Ad Widget .

ಪುತ್ತೂರು: ಮನೆಗೆ ನುಗ್ಗಿ ಒಂಟಿ ಮಹಿಳೆಗೆ ಹಲ್ಲೆ ಆರೋಪ: ಆಸ್ಪತ್ರೆಗೆ ದಾಖಲು

ಪುತ್ತೂರು: ತಡ ರಾತ್ರಿ ಯುವಕರ ತಂಡವೊಂದು ಮನೆಗೆ ಅಕ್ರಮವಾಗಿ ನುಗ್ಗಿ ಮಹಿಳೆಯೋರ್ವರಿಗೆ ಹಲ್ಲೆ ಮಾಡಿದ ಆರೋಪದ ಹಿನ್ನಲೆ ಮಹಿಳೆ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಗಾಳಿಮುಖದ ದಿ. ರಾಜು ಮಾದಿಗ ಎಂಬವರ ಪತ್ನಿ ಆಶಾ (35) ಎಂಬವರು ಸಂತ್ರೆಸ್ತೆ. ಖಾದರ್, ಮಹಮ್ನದ್, ಶಾಬೀರ್, ಶಾಪಿ, ಅಶ್ರಪ್ ಕೊಟ್ಯಾಡಿ ಪ್ರಕರಣದ ಆರೋಪಿಗಳು. `ನಾನು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದು ಆ.16ರ ರಾತ್ರಿ ಊಟಕ್ಕೆ ಕೂತ್ತಿದ್ದೆ. ಈ ವೇಳೆ ಗಾಳಿಮುಖದ ಯುವಕರು ಸೇರಿದಂತೆ ಸುಮಾರು 20 ಮಂದಿಯ ತಂಡವೊಂದು ಅಕ್ರಮವಾಗಿ ನಮ್ಮ ಮನೆಗೆ ನುಗ್ಗಿ ನನ್ನ ಕೈ ಹಿಡಿದು ಎಳೆದಿದ್ದಾರೆ. ಈ ವೇಳೆ ಮನೆಯಲ್ಲಿದ್ದ ನನ್ನ ಮಗ ಗುರುಪ್ರಸಾದ್, ಅಕ್ಕನ ಮಗ ಸೀತಾರಾಮ, ಅಳಿಯ ಚಂದ್ರಶೇಖರ್ ಎಂಬವರು ತಡೆಯಲು ಬಂದಾಗ ಅವರನ್ನು ದೂಡಿ ಹಾಕಿದ್ದಲ್ಲದೆ ಅವರಿಗೆ ಹಲ್ಲೆ ನಡೆಸಿದ್ದಾರೆ.’ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಇನ್ನೂ ಘಟನೆ ಬಳಿಕ ಸಂತ್ರಸ್ತೆಗೆ ಆಸ್ಪತ್ರೆಗೆ ಹೋಗಲು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ನೆರವಾಗಿದ್ದಾರೆ.

Ad Widget . Ad Widget . Ad Widget .

ಪೊಲೀಸರಿಂದಲೇ ಹಲ್ಲೆ ಆರೋಪ:
ನಮ್ಮ ಮನೆಗೆ ಅಕ್ರಮವಾಗಿ ನುಗ್ಗಿದ ಅನ್ಯಕೋಮಿನ ತಂಡ ದಾಂದಲೆ ನಡೆಸಿದಾಗ ರಕ್ಷಣೆ ಕೊಡಬೇಕಾಗಿದ್ದ ಪೊಲೀಸರೆ ನನ್ನ ಅಳಿಯನಿಗೆ ಅಲ್ಲೆ ನಡೆಸಿದ್ದಾರೆ. ಅಕ್ರಮವಾಗಿ ಮನೆಗೆ ನುಗ್ಗಿ ನನ್ನ ಕೈ ಹಿಡಿದು ಎಳೆದ ತಂಡಕ್ಕೆ ಬೆದರಿಸಲು ಅಳಿಯ ಕತ್ತಿ ಹಿಡಿದು ಎಚ್ಚರಿಕೆ ನೀಡಿದ್ದ. ಕತ್ತಿ ಹಿಡಿದಿರುವುದನ್ನು ನೆಪವಾಗಿರಿಸಿ ನನ್ನ ಅಳಿಯನಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ನಾಯಿ ಕಚ್ಚಿದ ವಿಚಾರ:
ಆಶಾ ಅವರ ಮನೆಯ ಸಾಕು ನಾಯಿ ಬೀದಿಯಲ್ಲಿ ಓಡಾಡುತ್ತಿದ್ದವರಿಗೆ ಕಚ್ಚಿದ್ದ ಕಾರಣ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ಪೊಲೀಸರು ಕೂಡಾ ಆಶಾ ಅವರಿಗೆ ಸಾಕು ನಾಯಿಯನ್ನು ಬೀದಿಗೆ ಬಿಡದಂತೆ ಸೂಚಿಸಿದರೆನ್ನಲಾಗಿದೆ. ಆದರೆ ಸಾಕು ನಾಯಿ ಮತ್ತೆ ಬೀದಿಯಲ್ಲಿ ಓಡಾಡುವ ಜನರಿಗೆ ತೊಂದರೆ ಕೊಡುತ್ತಿದೆ ಎಂಬ ಆರೋಪ ವ್ಯಕ್ತವಾಗಿತ್ತು. ಆದರೆ ನಮ್ಮ ಮನೆಯ ಸಾಕು ನಾಯಿಯನ್ನು ನಾವು ಕಟ್ಟಿ ಹಾಕಿ ಸಾಕುತ್ತಿದ್ದೆವೆ. ಆದರೆ ಇತರ ಬೀದಿ ನಾಯಿಗಳನ್ನು ನೋಡಿ ನಮ್ಮ ನಾಯಿ ಎಂದು ತಪ್ಪು ತಿಳುವಳಿಕೆಯಿಂದ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆಂದು ಆಶಾ ಅವರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *