Ad Widget .

ದೇಶಾದ್ಯಂತ ರಕ್ಷಾಬಂಧನ ಸಂಭ್ರಮ| ಗಣ್ಯರಿಂದ ಶುಭಾಶಯ

Ad Widget . Ad Widget .

ನವದೆಹಲಿ: ದೇಶದಾದ್ಯಂತ ಜನರು ಅಣ್ಣ-ತಂಗಿಯರ ಪವಿತ್ರ ಹಬ್ಬವಾದ ರಕ್ಷಾ ಬಂಧನದ ಸಂಭ್ರಮದಲ್ಲಿದ್ದಾರೆ. ಆಗಸ್ಟ್​ 22ರಂದು ಈ ಬಾರಿ ದೇಶದಲ್ಲಿ ರಾಖಿ ಹಬ್ಬ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

Ad Widget . Ad Widget .

ಈ ಕುರಿತು ಸಾಮಾಜಿಕ ಜಾಲತಾಮ ಟ್ವಿಟರ್ ಟ್ವೀಟ್ ಮಾಡಿರುವ ಪ್ರದಾನಿ ಮೋದಿಯವರು, ರಕ್ಷಾ ಬಂಧನದ ಪವಿತ್ರ ಹಬ್ಬದಂದು ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳು ಎಂದು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟ್ವೀೂಟ್ ಮಾಡಿ, ಜನತೆಗೆ ರಕ್ಷಾಬಂಧನದ ಪವಿತ್ರ ಹಬ್ಬದಂದು ಎಲ್ಲಾ ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಟ್ವೀಟ್ ಮಾಡಿ, ನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು. ಸಹೋದರ ಸಹೋದರಿಯರ ಬಾಂಧವ್ಯದ ಸಂಕೇತವಾಗಿರುವ, ಭ್ರಾತೃತ್ವದ ಸಂಭ್ರಮಾಚರಣೆಯಾಗಿರುವ ರಕ್ಷಾ ಬಂಧನ ಎಲ್ಲರ ಸುಖ ಸಂತೋಷಗಳನ್ನು ನೂರ್ಮಡಿಗೊಳಿಸಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *