ಇ-ಕಾಮರ್ಸ್ ಶಾಪಿಂಗ್ ಸೈಟ್ ಅಮೆಜಾನ್ ಆ್ಯಪ್ನಲ್ಲಿ ಪ್ರತಿದಿನ ರಸಪ್ರಶ್ನೆಯನ್ನು ಕೇಳಲಾಗುತ್ತದೆ. ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ರೆ ನಿಮಗೆ ಬಹುಮಾನ ನೀಡಲಾಗುತ್ತದೆ. ಇಲ್ಲಿ ಪ್ರತಿದಿನ ರಸ ಪ್ರಶ್ನೆಗಳಿರಲಿದ್ದು, ಅದರಂತೆ ಬಹುಮಾನ ಮೊತ್ತದಲ್ಲೂ ಬದಲಾವಣೆ ಇರುತ್ತದೆ. ಇಂದಿನ ಐದು ಪ್ರಶ್ನೆಗಳಿಗೆ 25 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ. ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಗ್ರಾಹಕರನ್ನು ಅಮೆಜಾನ್ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಿದೆ. ಅಲ್ಲದೆ ಬಹುಮಾನ ಮೊತ್ತವನ್ನು ಅಮೆಜಾನ್ ಪೇ ಬ್ಯಾಲೆನ್ಸ್ನಲ್ಲಿ ನೀಡಲಾಗುತ್ತದೆ.
ಈ ರಸಪ್ರಶ್ನೆ ಅಮೆಜಾನ್ ಆ್ಯಪ್ನಲ್ಲಿ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಆರಂಭವಾಗುತ್ತದೆ. ಇನ್ನು ರಾತ್ರಿ 12 ಗಂಟೆಯೊಳಗೆ ಉತ್ತರಿಸಬಹುದು. ಇಲ್ಲಿ ಐದು ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಲಾಗಿದ್ದು, ಪ್ರತಿಯೊಂದು ಪ್ರಶ್ನೆಗೆ ನಾಲ್ಕು ಉತ್ತರಗಳ ಆಯ್ಕೆಗಳನ್ನು ನೀಡಲಾಗಿರುತ್ತದೆ. ಇಂದಿನ ರಸಪ್ರಶ್ನೆಯಲ್ಲಿ ವಿಜೇತರ ಹೆಸರನ್ನು ಆಗಸ್ಟ್ 23 ರಂದು ಪ್ರಕಟಿಸಲಾಗುತ್ತದೆ.
ರಸಪ್ರಶ್ನೆಯನ್ನು ಹೇಗೆ ಆಡುವುದು?
ನಿಮ್ಮ ಫೋನ್‌ನಲ್ಲಿರುವ ಅಮೆಜಾನ್ ಆ್ಯಪ್ ಓಪನ್ ಮಾಡಿ ಸ್ಕ್ರಾಲ್ ಮಾಡಿದರೆ ಕೆಳ ಭಾಗದಲ್ಲಿ ಅಮೆಜಾನ್ ಕ್ವಿಜ್ ಟೈಮ್ ಎಂಬ ಆಯ್ಕೆ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಪ್ರಶ್ನೆಗಳು ಕಾಣ ಸಿಗುತ್ತದೆ. ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಬೇಕು. ಇಂದಿನ ಪ್ರಶ್ನೆಗಳ ಉತ್ತರವನ್ನು ಇಲ್ಲಿ ನೀಡಲಾಗಿದ್ದು, ಸರಿಯಾದ ಉತ್ತರ ನೀಡಿ ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಬಹುದು.