Ad Widget .

ಬೆಳ್ತಂಗಡಿ| ತಾಯಿಯನ್ನೇ ಅತ್ಯಾಚಾರ‌ ಮಾಡಿದ್ದಾನೆ ಈತ…!, ಯುವಕನ ವಿರುದ್ಧ ಅಶ್ಲೀಲ ಸಂದೇಶ ರವಾನೆ, ದೂರು ದಾಖಲು

Ad Widget . Ad Widget .

ಬೆಳ್ತಂಗಡಿ: ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಲಾಯಿಲದ ಯುವಕನ ಬಗ್ಗೆ ಮಾನಹಾನಿಕರವಾಗಿ ಅಪಪ್ರಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

Ad Widget . Ad Widget .

ಲಾಯಿಲ ಸಮೃದ್ಧಿ ನಿವಾಸದ ಸುಶಾನ್ ಚಂದ್ರ ಎಂಬ ಯುವಕನ ಬಗ್ಗೆ ಇತ್ತೀಚೆಗಷ್ಟೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶವನ್ನು ಕಿಡಿಗೇಡಿಗಳು ರವಾನಿಸಿದ್ದರು.
`ಯುವಕನೋರ್ವ ತನ್ನ ತಾಯಿಯನ್ನು ನಿರಂತರವಾಗಿ ಅತ್ಯಾಚಾರ ಮಾಡಿ ಗರ್ಭ ಧರಿಸುವಂತೆ ಮಾಡಿ ಪರಾರಿಯಾಗಿದ್ದಾನೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ. ಈ ವಿಕೃತ ಕಾಮಿಯ ಹೆಸರು ಸುಶನ್ ಚಂದ್ರ 56 ಅಡಿ ಎತ್ತರವಿದ್ದು, ಗುಂಗುರು ಕೂದಲು ಹೊಂದಿರುತ್ತಾನೆ. ಎಲ್ಲಿಯಾದರೂ ಕಂಡರೆ ದಯಮಾಡಿ ಕೆಳಗಿನ ನಂಬರಿಗೆ ಕರೆ ಮಾಡಬೇಕಾಗಿ ವಿನಂತಿ ಎಂದು ದೂರವಾಣಿ ಸಂಖ್ಯೆ ನೀಡುವುದರೊಂದಿಗೆ ಅಪಪ್ರಚಾರ ಮಾಡಲಾಗಿದೆ ಎಂದು ಯುವಕ ದೂರಿನಲ್ಲಿ ತಿಳಿಸಿದ್ದಾನೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *