Ad Widget .

ಬೈಕ್ ವಿಚಾರದಲ್ಲಿ ಸ್ನೇಹಿತರೊಂದಿಗೆ ಗಲಾಟೆ | ವಿದ್ಯಾರ್ಥಿ ನೇಣಿಗೆ ಶರಣು |ಮನನೊಂದ ತಾಯಿ ವಾಹನದಡಿಗೆ ಹಾರಿ ಆತ್ಮಹತ್ಯೆ…!?

ಬೆಂಗಳೂರು: ಬೈಕ್ ವಿಚಾರದಲ್ಲಿ ಸ್ನೇಹಿತರೊಂದಿಗೆ ಜಗಳವಾಡಿದ ಯುವಕ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮನನೊಂದ ಆತನ ತಾಯಿ ಕೂಡ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Ad Widget . Ad Widget .

ವಿಜಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ, ಬಿಕಾಂ ವಿದ್ಯಾರ್ಥಿ ಮೋಹನ್ (20) ಆತ್ಮಹತ್ಯೆ ಮಾಡಿಕೊಂಡಾತ. ಆತನ ತಾಯಿ ಲೀಲಾವತಿ (45) ರಸ್ತೆ ಅಪಘಾತಕ್ಕೆ ಬಲಿಯಾದವರು. ಮೋಹನ್ ಮತ್ತು ಆತನ ಸ್ನೇಹಿತರಿಗೆ ಬೈಕ್ ವಿಚಾರದಲ್ಲಿ ಪರಸ್ಪರ ಜಗಳವಾಗುತ್ತಿತ್ತು. ಕೆಲ ದಿನಗಳಿಂದ ಸ್ನೇಹಿತರು ಮೋಹನ್ ಮನೆಯ ಮುಂದೆ ಬಂದು ಜಗಳವಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಆತನ ತಂದೆ ಪೊಲೀಸ್ ದೂರು ದಾಖಲಿಸಿದ್ದರು.

Ad Widget . Ad Widget .

ಸ್ನೇಹಿತರ ಕಾಟ ತಡೆಯಲಾರದೆ ಮೋಹನ್ ತನ್ನ ಕೋಣೆಯೊಳಗೆ ನೇಣು ಬಿದ್ದುಕೊಂಡಿದ್ದ. ವಿಷಯ ತಿಳಿದ ಪೋಷಕರು ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಆತ ಮೃತಪಟ್ಟಿದ್ದ. ಮಗನ ಸಾವಿನಿಂದ ಮನನೊಂದ ಆತನ ತಾಯಿ ಆಸ್ಪತ್ರೆಯಿಂದ ಹೊರಬರುತ್ತಲೇ ವಾಹನವೊಂದಕ್ಕೆ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. ಆದರೆ ಸ್ಥಳೀಯರು ಮಹಿಳೆ ಉದ್ದೇಶಪೂರ್ವಕವಾಗಿಯೇ ವಾಹನದಡಿಗೆ ಹಾರಿದ್ದಾರೆ ಎಂದು ಹೇಳಿದ್ದಾರೆ. ಇದರಿಂದ ಮಗನ ಸಾವಿನಿಂದ ಮನನೊಂದ ತಾಯಿ ಆತ್ಮಹತ್ಯೆ ಮಾಡಿಕೊಂಡ ಸಂಶಯ ವ್ಯಕ್ತವಾಗಿದೆ. ವಿಜಯನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ.

Leave a Comment

Your email address will not be published. Required fields are marked *