Ad Widget .

ತಾಲಿಬಾನಿಗಳ ಕರಿನೆರಳು| ಆತಂಕದಲ್ಲಿದ್ದಾರೆ ಮಂಗಳೂರು ವಿ.ವಿಯ ಅಪ್ಘಾನ್ ವಿದ್ಯಾರ್ಥಿಗಳು|

Ad Widget . Ad Widget .

ಮಂಗಳೂರು : ದೇಶವು ತಾಲಿಬಾನ್‌ ಉಗ್ರರ ಕೈವಶವಾಗುತ್ತಿದ್ದಂತೆ ಇತ್ತ ಮಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿರುವ ಅಫ್ಘಾನಿ ಸ್ಥಾನದ ವಿದ್ಯಾರ್ಥಿಗಳು ಮುಂದೇನು ಎಂಬ ಆತಂಕದಲ್ಲಿದ್ದಾರೆ. 2-3 ವರ್ಷದ ಹಿಂದೆ ಮಂಗಳೂರಿಗೆ ಶಿಕ್ಷಣಕ್ಕಾಗಿ ಬಂದಿದ್ದ ಈ ವಿಧ್ಯಾರ್ಥಿಗಳು ಪದವಿಯಲ್ಲಿ 18, ಸ್ನಾತಕೋತ್ತರ ಪದವಿಯಲ್ಲಿ 13, ಪಿಎಚ್‌ಡಿಯಲ್ಲಿ 22 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಹಾಸ್ಟೆಲ್‌ಗ‌ಳಲ್ಲಿದ್ದಾರೆ. ತಮ್ಮ ದೇಶದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಮಾಧ್ಯಮಗಳ ಮೂಲಕ ಮೊಬೈಲ್‌ ಕರೆ ಮಾಡಿ ವಿಚಾರಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ. ಕೆಲವು ವಿದ್ಯಾರ್ಥಿಗಳು ದೇಶದ ಪರಿಸ್ಥಿತಿ ಹಾಗೂ ಮನೆ ಮಂದಿಯ ಸಮಸ್ಯೆ-ಸವಾಲುಗಳನ್ನು ಕೇಳಿ ಕಣ್ಣೀರಿಡುತ್ತಿದ್ದಾರೆ. ಪ್ರಾಧ್ಯಾಪಕರು, ಸಹಪಾಠಿಗಳ ಜತೆಗೆ ನೋವು ತೋಡಿಕೊಳ್ಳುತ್ತಿದ್ದಾರೆ.

Ad Widget . Ad Widget .

ಇದರ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕುಲಪತಿ ಪ್ರೊ. ಪಿ.ಎಸ್‌. ಯಡಪಡಿತ್ತಾಯ ರವರು , ವಿಶ್ವವಿದ್ಯಾನಿಲಯಲ್ಲಿ 35 ದೇಶಗಳ 147 ವಿದ್ಯಾರ್ಥಿಗಳು ಭಾರತ ಸರಕಾರದ ಸ್ಕಾಲರ್‌ಶಿಪ್‌ ಅನುಕೂಲದಿಂದ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಅವರ ಶಿಕ್ಷಣಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಸದ್ಯ ಅಫ್ಘಾನಿಸ್ಥಾನದಲ್ಲಿ ಸಮಸ್ಯೆ ಉಲ್ಬಣವಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ವಿದ್ಯಾರ್ಥಿಗಳು ಕೊಂಚ ಆತಂಕದಲ್ಲಿದ್ದಾರೆ. ಅವರಿಗೆ ಯಾವುದೇ ಸಮಸ್ಯೆ ಆಗದಂತೆ ವಿಶ್ವವಿದ್ಯಾನಿಲಯವು ಸರ್ವ ವ್ಯವಸ್ಥೆ ಮಾಡಲಿದೆ ಎಂದು ತಿಳಿಸಿದರು.

Leave a Comment

Your email address will not be published. Required fields are marked *