Ad Widget .

ನೀನು ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು -ಮಹಿಳಾ ಪತ್ರಕರ್ತೆಗೆ ಉಲ್ಟಾ ಹೊಡೆದ ತಾಲಿಬಾನಿಗಳು

Ad Widget . Ad Widget .

Ad Widget . Ad Widget .

ಕಾಬೂಲ್: ನೀನು ಮಹಿಳೆ ಹಾಗಾಗಿ ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು ಎಂದು ಹೇಳಿ ಮಹಿಳಾ ಪತ್ರಕರ್ತೆಗೆ ಅಫ್ಘಾನಿಸ್ತಾನದಲ್ಲಿ ಆಡಳಿತದಲ್ಲಿರುವ ತಾಲಿಬಾನಿಗಳು ಉಲ್ಟಾ ಹೊಡೆದಿದ್ದಾರೆ.

ನಾವು ಬದಲಾಗಿದ್ದೇವೆ, ಮಹಿಳೆಯರು ಉದ್ಯೋಗಕ್ಕೆ ತೆರಳಲು ಅನುಮತಿ ನೀಡುತ್ತೇವೆ ಎಂದಿದ್ದ ತಾಲಿಬಾನಿಗಳ ನಿಜ ರೂಪ ಇದೀಗ ನಿಧಾನವಾಗಿ ಬಹಿರಂಗಗೊಳ್ಳುತ್ತಿದೆ. ಅಫ್ಘಾನಿಸ್ತಾನದಲ್ಲಿ ಪ್ರಭುತ್ವ ಸ್ಥಾಪಿಸಿದ ಬಳಿಕ ಸರ್ಕಾರಿ ಸ್ವಾಮ್ಯದ ವಾಹಿನಿಗಳಲ್ಲಿ ಮಹಿಳಾ ಪತ್ರಕರ್ತರು ಕೆಲಸಕ್ಕೆ ಬರದಂತೆ ತಾಲಿಬಾನ್ ಸೂಚಿಸಿದೆ ಎಂದು ಖಖಿಂ RTA Pashto ನಿರೂಪಕಿ ಶಬ್ನಮ್ ದವ್ರನ್ ಹೇಳಿದ್ದಾರೆ. ಮಾಧ್ಯಮಕ್ಕೆ ಸಂದರ್ಶನ ನೀಡಿದ ಅವರು ಈಗ ಅಲ್ಲಿ ತನಗಾದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಶಬ್ನಮ್ ದವ್ರನ್ ಹೇಳಿದ್ದೇನು?
ತಾಲಿಬಾನ್ ಕಾಬೂಲ್ ನಗರವನ್ನು ವಶಪಡಿಸಿಕೊಂಡ ಮರುದಿನ ಬೆಳಿಗ್ಗೆ ನನ್ನ ಕಚೇರಿಗೆ ಹೋದೆ. ಅಲ್ಲಿ ನನ್ನನ್ನು ಕೆಲಸಕ್ಕೆ ಸೇರಿಸುವುದಿಲ್ಲ ಎಂದು ಹೇಳಿದರು. ಯಾಕೆ ಈ ನಿರ್ಧಾರ? ಕಾರಣ ಏನು ಎಂದು ಪ್ರಶ್ನಿಸಿದ್ದಕ್ಕೆ, ಅವರು ಈಗ ನಿಯಮಗಳು ಬದಲಾಗಿದೆ ಮತ್ತು ಮಹಿಳೆಯರಿಗೆ ಇನ್ನು ಮುಂದೆ ಆರ್ ಟಿಎಯಲ್ಲಿ ಕೆಲಸ ಮಾಡಲು ಅವಕಾಶವಿಲ್ಲ ಎಂದು ಉತ್ತರಿಸಿದರು.
ಮಹಿಳೆಯರಿಗೆ ಅಧ್ಯಯನ ಮಾಡಲು ಮತ್ತು ಕೆಲಸಕ್ಕೆ ಹೋಗಲು ಅನುಮತಿ ನೀಡಲಾಗುವುದು ಎಂದು ತಾಲಿಬಾನ್ ಮೊದಲೇ ಘೋಷಿಸಿದಾಗ ನಾನು ಬಹಳ ಉತ್ಸುಕನಾಗಿದ್ದೆ. ಆದರೆ ನನ್ನ ಕಚೇರಿಯಲ್ಲಿ ನನಗೆ ವಾಸ್ತವ ಅನುಭವ ಆಗಿದೆ. ಅಲ್ಲಿ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ ಎಂದು ನನಗೆ ಹೇಳಲಾಯಿತು. ನಾನು ಅವರಿಗೆ ನನ್ನ ಗುರುತಿನ ಚೀಟಿಯನ್ನು ತೋರಿಸಿದ್ದರೂ, ಅವರು ನನ್ನನ್ನು ಮನೆಗೆ ಹೋಗುವಂತೆ ಸೂಚಿಸಿದರು.
ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಕೆಲಸಕ್ಕೆ ಬರಬೇಡಿ ಎಂದು ಕೇಳಿದ್ದಾರೆ. ಖಾಸಗಿ ವಾಹಿನಿಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಈ ರೀತಿಯ ಆದೇಶವನ್ನು ನೀಡಿಲ್ಲ. ನನ್ನ ಪುರುಷ ಸಹೋದ್ಯೋಗಿಗೆ ಕೆಲಸಕ್ಕೆ ಹೋಗಲು ಅನುಮತಿ ನೀಡಲಾಯಿತು. ಆದರೆ ನನಗೆ ಆಗಲಿಲ್ಲ. ಮಹಿಳೆಯರಿಗೆ ಇನ್ನು ಮುಂದೆ ಆರ್ ಟಿಎಯಲ್ಲಿ ಕೆಲಸ ಮಾಡಲು ಅವಕಾಶವಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು.

ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಏನಾಗಬಹುದು ಎಂಬ ಕಲ್ಪನೆ ನಮ್ಮೆಲ್ಲರಿಗೂ ಇತ್ತು. ಆದರೆ ಆ ಸಂದರ್ಶನದ ನಂತರ ನಿರ್ಧಾರಗಳು ಬದಲಾಗಬಹುದು. ಸದ್ಯಕ್ಕೆ, ನನಗೆ ಏನೂ ಅರ್ಥವಾಗುತ್ತಿಲ್ಲ. ಭವಿಷ್ಯದಲ್ಲಿ ಏನಾಗಲಿದೆ ಎಂದು ನನಗೆ ತಿಳಿದಿಲ್ಲ. ನಾನು ಇನ್ನು ಮುಂದೆ ಇಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಸದ್ಯಕ್ಕೆ ಅಫ್ಘಾನಿಸ್ತಾನದಲ್ಲಿ ಬದುಕುವುದು ಕಷ್ಟ. ನನಗೆ ಯಾರಾದರೂ ಇಲ್ಲಿ ಸಹಕಾರ ನೀಡಿದರೆ ಖಂಡಿತವಾಗಿಯೂ ನಾನು ಈ ದೇಶವನ್ನೇ ತೊರೆಯುತ್ತೇನೆ.

Leave a Comment

Your email address will not be published. Required fields are marked *