ಸುಳ್ಯ: ಇಲ್ಲಿನ ಐವರ್ನಾಡು ಹೈಸ್ಕೂಲು ಸಮೀಪ ಬೈಕಿನಿಂದ ಬಿದ್ದ ಮಹಿಳೆಯೋರ್ವರು ಮೃತಪಟ್ಟ ಘಟನೆ ಆ.16ರಂದು ನಡೆದಿದೆ.
ಮೃತರನ್ನು ಎಡಮಂಗಲದ ದೇವಸ್ಯ ವಿನೋದ ಶಶಿಧರ್(47) ಎಂದು ಗುರುತಿಸಲಾಗಿದೆ. ಇವರ ಮಗನಾದ ನಿಖಿಲ್ ಜೊತೆ ವಿನೋದರ ತಾಯಿಮನೆಗೆ ಹೋಗುತ್ತಿದ್ದರು. ಐವರ್ನಾಡು ಹೈಸ್ಕೂಲು ಸಮೀಪ ತಲುಪಿದಾಗ ಮಳೆ ಬಂದ ಕಾರಣ ವಿನೋದೆವರು ಕೊಡೆ ಬಿಡಿಸಲೆತ್ನಿಸಿದ್ದಾರೆ. ಈ ವೇಳೆ ಗಾಳಿಯ ರಭಸಕ್ಕೆ ಅವರು ನಿಯಂತ್ರಣ ಕಳೆದುಕೊಂಡು ರಸ್ತೆಗೆಸೆಯಲ್ಪಟ್ಟಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳೀಯರು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ತಲೆಗೆ ತೀವ್ರ ತರಹದ ಏಟು ತಗುಲಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಆ. 16 ರಂದು ನಿಧನರಾದರು.
ಮೃತರು ಪತಿ ಶಶಿಧರ್ ದೇವಸ್ಯ, ಪುತ್ರ ನಿಕಿಲ್, ಪುತ್ರಿ ವಿನುತಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.