Ad Widget .

ಮತ್ತೆ ಕಿರುತೆರೆಯತ್ತ ಮುಖ ಮಾಡಿದ ಉಮಾಶ್ರೀ – ಶುರುವಾಗ್ತಿದೆ ‘ಪುಟ್ಟಕ್ಕನ ಮಕ್ಕಳು’

Ad Widget . Ad Widget .

ಕನ್ನಡ ಚಿತ್ರರಂಗ ಎಂದೂ ಮರೆಯಲಾಗದ ಹಲವು ಪಾತ್ರಗಳಲ್ಲಿ ನಟಿಸಿರುವ ಉಮಾಶ್ರಿ ಇದೀಗ ಮತ್ತೆ ಕಿರುತೆರೆಗೆ ಬಂದಿದ್ದಾರೆ. ಹಿರಿತೆರೆಯಲ್ಲಿ ಪುಟ್ಮಲ್ಲಿಯಾಗಿ ಈಗಾಗಲೇ ಮೋಡಿ ಮಾಡಿರುವ ಉಮಾಶ್ರೀ ಕಿರುತೆರೆಯಲ್ಲಿ ಪುಟ್ಟಕ್ಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Ad Widget . Ad Widget .

ಉಮಾಶ್ರೀ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದ್ದು ಕೆಲವೇ ದಿನಗಳಲ್ಲಿ ಧಾರಾವಾಹಿ ಪ್ರಸಾರ ಆರಂಭವಾಗಲಿದೆ.
ಧಾರಾವಾಹಿಯ ಕೇಂದ್ರ ಪಾತ್ರ ಉಮಾಶ್ರೀ ಅವರದ್ದೇ ಆಗಿರುತ್ತದೆ.

ಉಮಾಶ್ರೀಗೆ ಕಿರುತೆರೆ ಹೊಸದೇನೂ ಅಲ್ಲ ಈಗಾಗಲೇ ಹಲವು ಧಾರಾವಾಹಿಗಳಲ್ಲಿ ಉಮಾಶ್ರೀ ನಟಿಸಿದ್ದಾರೆ. ಆದರೆ ಬಹುದಿನಗಳಿಂದ ಕಿರುತುರೆಯಿಂದ ದೂರವೇ ಉಳಿದಿದ್ದ ಉಮಾಶ್ರೀ ಇದೀಗ ಮತ್ತೆ ಕಿರುತೆರೆಗೆ ಕಾಲಿಟ್ಟಿದ್ದಾರೆ. ಕಿರುತೆರೆಯ ಯಶಸ್ವಿ ನಿರ್ದೇಶಕ ಆರೂರು ಜಗದೀಶ್ ನಿರ್ದೇಶನದ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’ ಉಮಾಶ್ರೀ ನಟಿಸುತ್ತಿದ್ದಾರೆ ಎಂಬುದರ ಹೊರತಾಗಿ ಇನ್ನೂ ಕೆಲವು ಕಾರಣಗಳಿಗೆ ಗಮನ ಸೆಳೆದಿದೆ.

ಉಮಾಶ್ರೀ ಅಭಿನಯದ ‘ಪುಟ್ಟಕ್ಕನ ಮಕ್ಕಳು’ ಹೊಸ ಧಾರಾವಾಹಿಯ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದ್ದು, ಪ್ರೋಮೊ ಪ್ರಕಾರ ಗಂಡು ಹಡೆಯಲಿಲ್ಲವೆಂದು ಪುಟ್ಟಕ್ಕನನ್ನು ಗಂಡ ಬಿಟ್ಟು ಹೋಗಿದ್ದಾನೆ. ಮೂವರು ಹೆಣ್ಣು ಮಕ್ಕಳನ್ನು ಒಬ್ಬಳೇ ಬೆಳೆಸಿ ಸಾಕಿದ್ದಾಳೆ ಪುಟ್ಟಕ್ಕ. ಈಕೆಗೆ ಮಕ್ಕಳ ಮೇಲೆ ಇನ್ನಿಲ್ಲದ ಪ್ರೇಮ. ಹೋಟೆಲ್ ನಡೆಸುತ್ತಾ ಮಕ್ಕಳನ್ನು ಸಾಕುತ್ತಿರುವ ಪುಟ್ಟಕ್ಕನಿಗೆ ಎದುರಾಗುವ ಸಮಸ್ಯೆಗಳೇನೂ, ಮಕ್ಕಳು ಪಟ್ಟಕ್ಕನನ್ನು ಆಕೆಯಷ್ಟೆ ಪ್ರೀತಿಸುತ್ತಾರಾ? ಇತ್ಯಾದಿಗಳು ಧಾರಾವಾಹಿಯ ಕತೆ ಎಳೆಗಳಾಗಿವೆ.

Leave a Comment

Your email address will not be published. Required fields are marked *