕಾರ ಗಣಪತಿ ಸಹಸ್ರನಾಮ ಮಾಡಿ. ಇಡಗುಂಜಿ ಗಣಪತಿಯನ್ನು ಸಾಧ್ಯವಾದರೆ ಸಂದರ್ಶಿಸಿ. ಇಲ್ಲವೇ ಮನೆಯಲ್ಲಿ ಆರಾಧಿಸಿ.

ಮೀನ

ರಾಶಿಯ ಒಡೆಯನು ಶನಿಯ ಮನೆಯಲ್ಲಿದ್ದು, ಏಕಾದಶ ಸ್ಥಾನದ ಫಲವನ್ನು ಕೊಡುತ್ತಾನೆ. ಧೈರ್ಯ, ಕೀರ್ತಿ ಲಾಭವನ್ನು ಕೊಡುವುದೇ ಏಕಾದಶ ಸ್ಥಾನದಲ್ಲಿ ಬರುವ ಗ್ರಹಗಳು, ಶುಭದ ಚಿಂತನೆ, ನಿರ್ಮಲ ಮನಸ್ಸು ನಿಮ್ಮದಾಗಲಿ. ಹನ್ನೆರಡನೆ ಮನೆ ಗುರುವಿಗೆ ಶಿವಸಹಸ್ರನಾಮ ಪಾರಾಯಣ ಮಾಡಿದಲ್ಲಿ ದುಃಖಕ್ಕೆ ದಾರಿಯೂ ಇಲ್ಲ. ಸುಖಕ್ಕೆ ಕೊರತೆಯೂ ಇಲ್ಲ.

Leave a Comment

Your email address will not be published. Required fields are marked *