Ad Widget .

ಕಾಬೂಲ್​ನಲ್ಲಿ ಸಿಲುಕಿಕೊಂಡಿದ್ದಾರೆ ಕರ್ನಾಟಕದ ದಕ್ಷ ಅಧಿಕಾರಿ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬೆಂಗಳೂರು: ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದ ಐಪಿಎಸ್ ಅಧಿಕಾರಿ ಸವಿತಾ ಹಂಡೆ ಕಾಬೂಲ್​ನಲ್ಲಿದ್ದು, ಅವರು ಸುರಕ್ಷಿತವಾಗಿ ಭಾರತಕ್ಕೆ ಮರಳಲಿ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ಶುಭ ಹಾರೈಸಿದ್ದಾರೆ.

Ad Widget . Ad Widget . Ad Widget .

ಐಪಿಎಸ್ ಅಧಿಕಾರಿ ಸವಿತಾ ಹಂಡೆ ಹೊಳೆನರಸೀಪುರ, ಬೀದರ್​​ನಲ್ಲಿ ಎಎಸ್​ಪಿ ಆಗಿ‌, ಉಡುಪಿ ಮತ್ತು ಹಾಸನ ಜಿಲ್ಲೆಯಲ್ಲಿ ಎಸ್.ಪಿ ಆಗಿ , ಬಳಿಕ ಬೆಂಗಳೂರಿನಲ್ಲಿ ಅಡ್ಮಿನ್ ವಿಭಾಗದ ಡಿಸಿಪಿಯಾಗಿ ಸೇವೆ ಸಲ್ಲಿಸಲ್ಲಿಸಿದ್ದರು. ಇದಾದ ಬಳಿಕ 2000 ಇಸವಿಯಲ್ಲಿ ಮುಂಬಡ್ತಿ ಪಡೆದು ಕೇಂದ್ರದ ಸೇವೆಗೆ ನಿಯೋಜನೆಯಾಗಿದ್ದರು. ಬಳಿಕ ಯು.ಎನ್ ಭದ್ರತಾ ವಿಭಾಗದಲ್ಲಿ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸವಿತಾ ಹಂಡೆ ಸದ್ಯ ಕಾಬುಲ್​​ನಲ್ಲಿ ಯುಎನ್ ಸೆಕ್ಯೂರಿಟಿಯ ಹಿರಿಯ ಅಧಿಕಾರಿಯಾಗಿದ್ದಾರೆ.

ಮಹಾರಾಷ್ಟ್ರ ಮೂಲದ ಸವಿತಾ ಹಂಡೆ ಉಡುಪಿ‌ ಜಿಲ್ಲೆಯ ಸ್ಥಾಪನೆಗೆ ಹೋರಾಟ ನಡೆಸಿದ್ದರು. ಅಲ್ಲದೇ ರಾಮಜನ್ಮ ಭೂಮಿ ಹೋರಾಟದ ಸಂದರ್ಭದಲ್ಲೂ ದಕ್ಷವಾಗಿ ಕಾರ್ಯ ನಿರ್ವಹಿಸಿದ್ದರು. ಇತಂಹ ಧೀಮಂತ ಅಧಿಕಾರಿ ಅಫ್ಘಾನಿಸ್ತಾನದಿಂದ ಕ್ಷೇಮವಾಗಿ ತಾಯ್ನಾಡಿಗೆ ವಾಪಸ್​ ಆಗಲಿ ಎಂದು ರೈಲ್ವೇ ಎಡಿಜಿಪಿ ಭಾಸ್ಕರ್ ರಾವ್ ಹಾಗೂ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಹಾರೈಸಿದ್ದಾರೆ.

Leave a Comment

Your email address will not be published. Required fields are marked *