Ad Widget .

ಬೆಲೆ ಇಳಿಕೆ ನಿರೀಕ್ಷೆಯಲ್ಲಿ ಅಡುಗೆ ಎಣ್ಣೆ| ಆಮದು ಸುಂಕ ಕಡಿತಕ್ಕೆ ಕೇಂದ್ರ ನಿರ್ಧಾರ

Ad Widget . Ad Widget .

ನವದೆಹಲಿ : ಸಾರ್ವಜನಿಕರಿಗೆ ದೊಡ್ಡ ಪರಿಹಾರ ಸಿಗಲಿದ್ದು, ಹಬ್ಬಗಳಿಗೆ ಮುನ್ನ ಖಾದ್ಯ ತೈಲವನ್ನು ಅಗ್ಗವಾಗಿಸಲು ಕೇಂದ್ರ ಸರ್ಕಾರವು ದೊಡ್ಡ ಹೆಜ್ಜೆಯನ್ನ ಇಟ್ಟಿದೆ. ತೆರಿಗೆ ಕಡಿತಗೊಳಿಸುವುದಾಗಿ ಸರ್ಕಾರ ಘೋಷಿಸಿದೆ.

Ad Widget . Ad Widget .

ಕಳೆದ ಹಲವು ತಿಂಗಳುಗಳಿಂದ ಖಾದ್ಯ ತೈಲದ ಬೆಲೆಗಳು ವಿಪಾರೀತ ಏರಿಕೆ ಆಗ್ತಿದ್ದು, ಕೇಂದ್ರ ಸರ್ಕಾರವು ಬೆಲೆಗಳನ್ನ ನಿಯಂತ್ರಿಸುವ ಮೂಲಕ ಸಾಮಾನ್ಯ ಜನರಿಗೆ ಪರಿಹಾರ ನೀಡುವ ದೊಡ್ಡ ನಿರ್ಧಾರಕ್ಕೆ ಬಂದಿದೆ.

ಅದರಂತೆ, ಸರ್ಕಾರ ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಆಮದು ಸುಂಕವನ್ನು ಕಡಿಮೆ ಮಾಡಿದೆ. ಇದನ್ನು ಶೇ.15 ರಿಂದ 7.5 ಕ್ಕೆ ಇಳಿಸಲಾಗಿದೆ. ಇದರಿಂದ ವಿದೇಶದಿಂದ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುವುದು ಅಗ್ಗವಾಗುತ್ತದೆ. ಪ್ರಸ್ತುತ, ಒಂದು ವರ್ಷದಲ್ಲಿ 60,000 ರಿಂದ 70,000 ಕೋಟಿಗಳನ್ನು ಖರ್ಚು ಮಾಡುವ ಮೂಲಕ 15 ದಶಲಕ್ಷ ಟನ್ ಖಾದ್ಯ ತೈಲವನ್ನ ವಿದೇಶದಿಂದ ಖರೀದಿಸಬೇಕಾಗಿದೆ. ಯಾಕೆಂದರೆ ದೇಶೀಯ ಉತ್ಪಾದನೆಯು ಸುಮಾರು 70-80 ಲಕ್ಷ ಟನ್‌ಗಳು. ದೇಶವು ತನ್ನ ಜನಸಂಖ್ಯೆಗೆ ವಾರ್ಷಿಕವಾಗಿ ಸುಮಾರು 25 ಮಿಲಿಯನ್ ಟನ್ ಖಾದ್ಯ ತೈಲವನ್ನು ಆಮದು‌ ಮಾಡಿಕೊಳ್ಳುತ್ತದೆ.
ಕೇಂದ್ರ ಸರ್ಕಾರವು ಇಂದು ರಾಜ್ಯಗಳಿಗೆ ತಿಳಿಸಿರುವಂತೆ, ಸೋಯಾ ಮತ್ತು ಸೂರ್ಯಕಾಂತಿ ಮೇಲಿನ ಆಮದು ಸುಂಕವನ್ನ ಶೇಕಡಾ 7.5 ರಷ್ಟು ಕಡಿತಗೊಳಿಸಿದೆ. ಆದ್ರೆ, ಸರ್ಕಾರದ ಈ ಕಡಿತ 30 ಸೆಪ್ಟೆಂಬರ್ʼವರೆಗೆ ಮಾತ್ರ ಅನ್ವಯವಾಗಲಿದೆ.

Leave a Comment

Your email address will not be published. Required fields are marked *