Ad Widget .

ಕೆಜಿಎಫ್ ಬಿಡುಗಡೆಗೆ ದಿನಾಂಕ ಫಿಕ್ಸ್

Ad Widget . Ad Widget .

ಬೆಂಗಳೂರು: ಸ್ಯಾಂಡಲ್‍ವುಡ್ ಬಹುನೀರಿಕ್ಷಿತ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಬಿಡಿಗಡೆಯ ದಿನಾಂಕವನ್ನು ನಟ ಯಶ್ ಟ್ವೀಟ್ ಮಾಡುವ ಮೂಲಕವಾಗಿ ತಿಸಳಿಸಿದ್ದಾರೆ.

Ad Widget . Ad Widget .

ಟ್ವೀಟ್‍ನಲ್ಲಿ ಏನಿದೆ?
ಇಂದಿನ ಅನಿಶ್ಚಿತತೆಗಳು ನಮ್ಮ ಸಂಕಲ್ಪವನ್ನು ವಿಳಂಬಗೊಳಿಸುತ್ತವೆ. ಆದರೆ ನಾವು ಈ ಮೊದಲೇ ಭರವಸೆ ನೀಡಿದಂತೆ 2022ರ ಏಪ್ರಿಲ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಮಾಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ಕೆಜಿಎಫ್ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಸಹ ಸದ್ದು ಮಾಡಿದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಕೆಜಿಎಫ್ ಮೊದಲ ಭಾಗವನ್ನು ನೋಡಿದ ಅಭಿಮಾನಿಗಳು 2ನೇ ಭಾಗವನ್ನು ನೋಡಲು ಕಾತುರರಾಗಿದ್ದಾರೆ. ಇದೀಗ ಸಿನಿಮಾ ಬಿಡುಗಡೆಯ ದಿನಾಂಕವನ್ನು ತಿಳಿದ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಕೆಜಿಎಫ್ ಸಿನಿಮಾದ ನಿರ್ದೆಶಕ ಪ್ರಶಾಂತ್ ನೀಲ್ ಸಿನಿಮಾ ಕೂಡಾ ಈ ಕುರಿತಾಗಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಜೂನಿಯರ್ ಚಿರುಗೆ 10 ತಿಂಗಳು ತುಂಬಿರುವ ಸಂಭ್ರಮ- ಮನಸಾರೆ ನಕ್ಕ ಮೇಘನಾ ರಾಜ್

ಕೆಜಿಎಫ್-1 ಸಿನಿಮಾ 2018ರಲ್ಲಿ ಬಿಡುಗಡೆಯಾಗಿ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್‍ವುಡ್‍ನತ್ತ ತಿರುಗಿ ನೋಡುವಂತೆ ಮಾಡಿದೆ. ಅಪಾರ ಗಳಿಕೆ ಹಾಗೂ ಜನಪ್ರಿಯತೆಯನ್ನು ಈ ಸಿನಿಮಾ ಪಡೆಯಿತು. ಈ ಮೂಲಕ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮಿಂಚಿತ್ತು. ವಿದೇಶಗಳಲ್ಲಿ ಸಹ ಕೆಜಿಎಫ್ ಸಖತ್ ಹವಾ ಕ್ರಿಯೆಟ್ ಮಾಡಿತ್ತು.

Leave a Comment

Your email address will not be published. Required fields are marked *