Ad Widget .

ಕಾಂಡೋಮ್, ಕಾಪರ್ ಟಿ‌ ಗೆ ಗುಡ್ ಬೈ| ಇನ್ಮುಂದೆ ಬರಲಿದೆ ಹೊಸ ಮದ್ದು|

Ad Widget . Ad Widget .

ಸದ್ಯ ಗರ್ಭನಿರೋಧಕವಾಗಿ ಕಾಂಡೋಮ್, ಕಾಪರ್ ಟಿ ಸೇರಿದಂತೆ ಅನೇಕ ವಿಧಾನಗಳನ್ನು ಗರ್ಭನಿರೋಧಕವಾಗಿ ಬಳಸಲಾಗುತ್ತಿದೆ. ಆದರೆ ಶೀಘ್ರದಲ್ಲಿಯೇ ಇದೆಲ್ಲದಕ್ಕೂ ಬ್ರೇಕ್ ಬೀಳಲಿದೆ. ದೇಹದಲ್ಲಿ ಕಂಡುಬರುವ ವಿಶೇಷ ರೀತಿಯ ಪ್ರತಿಕಾಯದಿಂದ ಹೊಸ ಔಷಧಿ ಸಿದ್ಧವಾಗಲಿದೆ. ಇದು ಅನಗತ್ಯ ಗರ್ಭಧಾರಣೆಯನ್ನು ತಡೆಯಲು ನೆರವಾಗಲಿದೆ.

Ad Widget . Ad Widget .

ಈ ಪ್ರತಿಕಾಯವು ಗಂಡು ಮತ್ತು ಹೆಣ್ಣು ಇಬ್ಬರಲ್ಲೂ ಕಂಡುಬರುತ್ತದೆ. ವಿಜ್ಞಾನಿಗಳ ಪ್ರಕಾರ, ಈ ಪ್ರತಿಕಾಯಗಳು ಒಂದು ರೀತಿಯಲ್ಲಿ ವೀರ್ಯವನ್ನು ಬೇಟೆಯಾಡುತ್ತವೆ. ವೀರ್ಯವು ದೇಹದ ಅನಗತ್ಯ ಭಾಗವನ್ನು ಪ್ರವೇಶಿಸುವುದನ್ನು ತಡೆಯುವಲ್ಲಿ ಇದು ಪರಿಣಾಮಕಾರಿಯಾಗಿದೆ.

ಗರ್ಭನಿರೋಧಕ ಔಷಧವನ್ನು ದೇಹದಲ್ಲಿರುವ ಪ್ರತಿಕಾಯಗಳಿಂದ ತಯಾರಿಸಲಾಗುತ್ತಿದೆ. ಅದಕ್ಕೆ ಕೆಲ ಪ್ರತಿಜನಕಗಳನ್ನು ಸೇರಿಸಲಿದ್ದಾರೆ. ಇದು ವೀರ್ಯ ವಿರೋಧಿ ಪ್ರತಿಕಾಯಗಳ ಸಾಮರ್ಥ್ಯವನ್ನು 10 ಪಟ್ಟು ಹೆಚ್ಚಿಸಲಿದೆ.
ಮಾರುಕಟ್ಟೆಗೆ ಈ ಮಾತ್ರೆ ಯಾವಾಗ ಬೇಕಾದ್ರೂ ಬರಬಹುದು. ಅಂತಿಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. ಸದ್ಯ ಗರ್ಭ ನಿರೋಧಕವಾಗಿ ಇದು ಶೇಕಡಾ 99.9ರಷ್ಟು ಪರಿಣಾಮಕಾರಿಯಾಗಿದೆ. ಸದ್ಯ ಈ ಔಷಧಿಯನ್ನು ಕುರಿಗಳ ಮೇಲೆ ಪ್ರಯೋಗ ಮಾಡಲಾಗಿದೆ. ಇನ್ನೂ ಮಾನವರ ಮೇಲೆ ಈ ಪ್ರಯೋಗ ನಡೆದಿಲ್ಲ.

Leave a Comment

Your email address will not be published. Required fields are marked *