ರಾತ್ರಿ ಎಣ್ಣೆ ಪಾರ್ಟಿ ಕೊಲೆಯಲ್ಲಿ ಅಂತ್ಯ

Ad Widget ... ..

ಬೆಂಗಳೂರು: ಸ್ನೇಹಿತರಿಬ್ಬರು ರಾತ್ರಿ ಫುಲ್ ಎಣ್ಣೆ (ಮದ್ಯಪಾನ) ಪಾರ್ಟಿ ಮಾಡುತ್ತಿದ್ದ ವೇಳೇ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಡಿಜೆಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Ad Widget

ನಿತೇಶ್ ಕೊಲೆಯಾದವನು. ಆತನ ಸ್ನೇಹಿತ ಪ್ರಶಾಂತ್ ಕೊಲೆ ಮಾಡಿದ ಆರೋಪಿ.
ರಾತ್ರಿ ಇಬ್ಬರೂ ಒಟ್ಟಿಗೆ ಸೇರಿ ಪಾರ್ಟಿ ಮಾಡಿದ್ದು, ಪಾರ್ಟಿ ಬಳಿಕ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಈ ವೆಳೆ ನಿತೇಶ್ ಸ್ನೇಹಿತ ಪ್ರಶಾಂತ್ ಗೆ ಕಾಲಿನಿಂದ ಒದ್ದಿದ್ದ. ಕಾಲಿನಿಂದ ಒದ್ದ ಬಳಿಕ ಇಬ್ಬರು ಒಟ್ಟಿಗೆ ಮಲಗಿದ್ದರು. ಮಲಗಿ ಸ್ವಲ್ಪ ಸಮಯದ ನಂತರ ಕೋಪಗೊಂಡು ಮತ್ತೆ ಎಚ್ಚರಗೊಂಡಿದ್ದ ಪ್ರಶಾಂತ್, ನನಗೇ ಒದೆಯುತ್ತೀಯಾ ಎಂದು ಹಾಲೊ ಬ್ರಕ್ಸ್ ಎತ್ತಿ ನಿತೇಶ್ ತಲೆಮೇಲೆ ಹಾಕಿದ್ದಾನೆ. ಈ ಪರಿಣಾಮ ನಿತೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಡಿಜೆಹಳ್ಳಿ ಪೆÇಲೀಸರು ಭೇಟಿ ನೀಡಿದ್ದು, ಪರಾರಿಯಾಗುತ್ತಿದ್ದ ಪ್ರಶಾಂತ್ ನನ್ನು ಡಿಜೆಹಳ್ಳಿ ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಡಿಜೆ ಹಳ್ಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೆÇಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *