ಮಂಗಳೂರು: ಹಳಿ ದಾಟುವಾಗ ರೈಲಿನಡಿಗೆ ಸಿಲುಕಿ ಮಹಿಳೆಯರಿಬ್ಬರು ಸಾವನಪ್ಪಿದ ಘಟನೆ ನಗರದ ಮಹಾಕಾಳಿ ಪಡ್ಪು ಎಂಬಲ್ಲಿ ಆ. 21 ರ ಶನಿವಾರ ಬೆಳಿಗ್ಗೆ ಸಂಭವಿಸಿದ.
ಮೃತರನ್ನು ಸ್ಥಳೀಯ ನಿವಾಸಿಗಳಾದ ವಸಂತಿ (50) ಮತ್ತು ಪ್ರೇಮಾ (48) ಎಂದು ಗುರುತಿಸಲಾಗಿದೆ. ಬೀಡಿ ಕಾರ್ಮಿಕರಾಗಿದ್ದ ಇವರಿಬ್ಬರು ದಿನಿತ್ಯ ಕುಡುಪ್ಪಾಡಿ ದೋಟ ಎಂಬಲ್ಲಿಂದ ಮಹಾಕಾಳಿಪಡ್ಪುವಿನಲ್ಲಿರುವ ಬ್ರ್ಯಾಂಚ್ ಗೆ ರೈಲು ಹಳಿಯನ್ನು ದಾಟಿ ಬೀಡಿ ಕೊಂಡೊಯ್ಯುತ್ತಿದ್ದರು.
ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಪಾರ್ಥಿವ ಶರೀರವನ್ನು ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.