Ad Widget .

ರಥಯಾತ್ರೆಯಲ್ಲಿ ಸಾವರ್ಕರ್ ಫೋಟೋ ಹಾಕಲು ಅನುಮತಿ ನೀಡಿದ ಪಿಡಿಒರನ್ನು ಬಂಧಿಸಿ’- ಎಸ್ ಡಿಪಿಐ ಮುಖಂಡ ಶಾಫಿ ಬೆಳ್ಳಾರೆ

Ad Widget . Ad Widget .

ಪುತ್ತೂರು: ಕಬಕ ಸ್ವಾತಂತ್ರ್ಯ ರಥ ತಡೆ ಪ್ರಕರಣದ ಬಳಿಕ ನಡೆಯತ್ತಿರುವ ಪ್ರತಿಭಟನಾ ಪರ್ವ ಇಂದೂ ಮುಂದುವರೆದಿದ್ದು, ನಿನ್ನೆ ಹಿಂದೂ ಸಂಘಟನೆಗಳು ತಮ್ಮ ಶಕ್ತಿ ಪ್ರದರ್ಶಿಸಿದರೆ ಇಂದು ಎಸ್ ಡಿಪಿಐ ಪಕ್ಷದಿಂದ ಪ್ರತಿಭಟನೆ ನಡೆದಿದ್ದು, ಸ್ವಾತಂತ್ರ್ಯ ರಥದಲ್ಲಿ ವೀರ ಸಾವರ್ಕರ್ ಚಿತ್ರ ಹಾಕಲು ಆನುಮತಿ ನೀಡಿದ ಗ್ರಾಮಪಂಚಾಯತ್ ಪಿಡಿಒ ವಿರುದ್ಧ ಕೇಸು ದಾಖಲಿಸುವಂತೆ ಒತ್ತಾಯಿಸಿದ್ದಾರೆ.

Ad Widget . Ad Widget .

ಪುತ್ತೂರಿನ ದರ್ಬೆ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಎಸ್ ಡಿಪಿಐ ಕಾರ್ಯಕರ್ತರು ಸಾವರ್ಕರ್ ಒರ್ವ ಹೇಡಿ, ಬ್ರಿಟಿಷರಲ್ಲಿ ಕ್ಷಮೆ ಕೋರಿದ ವ್ಯಕ್ತಿ, ಅಲ್ಲದೆ ತನ್ನ ಪುಸ್ತಕದಲ್ಲಿ ತಾನೇ ಸ್ವಾತಂತ್ರ್ಯ ಹೋರಾಟಗಾರನೆಂದು ಬಿಂಬಿಸಿದ ವ್ಯಕ್ತಿ, ಇಂತಹ ವ್ಯಕ್ತಿಯನ್ನು ಸ್ವಾತಂತ್ರ್ಯ ರಥದಲ್ಲಿ ಫೋಟೋ ಹಾಕಿರುವುದು ತಪ್ಪು ಈ ಹಿನ್ನಲೆ ಚಿತ್ರ ಹಾಕಲು ಆನುಮತಿ ನೀಡಿದ ಗ್ರಾಮಪಂಚಾಯತ್ ಪಿಡಿಒ ವಿರುದ್ಧ ಕೇಸು ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಮಾತನಾಡಿದ ಎಸ್.ಡಿ.ಪಿ.ಐ ಮುಖಂಡ ಶಾಫಿ ಬೆಳ್ಳಾರೆ ಕಬಕ ಗ್ರಾಮಪಂಚಾಯತ್ ಪಿಡಿಒ ಅವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.

Leave a Comment

Your email address will not be published. Required fields are marked *