Ad Widget .

ಮತ್ತೆ ಎಡವಟ್ಟು ಮಾಡಿಕೊಂಡ ಡಿಕೆಶಿ – ಪೇಸ್ ಬುಕ್‌ನಲ್ಲಿ‌ ತಪ್ಪಾಗಿ ಗೀಚಿದ ‘ಬಂಡೆ’

Ad Widget . Ad Widget .

ಬೆಂಗಳೂರು: ಸ್ವಾತಂತ್ರ್ಯದ ಮಹತ್ವದ ಬಗ್ಗೆ ಹೇಳಲು ಹೋಗಿ ಕೆಪಿಸಿಸಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಎಡವಟ್ಟು ಮಾಡಿಕೊಂಡಿದ್ದಾರೆ. ಫೇಸ್​ಬುಕ್​ ಪೇಜ್​ನಲ್ಲಿ ಪೋಸ್ಟ್​ ಹಾಕುವಾಗ ಎಡವಟ್ಟು ಮಾಡಿಕೊಂಡಿದ್ದಾರೆ.

Ad Widget . Ad Widget .

1866 ರಲ್ಲಿ ಮಹಾತ್ಮ ಗಾಂಧಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ರು ಎಂದು ಬರೆದುಕೊಂಡಿದ್ದಾರೆ. 1915, 1920, 1927, 1934, 1936 ರಲ್ಲಿ ಗಾಂಧೀಜಿ ಬೆಂಗಳೂರಿಗೆ ಭೇಟಿ ನೀಡಿದ್ದರು ಎಂದು ತಪ್ಪು ಮಾಹಿತಿ ಕೊಡಲಾಗಿದೆ.

ಗಾಂಧೀಜಿಯವರು ಹುಟ್ಟಿದ್ದೇ 1869ರ ಅಕ್ಟೋಬರ್​ 2ರಂದು. ಹೀಗಿರುವಾಗ, 1866 ರ ಹೋರಾಟದಲ್ಲಿ ಗಾಂಧಿ ಪಾಲ್ಗೊಳ್ಳಲು ಹೇಗೆ ಸಾಧ್ಯ? ಎಲ್ಲಿಯ 1866? ಎಲ್ಲಿಯ 1936 ಎನ್ನುವ ಪ್ರಶ್ನೆ ಉದ್ಭವ ಆಗಿದೆ. ಹುಟ್ಟುವ ಮೊದಲೇ ಹೋರಾಟದಲ್ಲಿ ಭಾಗಿ ಎನ್ನುವ ಮಾಹಿತಿ ನೀಡಿದಂತಾಗಿದೆ. ಫೇಸ್​ಬುಕ್​​ ಪೋಸ್ಟ್​ನಲ್ಲಿ ಡಿಕೆಶಿ ಎಡವಟ್ಟು ಮಾಡಿಕೊಂಡಿದ್ದಾರೆ.

Leave a Comment

Your email address will not be published. Required fields are marked *