Ad Widget .

‘ ಲಾ’ ಮರೆತು‌ ಮೈಮುಟ್ಟುತ್ತಿದ್ದ ಲಾಯರ್| ಕಂಬಿ ರುಚಿ ತೋರಿಸಿದ ಯುವತಿ|

ಪುತ್ತೂರು: ತನ್ನ ಕಚೇರಿಯಲ್ಲಿ ಕೆಲಸಕ್ಕಿದ್ದ ಯುವತಿಯೊಬ್ಬಳನ್ನು ಕೆಲಸದ ನೆಪದಲ್ಲಿ ಆಗಾಗ್ಗೆ ಮುಟ್ಟುತ್ತಿದ್ದ ಲಾಯರ್ ಒಬ್ಬಾತನಿಗೆ ಕಾನೂನು ಪಾಠ ಕಲಿಸಿದ ಘಟನೆ ‌ಬಂಟ್ವಾಳದ ವಿಟ್ಲದಲ್ಲಿ ನಡೆದಿದೆ.

Ad Widget . Ad Widget .

ವಕೀಲ ಉಮ್ಮರ್ ಎಂಬಾತ ನಗರದ ವಿ.ಹೆಚ್ ಕಾಂಪ್ಲೆಕ್ಸ್ ನಲ್ಲಿ ಕಚೇರಿ ನಡೆಸುತ್ತಿದ್ದು, ಕೆಲಸಕ್ಕಾಗಿ ಹಿಂದೂ ಯುವತಿಯೋರ್ವಳನ್ನು ಕೆಲಸಕ್ಕೆ ಇರಿಸಿದ್ದ. ಕಳೆದ ಸೋಮವಾರ ಕಚೇರಿಯಲ್ಲಿ ಯಾರೂ ಇಲ್ಲದ ವೇಳೆ ಈತ ಆಕೆಯೊಂದಿಗೆ ಕಾಮ ಪ್ರಚೋದನೆಗೆ ತೊಡಗಿದ್ದು, ಆಕೆಯನ್ನು ಮೈ ಮುಟ್ಟಿ, ತಬ್ಬಿಕೊಳ್ಳಲು ಯತ್ನಿಸಿದ್ದನೆಂದೂ, ಇದರಿಂದ ಭಯಗೊಂಡ ಆಕೆ ಆತನನ್ನು ದೂರ ತಳ್ಳಿರುವುದಾಗಿಯೂ ಹೇಳಲಾಗಿದೆ.

Ad Widget . Ad Widget .

ಯುವತಿ ಭಯದಿಂದಈ ವಿಚಾರವನ್ನು ಮನೆಯಲ್ಲಿ ತಿಳಿಸುವುದಾಗಿ ಯುವತಿ ಹೇಳಿದಾಗ ಆರೋಪಿಯು ನೀನು ಮನೆಯಲ್ಲಿ ಹೇಳಬೇಡ, ಹೇಳಿದರೆ ನಿನ್ನ ಮರ್ಯಾದೆ ಹೋಗುತ್ತದೆ ಎಂದು ಹೆದರಿಸಿರುವುದಾಗಿ ಆಕೆ ತಾನು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಅ.ಕ್ರ 29/2021 ಕಲಂ 354 ( ಎ ), 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಆದರೆ ಮುಂಜಾನೆ ಬಂಧನವಾಗಿದ್ದು, ಸಂಜೆ ವೇಳೆಗೆ ಆರೋಪಿಗೆ ಜಾಮೀನು ಕೂಡಾ ಮಂಜೂರಾಗಿದೆ.

Leave a Comment

Your email address will not be published. Required fields are marked *